ಸಂಬಂಧಿಕರು ಯಾರೂ ಇಲ್ಲದ ಈ ಅಜ್ಜಿ ತನ್ನಷ್ಟಕ್ಕೆ ತಾನು ಬರ್ಥ್ ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಳು, ಮುಂದೆ ನಡೆದದ್ದೇನು ನೋಡಿ ವೀಡಿಯೋ!!!

ಜೀವನದಲ್ಲಿ ನಾವೆಷ್ಟು ಗಳಿಕೆ ಮಾಡಿದ್ದೇವೆ ಎಂಬುದು ನಮ್ಮ ಕೊನೆಯ ಕ್ಷಣದಲ್ಲಿ ಗೊತ್ತಾಗುತ್ತೆ. ಇಂದು ಪ್ರತಿಯೊಬ್ಬ ವ್ಯಕ್ತಿ ಹಣದ ಹಿಂದೆ ಬೆನ್ನು ಹತ್ತಿ ಅದನ್ನು ಪಡೆದುಕೊಳ್ಳುವ ಸಲುವಾಗಿ ಹಗಲು ರಾತ್ರಿ ಕಷ್ಟ ಪಡುತ್ತಾನೆ. ಇದು ಸತ್ಯವಾದ ಸಂಗತಿ ಸಹ. ಏಕೆಂದರೆ ಇಂದು ಮನುಷ್ಯರನ್ನು ಅವರ ವ್ಯಕ್ತಿತ್ವದಿಂದ ಗುರುತಿಸುವದಿಲ್ಲ ಹೊರತಾಗಿ ಅವರ ಬಳಿಯಲ್ಲಿದ್ದ ಸಂಪತ್ತಿನಿಂದ ಗುರುತ್ತಿಸುತ್ತಾರೆ. ಆ ವ್ಯಕ್ತಿ ಎಷ್ಟೇ ಒಳ್ಳೆಯವ ನಾಗಿದ್ದರೂ ಆತನ ಬಳಿಯಲ್ಲಿ ಹಣ ವಿರದಿದ್ದರೆ ಸಮಾಜದ ಜನರು ಆತನನ್ನು ಕೀಳು ದೃಷ್ಟಿಯಿಂದ ಕಾಣುತ್ತಾರೆ, ಅದೇ ಒಬ್ಬ ವ್ಯಕ್ತಿ ಕೆಟ್ಟವನಿದ್ದರೂ ಸಹ ಆತನ ಬಳಿ ಬೇಕಾದಷ್ಟು ಹಣ ವಿದ್ದರೆ ಆತನನ್ನು ಉನ್ನತ ವ್ಯಕ್ತಿಯಹಾಗೆ ನೋಡುತ್ತಾರೆ. ಈ ಸಂಗತಿ ಕಹಿ ಅನಿಸಿದರೂ ಇದೆ ಸತ್ಯ.

ಇಂದು ಸಂಬಂಧಗಳು ನಿಂತಿರುವುದು ಕೇವಲ ಹಣ, ಅಂತಸ್ತಿನ ಮೇಲೆ. ನಿಮ್ಮ ಬಳಿ ಬಹಳಷ್ಟು ಸಂಪತ್ತು ಇದ್ದರೆ ನಿಮಗೆ ಅಪರಚಿತ ವ್ಯಕ್ತಿಗಳು ಸಹ ಸಂಬಂಧಿಕರಾಗುತ್ತಾರೆ, ಆದರೆ ಅದೇ ನಿಮ್ಮ ಬಳಿ ಚೂರು ಸಹ ಹಣ ಸಂಪತ್ತು ಇರದಿದ್ದರೆ ನಿಮ್ಮ ಸಂಬಂಧಿಕರೆ ಅಪರಚಿತರಾಗುತ್ತಾರೆ. ಇಂದಿನ ಕಾಲದ ಜೀವನದಲ್ಲಿ ಮನುಷ್ಯ ಕ್ಕಿಂತ ಹಣಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಹಣದ ಸಲುವಾಗಿ ಎಷ್ಟೋ ಸಂಬಂಧಗಳು ದೂರ ವಾಗುತ್ತಿರುವ ಉದಾಹರಣೆಗಳು ಸಮಾಜದಲ್ಲಿ ನಾವು ಕಾಣಬಹುದು.

ಪ್ರಸ್ತುತವಾಗಿ ಇಂತಹ ಸಂಬಂಧಕ್ಕೆ ಅನುಸಾರವಾಗಿ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಯಾಗುತ್ತಿದೆ. ಈ ವೀಡಿಯೋದಲ್ಲಿ ಒಬ್ಬ ವೃದ್ಧ ಮಹಿಳೆ ಒಂದು ಶಾಪ್ ನಲ್ಲಿ ಬಂದು ತನ್ನಷ್ಟಕ್ಕೆ ತಾನು ಕುಳಿತುಕೊಂಡು ಒಂದು ಕೇಕ್ ಆರ್ಡರ್ ಮಾಡುತ್ತಾಳೆ. ಅಲ್ಲಿದ್ದ ಸಿಬ್ಬಂದಿ ಈ ಅಜ್ಜಿಯ ಆರ್ಡರ್ ನಂತೆ ಕೇಕ್ ರೆಡಿ ಮಾಡಿ ಟೇಬಲ್ ಮೇಲೆ ತಂದಿಡುತ್ತಾರೆ. ಆಗ ಅಜ್ಜಿ ಕೇಕ್ ಮೇಲೆ ಒಂದು ಮೇಣದಬತ್ತಿಯನ್ನು ಹಚ್ಚಿ ಮತ್ತೆ ಅದೇ ಮೇಣ ಬತ್ತಿಯನ್ನು ತನ್ನ ಬಾಯಿಯಿಂದ ಊದುವ ಮುಖಾಂತರ ತನ್ನ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುತ್ತಾಳೆ.

ಇದನ್ನು ನೋಡಿದ ವೇಟರ್ ತಕ್ಷಣವೇ ಈ ಅಜ್ಜಿಗೆ ಯಾರೂ ಸಂಬಂಧಿಕರು ಇಲ್ಲದಿರಬಹುದು ಹಾಗಾಗಿ ಈ ಅಜ್ಜಿ ತನ್ನಷ್ಟಕ್ಕೆ ತಾನೇ ಬರ್ಥ್ ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾಳೆ ಎಂದುಕೊಂಡು ಈಕೆ ಸಹ ಅಜ್ಜಿಯ ಎದುರುಗಡೆ ನಿಂತು ಚಪ್ಪಾಳೆ ತಟ್ಟುತ್ತ ಹ್ಯಾಪಿ ಬರ್ತ್ ಡೇ ಹೇಳಲು ಶುರು ಮಾಡುತ್ತಾಳೆ. ಇದನ್ನು ಗಮನಿಸಿದ ಅಲ್ಲಿದ್ದ ಜನರು ಸಹ ಅಜ್ಜಿಯನ್ನು ಬರ್ಥ್ ಡೇ ವಿಶ್ ಮಾಡುತ್ತಾರೆ. ಆಗ ಅಜ್ಜಿಯ ತನ್ನ ಏಕಾಂತ ದೂರವಾಗಿ ಕಣ್ಣಲ್ಲಿ ನೀರು ಬರುತ್ತೆ. ಅಪರಿಚಿತ ವ್ಯಕ್ತಿಗಳು ತನ್ನ ಬರ್ಥ್ ಡೇ ಸೆಲೆಬ್ರೇಟ್ ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ತುಂಬಾ ಭಾವುಕಳಾಗುತ್ತ ಅವರನ್ನು ಧನ್ಯವಾದಗಳು ತಿಳಿಸುತ್ತಾಳೆ.

ನೋಡಿ ವೀಡಿಯೋ

ಮನಮುಟ್ಟುವ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ sachin_official_0 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.