ವಿಜ್ಞಾನಿಗಳು ತಿಳಿಸಿದ ಭೀಕರ ಸತ್ಯ: ಭೂಮಿಗೆ ಮೇಲೆ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಹಿಂದೆಂದಿಗಿಂತ 10 ಪಟ್ಟು ಅಧಿಕ!
ಭೂಮಿಯ ಮೇಲೆ ಮಾನವ ಸಂಸ್ಕೃತಿ ಅಥವಾ ನಾಗರಿಕತೆ ಎನ್ನುವುದು ಆರಂಭವಾಗುವ ಮೊದಲು ಹಲವು ಕ್ಷುದ್ರಗ್ರಹಗಳು ಭೂ ಗ್ರಹದ ಮೇಲೆ ಅಪ್ಪಳಿಸಿವೆ. ಇಂತಹ ಕ್ಷುದ್ರ ಗ್ರಹಗಳಲ್ಲಿ ಒಂದಾದ Chicxulub ಕ್ಷುದ್ರ ಗ್ರಹದ ಘರ್ಷಣೆಯ ಕಾರಣದಿಂದಾಗಿಯೇ ಭೂಮಿಯ ಮೇಲೆ ಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದಂತಹ ದೈತ್ಯಾಕಾರದ ಜೀವಿಗಳು ಎನಿಸಿದಂತಹ ಡೈನೋಸಾರ್ ಗಳು ನಿರ್ನಾಮವಾಗಿ ಹೋದವು. 150 ಕಿಲೋಮೀಟರ್ ಅಗಲದ ಈ ಕ್ಷುದ್ರ ಗ್ರಹದ ಕಾರಣದಿಂದಾಗಿ ಮೆಕ್ಸಿಕೋ ಕೊಲ್ಲಿಯ ಬಳಿಯಲ್ಲಿ ಹತ್ತು ಕಿಲೋಮೀಟರ್ ಅಗಲದ ಚಿಕ್ಸಲುಬ್ ಕುಳಿ ರೂಪುಗೊಂಡಿದೆ. ಇನ್ನೂ ಅನೇಕ ಕ್ಷುದ್ರ ಗ್ರಹಗಳ ಕಾರಣದಿಂದ ಭೂಮಿಯ ಮೇಲೆ ಪ್ರಸ್ತುತ ಇರುವಂತಹ ಮೇಲ್ಮೈ ಮತ್ತು ವಾತಾವರಣ ರೂಪುಗೊಂಡಿತು ಎಂದು ಹೇಳಲಾಗುತ್ತದೆ.
ನಮ್ಮ ಗ್ರಹ ಅಂದರೆ ಭೂಗ್ರಹದ ಮೇಲೆ ಇದುವರೆಗೂ ಎಷ್ಟು ಕ್ಷುದ್ರಗ್ರಹಗಳು ಅಪ್ಪಳಿಸಿವೆ ಎನ್ನುವುದನ್ನು ಅಂದಾಜಿಸುವುದು ಬಹಳ ಕಷ್ಟವಾಗುತ್ತದೆ. ಆದರೆ ದೈತ್ಯ ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸುವ ಸಂಭವನೀಯತೆಯು ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಸೌತ್ ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಸಂಶೋಧಕರ ಅಧ್ಯಯನದ ಪ್ರಕಾರ ಒಂದು ನಿರ್ದಿಷ್ಟ ಸಮಯದ ನಂತರ Chicxulub ನಂತಹ ದೈತ್ಯ ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸುವ ಸಂಭವನೀಯತೆ ಈಗ ಹತ್ತು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ಸಂಶೋಧಕರ ಪ್ರಕಾರ ಒಂದು ದೈತ್ಯಾಕಾರದ ಕ್ಷುದ್ರ ಗ್ರಹವು ಭೂಮಿಗೆ ಅಪ್ಪಳಿಸಿದರೆ ಅದರಿಂದ ದೊಡ್ಡ ಪ್ರಮಾಣದ ವುನಾಶ ಉಂಟಾಗುತ್ತದೆ. ಅಲ್ಲದೇ ಭೂಮಿಯ ಮೇಲ್ಮೈ ನಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಭೂಮಿಯ ಮೇಲೆ ಮನುಷ್ಯನ ಜೀವನಕ್ಕೆ ಒಂದು ಆತಂಕ ನಿರ್ಮಾಣವಾಗುತ್ತದೆ. ಆದರೆ ಇದೇ ವೇಳೆ ವಿಜ್ಞಾನಿಗಳು ಮುಂಬರುವ ನೂರು ವರ್ಷಗಳ ಕಾಲ ಭೂಮಿಗೆ ಯಾವುದೇ ರೀತಿಯ ಕ್ಷುದ್ರಗ್ರಹಗಳ ಅಪಾಯವಿಲ್ಲ ಎನ್ನುವ ಭರವಸೆ ಯೊಂದನ್ನು ಸಹ ನೀಡಿದ್ದು, ಇದೊಂದು ಸಮಾಧಾನದ ವಿಷಯವಾಗಿದೆ.

ಕ್ಷುದ್ರಗ್ರಹಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಒಡೆದು ಚೂರಾಗಿ ಸುಟ್ಟು ಹೋಗುತ್ತದೆ. ಕೆಲವೊಮ್ಮೆ ಅವು ಉಲ್ಕಾ ಶಿಲೆಗಳಾಗಿ ಭೂಮಿಯ ಮೇಲೆ ಗೋಚರಿಸುತ್ತವೆ. ಈ ಉಲ್ಕಾಶಿಲೆ ಗಳ ಗಾತ್ರ ದೊಡ್ಡದಾಗಿದ್ದರೆ ಅವು ಭೂಮಿಯ ಮೇಲೆ ಬಿದ್ದಾಗ ತೊಂದರೆಯನ್ನುಂಟುಮಾಡುತ್ತದೆ ಹಾಗೂ ಅವು ಸಣ್ಣ ತುಂಡುಗಳಾಗಿದ್ದಲ್ಲಿ ಅವುಗಳು ಭೂಮಿಗೆ ಅಷ್ಟೇನೂ ಹಾನಿಯನ್ನುಂಟುಮಾಡುವುದಿಲ್ಲ. ಸಾಮಾನ್ಯವಾಗಿ ಈ ಉಲ್ಕಾ ಶಿಲೆಗಳು ಸಾಗರದೊಳಗೆ ಬೀಳುತ್ತವೆ. ಏಕೆಂದರೆ ಭೂಮಿಯ ಬಹುಭಾಗ ನೀರಿನಿಂದಲೇ ಆವರಿಸಲ್ಪಟ್ಟಿದೆ.
ಬಾಹ್ಯಾಕಾಶದ ಕಡೆಯಿಂದ ವೇಗವಾಗಿ ಭೂಮಿಯ ಕಡೆಗೆ ಬರುವ ಯಾವುದೇ ವಸ್ತುವೇ ಆಗಲಿ ಅದು ಭೂಮಿಯ 46.5 ದಶಲಕ್ಷ ಮೈಲಿ ಗಿಂತಲೂ ಹತ್ತಿರ ಬರುವ ಸಾಧ್ಯತೆಗಳಿದ್ದರೆ ಅವುಗಳಿಂದ ಅ ಪಾ ಯ ಖಂಡಿತ ಎಂದು ಪರಿಗಣಿಸಲಾಗಿದೆ. ನಾಸಾದ ಸೆಂಟ್ರಿ ವ್ಯವಸ್ಥೆಯು ಇಂತಹ ಅ ಪಾ ಯಗಳ ಕುರಿತಾದ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. ಇದರಲ್ಲಿ ಮುಂಬರುವ 100 ವರ್ಷಗಳ ಕಾಲ 22 ಕ್ಷುದ್ರ ಗ್ರಹಗಳ ಬಗ್ಗೆ ತಿಳಿಸಲಾಗಿದ್ದು, ಈ ಕ್ಷುದ್ರ ಗ್ರಹಗಳು ಭೂಮಿಯನ್ನು ಘರ್ಷಿಸುವ ಸಾಧ್ಯತೆ ಅಲ್ಪ ಸ್ವಲ್ಪ ಮಾತ್ರವೇ ಇದೆ ಎಂದು ಹೇಳಲಾಗಿದೆ.