ನಿಮಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಕೂಡ ಭಯಪಡುವರು: ಊರಿನ ಯಾವ ಕೆಲಸಕ್ಕೆ ಎಷ್ಟು ಹಣ ಬಂದಿದೆ ಅಂತ ಮೊಬೈಲ್ ನಲ್ಲೇ ತಿಳಿದುಕೊಳ್ಳಿ

Online EGramSwaraj: ಯಾವುದೇ ಗ್ರಾಮದ ಅಭಿವೃದ್ಧಿ ಆ ಊರಿನ ಸರಪಂಚ ಹಾಗೂ ಸದಸ್ಯರ ಮೇಲೆ ಅವಲಂಬಿಸಿರುತ್ತದೆ. ಒಬ್ಬ ಒಳ್ಳೆಯ ಸಮಾಜ ಸುಧಾರಣೆ ಮಾಡುವಂತ ಮತ್ತು ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿ ಊರಿನ ಸರಪಂಚ ಆದರೆ ಆ ಊರಿನ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ. ಊರಲ್ಲಿಯ ಯಾವುದೇ ಅಭಿವೃದ್ಧಿಯ ಕೆಲಸ ಮಾಡುವ ಸಲುವಾಗಿ ಸರಕಾರದಿಂದ ಗ್ರಾಮ ಪಂಚಾಯಿತಿಗೆ ನಿಧಿಯನ್ನು ನೀಡಲಾಗುತ್ತದೆ. ಸಿಕ್ಕ ನಿಧಿಯನ್ನು ಸರಪಂಚರು ಉಪಯೋಗ ಮಾಡಿಕೊಂಡು ಊರಿನ ಅಭಿವೃದ್ಧಿಯ ಕಾರ್ಯ ಮಾಡುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ.

ಆದರೆ ಯಾವ ಕೆಲಸಕ್ಕಾಗಿ ಎಷ್ಟು ಹಣ ಅಂದರೆ ನಿಧಿ ದೊರೆತಿದೆ ಎಂಬುದು ಮಾತ್ರ ಊರಲ್ಲಿಯ ನಾಗರೀಕರಿಗೆ ಗೊತ್ತೇ ಆಗುವದಿಲ್ಲ. ಆದ್ದರಿಂದ ಇಂದು ನಾವು ನಿಮಗೆ ಊರಿನ ಯಾವ ಕೆಲಸಕ್ಕಾಗಿ ಎಷ್ಟು ನಿಧಿ ಬಂದಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವದು ಹೇಗೆ ಎಂಬುದರ ಕುರಿತು ತಿಳಿಸಲಿದ್ದೇವೆ. ಆದ್ದರಿಂದ ಗ್ರಾಮಗಳ ಯೋಜನೆಗಳಿಗೆ ಬಂದಿರುವ ಹಣದ ಮಾಹಿತಿ ಪಡೆದು ಜನಸಾಮಾನ್ಯರು ಹಾಗೂ ನಾವೂ ಕೂಡ ಆ ಯೋಜನೆಗಳ ಲಾಭ ಪಡೆಯಬಹುದು.

ಗ್ರಾಮದ ಯಾವ ಕೆಲಸಕ್ಕಾಗಿ ಎಷ್ಟು ನಿಧಿ ಸಿಕ್ಕಿದೆ? ಇಲ್ಲಿ ನೋಡಿ

ಊರಿನಲ್ಲಿ ಅನೇಕ ಕೆಲಸಗಳು ಇವೆ ಅವುಗಳಲ್ಲಿ ಸುಧಾರಣೆ ಮಾಡುವದು ತುಂಬಾನೇ ಅತ್ಯವಶ್ಯಕವಾಗಿದೆ, ಅಂದರೆ ಊರಲ್ಲಿಯ ರಸ್ತೆ ಸುಧಾರಣೆ, ನೀರಿನ ವ್ಯವಸ್ಥೆ ಮತ್ತು ಲೈಟ್ ವ್ಯವಸ್ಥೆ ಇವೆಲ್ಲ ಕೆಲಸಗಳಲ್ಲಿ ಸುಧಾರಣೆ ಮಾಡುವ ಸಲುವಾಗಿ ಸರಪಂಚರಿಗೆ ಸರಕಾರ ನಿಧಿ(Government funds) ಕಳುಹಿಸಲಾಗುತ್ತದೆ. ಊರಿನ ಕೆಲಸಕ್ಕಾಗಿ ಬಂದ ನಿಧಿಯ ಕುರಿತು ಮಾಹಿತಿ ಪಡೆಯುವ ಅಧಿಕಾರ ಪ್ರತಿಯೊಬ್ಬ ನಾಗರಿಕರಿಗೆ ಇರುತ್ತದೆ. ಆದರೆ ಅದೆಷ್ಟೋ ಜನರಿಗೆ ಈ ಮಾಹಿತಿ ಹೇಗೆ ಪಡೆಯುವದು ಎಂಬುದರ ಕುರಿತು ಗೊತ್ತೇ ಇರುವದಿಲ್ಲ. ಹೀಗಾಗಿ ಗ್ರಾಮದ ಅಭಿವೃದ್ಧಿಗಾಗಿ ಬಂದ ಹಣ ಸರಪಂಚ ಹಾಗೂ ಉಳಿದ ಸದಸ್ಯರ ಜೇಬು ಸೇರುತ್ತೆ.

ಗ್ರಾಮದಲ್ಲಿ ಇಂತಹ ವಂಚನೆಗಳನ್ನು ತಡೆಯಲು ಜನಸಾಮಾನ್ಯರು ಇಂದೇ ಎಚ್ಚೆತ್ತುಕೊಳ್ಳಬೇಕು, ಅದಕ್ಕಾಗಿ ಗ್ರಾ.ಪಂ.ನಲ್ಲಿ ಬಂದಿರುವ ಹಣದ ಬಗ್ಗೆ ಮಾಹಿತಿ ಪಡೆಯುವುದು ಹೇಗೆ ಎಂಬುದರ ಕುರಿತು ಇಂದು ನಾವು ತಿಳಿದುಕೊಳ್ಳುವರಿದ್ದೇವೆ.

ನಿಮ್ಮ ಗ್ರಾಮ ಗ್ರಾಮ ಪಂಚಯತಿಗೆ ಯಾವ ಕೆಲಸಕ್ಕಾಗಿ ಎಷ್ಟು ನಿಧಿ ಸಿಕ್ಕಿದೆ? ಇಲ್ಲಿ ಕ್ಲಿಕ್ ಮಾಡಿ