VIDEO : ನಾ ಆವಾಗ್ಲೆ ಹೆದರಿಲ್ಲ, ಇನ್ನು ಈಗ ಹೆದರ್ತಿನಾ?! ಸಾ.ರಾ ಮಹೇಶ್ – ರಾಜೀವ್ ಮೇಲೆ ನೇರ ಆರೋಪ ಮಾಡಿದ ರೋಹಿಣಿ ಸಿಂಧೂರಿ.

ನಿಷ್ಟಾವಂತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಮೈಸೂರಿನಿಂದ ಎತ್ತಂಗಡಿ ಮಾಡಿದ ಮೇಲೂ ಬೆಂ’ಕಿ ಇನ್ನೂ ಧ’ಗದ’ಗಿಸುತ್ತಲೇ ಇದೆ. ರಾಜಕಾರಣಿಗಳು ಹಾಗೂ ಇತರರು ಸೇರಿ ಅವರನ್ನು ಮೈಸೂರಿನಿಂದ ವರ್ಗ ಮಾಡಿಸಿದರಾದರೂ ಅವರ ಬಗೆಗಿನ ಭ’ಯ ಇನ್ನೂ ಹೋಗಿಲ್ಲ. ಅವರು ಏನೋ ಮಾಡ್ತಾರೆ ಏನೋ ಮಾಡ್ತಾರೆ ಅನ್ನೋ ಆತಂಕ ರಾಜಕಾರಣಿಗಳ ನೆಮ್ಮದಿ ಕಿತ್ಗೊಂಡಿದೆ. ಒಬ್ಬ ಮಹಿಳಾ ಅಧಿಕಾರಿ ರಾಜಕಾರಣಿಗಳಿಗೆ ಈಪಾಟಿ ಏ’ಟು ಕೊಟ್ಟಿರುವುದು ಕರ್ನಾಟಕದ ಇತಿಹಾಸದಲ್ಲಿ ಬಹುಶ ಇದೇ ಮೊದಲು ಅನಿಸುತ್ತದೆ.

ಅವರ ವಿರುದ್ದ ಮೊದಲಿನಿಂದಲೂ ಅದೇನೇನೋ ಸಂ’ಚು ಮಾಡುತ್ತಾ ಬಂದರು ಎಂಬುದು ನಿಮಗೆ ಗೊತ್ತೇ ಇದೆ. ಇದರಲ್ಲಿ ಆ ಪಕ್ಷ ಈ ಪಕ್ಷ ಅಂತ ಅಲ್ಲ, ಎಲ್ಲ ಪಕ್ಷದ ಭ್ರಷ್ಟರೂ ಸೇರಿ ಅವರ ವಿರುದ್ಧ ಕ’ತ್ತಿ ಮ’ಸೆತೊಡಗಿದರು. ಅದರಲ್ಲೂ ಸಂಸದ ಪ್ರತಾಪ್ ಸಿಂಹ ರೋಹಿಣಿಯವರ ವಿ’ರು’ದ್ಧ ದ್ವನಿಯತ್ತಿದ್ದು ನೋಡಿ ಸ್ವತಃ ಅವರ ಅಭಿಮಾನಿಗಳೇ ಬೇಸರಗೊಂಡಿದ್ದರು.

“ಅಣ್ಣಾ ನಿಮಗೆ ಲೆಕ್ಕ ಬೇಕಾದ್ರೆ ಅವರನ್ನೇ ನೇರವಾಗಿ ಕೇಳಿ, ಪ್ರೆಸ್ ಮೀಟ್ ಯಾಕೆ?” ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹರವರಿಗೆ ಕಾಮೆಂಟ್ ಮಾಡತೊಡಗಿದರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಖ್ಯೆಯ ಜನ ರೋಹಿಣಿ ಸಿಂಧೂರಿಯವರ ಪರ ನಿಂತರು. ನಾವು ನಿಮ್ಮ ಜೊತೆಗಿದ್ದೇವೆ ಎಂದು ಬೆಂಬಲಿಸಿದರು.

ಮೊದಲು ಚಾಮರಾಜನಗರ ದುರಂತದಲ್ಲಿ ಸಿಲುಕಿಸಿ ಹಣಿಯಲು ನೋಡಿದರು, ಯಾವುದೋ ವಾಟ್ಸಪ್ ಚಾಟ್ ವೈರಲ್ ಮಾಡಿ ಹೆಸರು ಕೆಡಿಸಲು ಪ್ರಯತ್ನ ಮಾಡಿದರು. ನಂತರ ಸಿಂಧೂರಿಯವರ ಮನೆ ಕಂಪೌಂಡಿನಲ್ಲಿದ್ದ ಸ್ವಿಮ್ಮಿಂಗ್ ಪೂಲ್ ವಿಚಾರ ತಗೆದು ಇಮೇಜಿಗೆ ಏಟು ಕೊಡಲು ನೋಡಿದರು. ಆದರೆ ಅವೆಲ್ಲದರಲ್ಲೂ ಫೇಲ್ ಆದರು.

ನಂತರ ಲೆಕ್ಕದ ಕೇಳುವ ಆಟ ಸುರುವಾಯಿತು. ಶಾಸಕರು – ಸಂಸದರು ಹಾದಿ ಬೀದಿಯಲ್ಲೆಲ್ಲ ಲೆಕ್ಕ ಕೇಳಿದರು. ನೇರವಾಗಿ ಡಿ.ಸಿ ಆಫೀಸಿಗೇ ಹೋಗಿ ಕೇಳಬಹುದಿತ್ತು, ಆದರೆ ಪತ್ರಕರ್ತರ ಮುಂದೆ ಕೇಳಿದರು! ಅದರಲ್ಲೂ ಏನೂ ಮಾಡಿಕೊಳ್ಳಲಾಗಲಿಲ್ಲ. ಆಗ ಶಿಲ್ಪಾ ನಾಗ್ ರವರು ಎದ್ದು ನಿಂತರು. ಒಟ್ಟಾರೆಯಾಗಿ ಹಲವು ಜನರ ನಿರಂತರ ಪರಿಶ್ರಮದ ಫಲವಾಗಿ ಕೊನೆಗೂ ರೋಹಿಣಿಯವರನ್ನು ಅಲ್ಲಿಂದ ವರ್ಗ ಮಾಡಿಸಿದರರು.

ಅಲ್ಲಿಂದ ದಾರ್ಮಿಕ ದತ್ತಿ ಇಲಾಖೆಗೆ ಹೋದ ಸಿಂಧೂರಿಯವರನ್ನು ಅಲ್ಲೂ ಸುಮ್ಮನಿರಲು ಬಿಡುತ್ತಿಲ್ಲ. ಚಾಮರಾಜನಗರ ದುರಂತದ ಬಗ್ಗೆ ಮತ್ಯಾವುದೊ ಅಡಿಯೊ ರಿಲೀಸ್ ಮಾಡಿದರು. ಅದು ಟುಸ್ ಆಯಿತು. ಮತ್ತೆ ನಿನ್ನೆ ಡಿಸಿ ಮನೆಯ ಕರೆಂಟ್ ಬಿಲ್ ಬಗ್ಗೆ ಮಾನ್ಯ ಸಾ.ರಾ ಮಹೇಶ್ ಮಾತಾಡಿದ್ದಾರೆ!

ಯಾಕೆ ಅವರಿಗೆ ಅಷ್ಟೊಂದು ಭಯ ಕಾಡ್ತಿದೆ ಅಂತ ಸಾಮಾಜಿಕ ಮಾಧ್ಯಮದಲ್ಲಿ ಜನ ಪ್ರಶ್ನೆ ಕೇಳುತ್ತಿದ್ದಾರೆ. ರೋಹಿಣಿಯವರಿಗೆ ಸಿಗುತ್ತಿರುವ ಜನಬೆಂಬಲ ನೋಡಿ ಸಹಿಸಿಕೊಳ್ಳಲಾರದೆ ಏನೇನೋ ಮಾಡಿ ಅವರ ಇಮೇಜ್ ಹಾಳು ಮಾಡಲು ನೋಡುತ್ತಾರಾದರೂ, ಜನರ ಮುಂದೆ ಮತ್ತೊಂದಿಷ್ಟು ನಗೆಪಾಟಿಲಿಗೀಡಾಗುತ್ತಿದ್ದಾರೆ.

ಈ ಕುರಿತು ಪತ್ರಕರ್ತರೊಬ್ಬರ ಜೊತೆ ರೋಹಿಣಿಯವರು ಮಾತಾಡಿರುವ ಅಡಿಯೊ ಕ್ಲಿಪ್ ಮೇಲಿದೆ. ಅವರು ಸಾರಾ ಮಹೇಶ್ ಮತ್ತು ಮೂಡಾದ ರಾಜಿವ್ ವಿರುದ್ದ ನೇರ ಹೋರಾಟ ಸುರು ಮಾಡಿದ್ದರು, ಭೂಮಾಫಿಯಾದ ಬ’ಗ್ಗು ಬ’ಡಿಯಲು ನಿರಂತರ ಪ್ರಯತ್ನ ನಡೆಸಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅವರ ವಿ’ರು’ದ್ಧದ ಹೋರಾಟ ಹಾಗೂ ಅವರ ವರ್ಗಾವಣೆ ಯಾಕಾಯಿತು ಎಂಬುದು ಕೂಡ ಜನರಿಗೆ ಈಗೀಗ ಸ್ಪಷ್ಟವಾಗುತ್ತಿದೆ. ಭ್ರ’ಷ್ಟಾ’ಚಾರ ಮಾಡಲೇ ಬೇಕು ಅಂತ ತಯಾರಾದವರು ಏನು ಬೇಕಾದರೂ ಮಾಡುತ್ತಾರೆ ಹಾಗೂ ಪಕ್ಷಭೇದ ಇರುವುದಿಲ್ಲ ಎಂಬುದು ಕೂಡ ಜನರಿಗೆ ಮನವರಿಕೆಯಾಯಿತು. ಮೇಲಿನ ವಿಡಿಯೊದಲ್ಲಿನ ಅಡಿಯೊ ಕೇಳಿ, ನಿಮಗೆ ಏನನಿಸುತ್ತೊ ಕಾಮೆಂಟ್ ಮಾಡಿ.
-Team Infotrend