ಸಾವಿನ ದವಡೆಯಿಂದ ಕರುಳ ಬಳ್ಳಿಯನ್ನು ಅಕ್ಷರಶಃ ಕಸಿದು ರಕ್ಷಿಸಿಕೊಂಡ ಸೂಪರ್ ಮದರ್! ಮಗು ಇನ್ನೇನು ಕಾಳಿಂಗನ ದಂಶಕ್ಕೆ …
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ವಿಡಿಯೋ ಭರದಿಂದ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ತಕ್ಷಣ ಅಕ್ಷರಶಃ ಶಾಕ್ ಆಗುತ್ತದೆ. ಅಷ್ಟೊಂದು ಭಯದ ವಿಡಿಯೋ ಇದಾಗಿದೆ. ಪ್ರಸ್ತುತ ವೀಡಿಯೊದಲ್ಲಿಯ ದೃಶ್ಯ ನಿಜಕ್ಕೂ ಮೈಯನ್ನು ಥರಥರ ನಡುಗಿಸುತ್ತದೆ.
ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಮನೆಯ ಮುಂದಿರುವ ಮೆಟ್ಟಿಲಿನ ಕೆಳಗಿನಿಂದ ದೊಡ್ಡ ಕಾಳಿಂಗ ಸರ್ಪ ಒಂದು ನಿಧಾನವಾಗಿ ತೆವಳುತ್ತ ತೆವಳುತ್ತ ಹರಿಯುತ್ತಿರುವುದು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಂಡು ಬರುತ್ತದೆ. ಸರಿಯಾಗಿ ಅದೇ ಸಮಯಕ್ಕೆ ಮನೆಯಿಂದ ತಾಯಿ ಮತ್ತು ಮಗು ಯಾವುದೋ ಕೆಲಸಕ್ಕೆ ಹೊರಗೆ ಬೀಳುತ್ತಿದ್ದಾರೆ. ಇಬ್ಬರಿಗೂ ಆ ಹಾವು ಮೆಟ್ಟಿಲು ಕೆಳಗಿನಿಂದ ಸರಿಯುತ್ತಿರುವ ಕಾರಣ ಸ್ವಲ್ಪವೂ ಕಾಣಿಸುವದಿಲ್ಲ. ಹಾಗಾಗಿ ತಾಯಿ ಮತ್ತು ಮಗು ತಮ್ಮಷ್ಟಕ್ಕೆ ತಾವು ಸಹಜವಾಗಿ ಕಾಲು ಮೆಟ್ಟಿಲಿನ ಕೆಳಗೆ ಇಡುವವರಿದ್ದರು. ಆಗ ಮಗು ಮೊದಲು ಕಾಲು ಕೆಳಗೆ ಇಡುವಾಗ ಆ ಹೆಜ್ಜೆ ನೇರ ಸರ್ಪದ ತಲೆಯ ಮೇಲೆಯೇ ಇಟ್ಟು ಬಿಡುತ್ತಾನೆ ಎನ್ನುವಷ್ಟರಲ್ಲಿ ಹಾವು ಹಠಾತ್ ತನ್ನ ತಲೆಯನ್ನು ಬದಿಗೆ ಸರಿಸಿಕೊಂಡಿದೆ. ಈ ದೃಶ್ಯವನ್ನು ತಾಯಿ ನೋಡಿ ಒಮ್ಮೆಲೆ ಶಾಕ್ ಆಗಿದ್ದಾಳೆ. ಮಗು ಏನಾಯಿತು ಎಂದು ತಿರುಗಿ ಹಾವಿಗೆ ನೋಡದೆ ಅದರ ಕಡೆಗೆಯೇ ಸಹಜವಾಗಿ ಹೋಗಲು ಮುಂದಾದಾಗ ಹಾವು ಸಂಪೂರ್ಣವಾಗಿ ಕಚ್ಚಲು ತನ್ನ ಮೋಷನ್ ನಲ್ಲಿ ರೆಡಿಯಾಗುತ್ತಲೇ ಕ್ಷಣಾರ್ಧದಲ್ಲಿ ತಾಯಿ ಮಿಂಚಿನ ವೇಗದಲ್ಲಿ ಮಗುವಿಗೆ ತನ್ನೆಡೆಗೆ ಎಳೆದುಕೊಂಡು ಅಕ್ಷರಶಃ ಸಾವಿನ ದವಡೆಯಿಂದ ರಕ್ಷಿಸಿಕೊಂಡಿದ್ದಾಳೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಜೊತೆಗೆ ತಾಯಿ ಮತ್ತು ಮಗುವಿನ ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇಲ್ಲಿ ತಾಯಿಯು ‘ಸೂಪರ್ ಮಾಮ್’ ಆಗಿದ್ದಾಳೆ ಎಂದು ಕೆಲವರು ಶ್ಲಾಘಿಸಿದ್ದಾರೆ. ತಾಯಿ ಸ್ವಲ್ಪವೇ ಏನಾದರೂ ಸಮಯ ವ್ಯರ್ಥ ಮಾಡಿದ್ದರೆ ಅಲ್ಲಿ ಮಗುವಿನ ಕಥೆಯೇ ಬೇರೆಯಾಗಿರುತ್ತಿತ್ತು. ಪ್ರಸ್ತುತ ದೃಶ್ಯ ಮನೆಯ ಮುಂದಿರುವ CCTV ಯಲ್ಲಿ ಸೆರೆಯಾಗಿದೆ.