SBI ನಲ್ಲಿ ಅಕೌಂಟ್ ಇರುವ ಗ್ರಾಹಕರಿಗಾಗಿ ಅಲರ್ಟ್! ಫೆಬ್ರುವರಿ 1 ರಿಂದ ಬದಲಾಗಲಿದೆ ಈ ನಿಯಮ.
ನಿಮ್ಮ ಖಾತೆ SBI ನಲ್ಲಿ ಇದ್ದರೆ
1 ಫೆಬ್ರುವರಿ 2022 ರಿಂದ ಈ ಬ್ಯಾಂಕ್ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಿದೆ. ಈ ಬ್ಯಾಂಕ್ ಲ್ಲಿ ನಿಮ್ಮ ಖಾತೆ ಇದ್ದರೆ ಈ ಸುದ್ದಿ ನಿಮಗಾಗಿ ತುಂಬಾ ಮಹತ್ವದ್ದಾಗಿದೆ. ಕೆಲವೊಂದು ಸೌಲಭ್ಯ ಪಡೆಯುವುದಕ್ಕಾಗಿ ಗ್ರಾಹಕರಿಗೆ ಹೆಚ್ಚಿಗೆ ಹಣ ಎಣಿಸಬೇಕಾಗುವದು. SBI ಫೆಬ್ರುವರಿ 1 ರಿಂದ IMPS ನಿಯಮದಲ್ಲಿ ಬದಲಾವಣೆಯನ್ನು ಮಾಡಲಿದೆ. ಇದರಲ್ಲಿ ಗ್ರಾಹಕರಿಗೆ ಒಂದು ಕಡೆ ಲಾಭವಾದರೂ ಇನ್ನೊಂದು ಬದಿ ಹಾನಿಯೂ ಆಗಲಿದೆ.
ಫೆಬ್ರುವರಿ 1 ರಿಂದ IMPS ಟ್ರಾಂಜಾಕ್ಷನ್ ಸಲುವಾಗಿ ಹೊಸ ಸ್ಲ್ಯಾಬ್ ಜೋಡಿಸಲಾಗುವದು. ಇದು 2 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳ ವರೆಗೆ ಇರಲಿದೆ. SBI ನ ವೆಬ್ಸೈಟ್ ಪ್ರಕಾರ, IMPS ಮುಖಾಂತರ 2 ರಿಂದ 5 ಲಕ್ಷ ರೂಪಾಯಿಗಳ ವರೆಗೆ ಹಣ ಕಳುಹಿಸಲು 20 ರೂಪಾಯಿ + GST ಕೂಡಲಿದೆ. ಭಾರತೀಯ ರೀಜರ್ವ ಬ್ಯಾಂಕ್ ಅಕ್ಟೋಬರ್ 2021 ರಲ್ಲಿ IMPS ಮುಖಾಂತರ ವ್ಯವಹಾರ ಮಾಡಲು ಬರುವ ಹಣದ ಲಿಮಿಟ್ 2 ಲಕ್ಷ ದಿಂದ 5 ಲಕ್ಷ ರೂಪಾಯಿಗಳ ವರೆಗೆ ಮಾಡಿತ್ತು.
IMPS ಎಂದರೇನು?
IMPS ಗೆ ಇಮಿಡಿಯಟ್ ಮೊಬೈಲ್ ಪೇಮೆಂಟ್ ಸರ್ವಿಸ್ ಎನ್ನಲಾಗುತ್ತದೆ. IMPS ಇದು ಬ್ಯಾಂಕ್ ಮುಖಾಂತರ ನೀಡಲಾಗುವ ಜನಪ್ರಿಯ ಸೇವೆಯಾಗಿದೆ. ಇದು ರಿಯಲ್ ಟೈಮ್ ಇಂಟರ್ ಬ್ಯಾಂಕ್ ಫಂಡ್ ಟ್ರಾನ್ಸ್ ಫರ್ ಗೆ ಮಾನ್ಯತೆಯನ್ನು ನೀಡುತ್ತದೆ. ಪ್ರಸ್ತುತ ಸೇವೆ ವಾರದ ಎಲ್ಲಾ ದಿನಗಳಲ್ಲಿಯೂ ರಜೆ ದಿನ ಇದ್ದರೂ ಸಹಿತ 24×7 ಲಭ್ಯವಿರುತ್ತದೆ.
IMPS ಇದು ಒಂದು ಜನಪ್ರಿಯ ಮಾಧ್ಯಮವಾಗಿದೆ.
IMPS ಗ್ರಾಹಕರಲ್ಲಿ NEFT ಮತ್ತು RTGS ಗಿಂತಲೂ ಜನಪ್ರಿಯವಾಗಿದೆ. ಕಾರಣ ಇಲ್ಲಿ ಗ್ರಾಹಕರು ತಮಗೆ ಬೇಕಾದವರಿಗೆ 24 ಗಂಟೆಗಳ ಯಾವುದೇ ಸಮಯದಲ್ಲಿ ತ್ವರಿತಗತಿಯಲ್ಲಿ ಹಣವನ್ನು ಟ್ರಾನ್ಸ್ ಫರ್ ಮಾಡಬಹುದಾಗಿದೆ.