ಒಬ್ಬ ಮನುಷ್ಯ ಎಷ್ಟು ವರ್ಷ ಬದುಕಬಹುದು ಎಂದು ನಿಖರವಾಗಿ ಹೇಳುವ ಸಾಧನದ ಸಂಶೋಧನೆ! ಇಷ್ಟಕ್ಕೂ ಮನುಷ್ಯನ ಗರಿಷ್ಟ ಜೀವಿತಾವಧಿ ಎಷ್ಟು ಗೊತ್ತಾ?

ನೀವೆಲ್ಲ ಸಾಮಾನ್ಯವಾಗಿ ಜಗತ್ತಿನ ಅತ್ಯಂತ ಹಿರಿಯರು ಅಂತ 114 ವರ್ಷ ಅಥವಾ ಹಾಗೂ 116 ವರ್ಷ ಜೀವಂತವಿರುವವರನ್ನು ನೋಡಿದ್ದೀರಿ ಅಥವಾ ಕೇಳಿದ್ದೀರಿ. ಆದರೆ ನಿಜವಾಗಿಯೂ ಮಾನವನ ಜೀವಿತಾವಧಿ ಎಷ್ಟು ಅಂತ ಗೊತ್ತಾ? ಕೇವಲ 100 ವರ್ಷವಲ್ಲ ಬದಲಾಗಿ 150 ವರ್ಷಗಳು ಎನ್ನುತ್ತದೆ ವೈಜ್ಞಾನಿಕ ಅಧ್ಯಯನ. ಆದರೆ ಇದುವರೆಗೂ ಯಾರು 150 ವರ್ಷ ಬದುಕಿರುವ ಜೀವಂತ ಉದಾಹರಣೆ ಇಲ್ಲವಲ್ಲ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಮುಖ್ಯ ಕಾರಣಗಳೇನು ಎಂಬುದನ್ನು ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ…

ಸಿಂಗಾಪುರದ ವಿಜ್ಞಾನಿಗಳ ತಂಡವೊಂದು ಮಾನವನ ಅತ್ಯಧಿಕ ವಯಸ್ಸನ್ನು ಕಂಡುಹಿಡಿಯಲು ಒಂದು ಇಂಡಿಕೆಟರ್ ಆವಿಷ್ಕರಿಸಿದೆ. ಅದರ ಹೆಸರು ಡೈನಾಮಿಕ್ ಆರ್ಗಾನಿಸ್ಮ್ ಸ್ಟೇಟ್ ಇಂಡಿಕೆಟರ್ (Dynamic organisms state indicator – DOSI). ಈ ಸಾಧನದ ಸಹಾಯದಿಂದ ಒಬ್ಬ ಮನುಷ್ಯನಿಗೆ ಆತನ ದೇಹ ಅವನಿಗೆ ಗರಿಷ್ಠ ಎಷ್ಟು ವರ್ಷ ಸಾತ್ ನೀಡಬಹುದು ಎಂದು ಅಂದಾಜಿಸಬಹುದಾಗಿದೆಯಂತೆ!

ಇದರೊಂದಿಗೆ ಇವರು ಆ ಮಾನವನ ರಕ್ತವನ್ನು ಕೂಡ ಸಾಕಷ್ಟು ತಪಾಸಣೆ ಮಾಡಬೇಕಾಗಿ ಬರುತ್ತದೆ. ಇವರು ಆ ಮಾನವನ ರಕ್ತ ತಪಾಸಣೆ ಮಾಡಿದ ಬಳಿಕ ಅದನ್ನು ತಮ್ಮ ಇಂಡಿಕೆಟರ್ ಗಳೊಂದಿಗೆ ಮ್ಯಾಚ್ ಮಾಡಿ ಕೊನೆಯದಾಗಿ ಒಂದು ಫಲಿತಾಂಶ ಕೊಡುತ್ತಾರೆ. ಅವರ ಈ ಅಧ್ಯಯನದ ಪ್ರಕಾರ ಮಾನವನ ದೇಹ ಅರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡು ಯಾವುದೇ ರೋಗ ರೂಜಿನಗಳಿಗೆ ತುತ್ತಾಗದೆ ಇದ್ದಲ್ಲಿ ಗರಿಷ್ಠ 150 ವರ್ಷ ಬದುಕಬಹುದಂತೆ..!!

ಶೋಧಕರು ವಯೋ ಸಹಜ ಏರಿಳಿತಗಳು ಹಾಗೂ ವಯಸ್ಸಾಗುವ ಟ್ರಾಜೆಕ್ಟರಿಗಳನ್ನು ಸಿಂಗಲ್ ಮೆಟ್ರಿಕ್ ನಲ್ಲಿ ಹಾಕಿ ನೋಡಿದಾಗ ಇದರಲ್ಲಿ ಅಂದಾಜು ಗರಿಷ್ಠ ಬದುಕುವ ವಯಸ್ಸನ್ನು ತೆಗೆಯಬಹುದು ಎಂದಿದ್ದಾರೆ. ವಯಸ್ಸಾಗುವುದು ಎಂದರೆ ಜೀವಶಾಸ್ತ್ರದ ಭಾಷೆಯಲ್ಲಿ ದೇಹದ ಅಂಗಗಳು ಕಡಿಮೆ ಕೆಲಸ ಮಾಡುವುದು ಅಂತ ಅರ್ಥ.

ಹಾಗೆಯೇ ಶರೀರ ರೋಗಗಳಿಗೆ ತುತ್ತಾಗುವುದು ಕೂಡ ವಯಸ್ಸಾಗುವುದು ಎಂಬುದರ ಲೆಕ್ಕಕ್ಕೇ ಬರುತ್ತದೆ. ಆ ರೋಗಗಳೆಂದರೆ ಕ್ಯಾನ್ಸರ್ ಆಗಿರಬಹುದು, ಮಾನಸಿಕ ಸ್ಥಿತಿಯ ಹದಗೆಡುವಿಕೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ. ಇನ್ನೊಂದು ಬಹುದೊಡ್ಡ ಕಾರಣ ಎಂದರೆ ಶರೀರದಲ್ಲಿನ ಡಿ ಏನ್ ಎ ಗಳ ವಿಭಜನೆಯಾಗುತ್ತ ಸಾಗುತ್ತವೆ.

ಈ ಕಾರಣದಿಂದಾಗಿ ಶರೀರ ಬಹಳ ಬೇಗ ರೋಗಗಳಿಗೆ ತುತ್ತಾಗುತ್ತವೆ ಅಲ್ಲದೇ ದೇಹದ ಅಂಗಗಳು ಕೆಲಸ ಮಾಡುವುದನ್ನು ಕಡಿಮೆ ಮಾಡುತ್ತ ಸಾಗುತ್ತವೆ. ರಕ್ತದ ಮಾದರಿಯ ತನಿಖೆ ಮಾಡುವುದರ ಮೂಲಕ ವಯಸ್ಸಿನ ಸಂಖ್ಯೆ ಕಂಡುಹಿಡಿಯುವ ಸಲುವಾಗಿ ಇವರು ವಿವಿಧ ವಯಸ್ಸಿನ ಸ್ಥರದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅದರ ಪರೀಕ್ಷೆ ಮಾಡಿದ್ದಾರೆ.

ರಕ್ತದಲ್ಲಿನ ಕಂಪ್ಲೀಟ್ ಬ್ಲಡ್ ಕೌಂಟ್ (CBC) ಪರೀಕ್ಷೆ ಅಂದರೆ ರಕ್ತದ ಮಾದರಿಯಲ್ಲಿನ ಕೆಂಪು ರಕ್ತ ಕಣಗಳು ಬಿಳಿ ರಕ್ತ ಕಣಗಳು ಹಾಗೂ ಪ್ಲೇಟ್ ಲೆಟ್ಸ್ ಗಳನ್ನು ಕೌಂಟ್ ಮಾಡಿ ಈ ವರದಿಯನ್ನು ಟ್ರಾಜೆಕ್ಟರಿಯೊಂದಿಗೆ ಟ್ಯಾಲಿ ಮಾಡಿ ನೋಡಿದಾಗ ಯಾವ ವಯಸ್ಸಿನಲ್ಲಿ ಎಷ್ಟು CBC ಇರುತ್ತದೆ ಹಾಗೂ ಯಾವ ರೋಗಗಳು ಬರುವ ಸಾಧ್ಯತೆ ಇದೆ ಹಾಗೂ ಯಾವ ರೋಗಗಳ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ಇದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದಂತೆ.

ಇನ್ನು ಈ ಇಂಡಿಕೆಟರ್ಸ್ ಕೆಲಸ ಏನೆಂದರೆ ಇವುಗಳು ದೇಹದ ಕ್ಷಮತೆಯ ಬಗ್ಗೆ ಹೇಳುತ್ತದೆ, ಯಾವ ವ್ಯಕ್ತಿಗಳ ಲೈಫ್ ಸ್ಟೈಲ್ ಚೆನ್ನಾಗಿರುತ್ತದೋ ಅವರು ಹೆಚ್ಚು ಬಾಳುತ್ತಾರೆ ಹಾಗೂ ಯಾರು ಯಾವ ಕಾಯಿಲೆಯಿಂದ ಬಳಲುತ್ತಿರುತ್ತಾರೋ ಅದರ ಆಧಾರದ ಮೇಲೆ ಅವರ ಜೀವಿತಾವಧಿಯನ್ನು ಈ ಇಂಡಿಕೆಟರ್ಸ್ ತಿಳಿಸುತ್ತವೆಯಂತೆ.

ಈ ಮಷೀನ್ ಗೆ ಕೇವಲ ದೊಡ್ಡ ದೊಡ್ಡ ರೋಗಗಳ ಬಗ್ಗೆ ಮಾತ್ರ ಅಧ್ಯಯನ ಮಾಡುವದನ್ನು ತಿಳಿಸಿಲ್ಲ, ಬದಲಾಗಿ ಸಣ್ಣ ಪುಟ್ಟ ರೋಗಗಳ ಬಗ್ಗೆಯೂ ಈ ಇಂಡಿಕೆಟರ್ಸ್ ಅಧ್ಯಯನ ಮಾಡಿ ವರದಿ ನೀಡುತ್ತವೆ. ಯಾವ ವ್ಯಕ್ತಿಯ ಜೀವನ ಶೈಲಿ ಚೆನ್ನಾಗಿರುತ್ತದೋ ಹಾಗೂ ಯಾವುದೇ ಅಪಘಾತ ಅಥವಾ ಮತ್ಯಾವುದೋ ರೋಗಗಳಿಗೆ ತುತ್ತಾಗದೆ ಇದ್ದರೆ ಅಂಥವರು ಜಾಸ್ತಿ ದಿನ ಬಾಳುವ ಸಾಧ್ಯತೆ ಇರುತ್ತದೆ.

ಈ DOSI ಸಹಾಯದಿಂದ ಭವಿಷ್ಯದಲ್ಲಿ ಬರಬಹುದಾದ ರೋಗಗಳ ಬಗ್ಗೆ ಹೇಳಬಹುದು ಆದರೆ ಸದ್ಯ ಅಂದರೆ ವರ್ತಮಾನದಲ್ಲಿ ಆಗುವ ರೋಗಗಳ ಬಗ್ಗೆ ಹೇಳಲು ಸಾಧ್ಯವಿಲ್ಲವಂತೆ. ಏಕೆಂದರೆ ಈ DOSI ವಯಸ್ಸಿನ ಬಗ್ಗೆ ಹಾಗೂ ಭವಿಷ್ಯದಲ್ಲಿ ದೇಹದ ಸ್ಥಿತಿಯ ಬಗ್ಗೆ ಅವಲೋಕಿಸುವ ತಂತ್ರಜ್ಞಾನವಾಗಿದೆಯೇ ಹೊರತು ರೋಗಗಳನ್ನು ಪತ್ತೆಹಚ್ಚುವ ಸಾಧನವಲ್ಲ.

ಈ ತಂತ್ರಜ್ಞಾನದ ಸಹಾಯದಿಂದ ದೇಹದ ಅಂಗಗಳು ಇನ್ನೂ ಎಷ್ಟು ಸಮಯದವರೆಗೆ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಹಿಡಿಯುತ್ತದೆ, ಇದರ ಆಧಾರದ ಮೇಲೆ ವಯಸ್ಸು ನಿರ್ಧಾರವಾಗುತ್ತದೆ. ಈ ಸಂಶೋಧಕರು ಹೇಳುವ ಪ್ರಕಾರ ಇದೊಂದು ಅದ್ಭುತ ತಂತ್ರಜ್ಞಾನವಾಗಿದೆ.

ಇನ್ನೂ ಭವಿಷ್ಯದಲ್ಲಿ ಏನೇ ತಂತ್ರಜ್ಞಾನಗಳು ಬಂದರೂ ಕಳೆದು ಹೋಗುತ್ತಿರುವ ವಯಸ್ಸನ್ನು ಕಡಿಮೆ ಮಾಡುವಂತಹ ತಂತ್ರಜ್ಞಾನಗಳು ಮಾತ್ರ ಬರಲು ಸಾಧ್ಯವಿಲ್ಲ! ಉರುಳುತ್ತಿರುವ ವಯಸ್ಸಿನೊಂದಿಗೆ ದೇಹದ ಫಿಸಿಕಲ್, ಅನಾಟಾಮಿಕಲ್ ಹಾಗೂ ದೇಹದ ಒಳ ಹೊರಗಿನ ಅಂಗಗಳ ಕ್ಷಮತೆ ಕಡಿಮೆಯಾಗುತ್ತ ಹೋಗುತ್ತದೆ.

ಇದಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ನಾವು ಹೈಬ್ರಿಡ್ ಹಾಗೂ ರಾಸಾಯನಿಕ ಮಿಶ್ರಿತ ಆಹಾರ ತಿನ್ನುತ್ತಿರುವದರಿಂದ ಸದ್ಯ ಮನುಷ್ಯನ ಜೀವಿತಾವಧಿ ಕಡಿಮೆಯಾಗಿರಬಹುದು, ಆದರೆ ಮನುಷ್ಯ ಒಳ್ಳೆಯ ಆಹಾರ ಹಾಗೂ ಲೈಫ್ ಸ್ಟೈಲ್ ರೂಢಿಸಿಕೊಂಡರೆ ಯಾವುದೇ ರೋಗಗಳಿಗೆ ತುತ್ತಾಗದೆ ಇದ್ದಲ್ಲಿ 120 ರಿಂದ 150 ವರ್ಷಗಳವರೆಗೆ ಬದುಕಬಹುದಾಗಿದೆ.
-ಮಂಜುನಾಥ್