ಒಂದು ಬದಿಗೆ ಬೆಟ್ಟ ಇನ್ನೊಂದು ಬದಿಗೆ ಕಣಿವೆ; ಡ್ರೈವರ್ ನೊಬ್ಬ ಅದ್ಭುತ ಯೂಟರ್ನ್ ತೆಗೆದುಕೊಂಡ ಪ್ರತಾಪದ ವೈರಲ್ ವಿಡಿಯೋ ನೋಡಿ!

ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸದ ಪ್ರತಿ ಪರ್ಫೆಕ್ಷನ್ ಇಲ್ಲದೆ ನಡೆಯುವುದಿಲ್ಲ. ಅದರಲ್ಲೂ ಡ್ರೈವಿಂಗ್ ಫೀಲ್ಡ್ ನಲ್ಲಂತೂ ಇದು ತುಂಬಾ ಅವಶ್ಯಕವಾಗಿದೆ. ಒಳ್ಳೆಯ ಡ್ರೈವಿಂಗ್ ಮಾಡುವದು ಸಹಿತ ಒಂದು ಸುಂದರವಾದ ಕಲೆಯೇ ಆಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಡ್ರೈವರ್ ನೊಬ್ಬ ಬೆಟ್ಟದ ಮೇಲೆ ಇಕ್ಕಟ್ಟಾದ ದಾರಿಯಲ್ಲಿ ಕಾರನ್ನು U ಟರ್ನ್ ಮಾಡಿದ ವಿಡಿಯೋ ಎಲ್ಲ ಕಡೆಗೆ ಹರಿದಾಡುತ್ತಿದೆ.

ನಿಮಗೆ ಪಟ್ಟಣಗಳಲ್ಲಿ ಅಥವಾ ಸಪಾಟಾದ ದಾರಿಯ ಮೇಲೆ ಕಾರು ನಡೆಸುವ ಎಷ್ಟೇ ವರ್ಷಗಳ ಅನುಭವ ಇದ್ದರೂ ಬೆಟ್ಟದ ಮೇಲಿನ ಕಡಿದಾದ ದಾರಿಯಲ್ಲಿ ವಾಹನ ನಡೆಸುವುದು ಎಂದರೆ ಅಷ್ಟು ಸುಲಭದ ಕೆಲಸವಾಗಿರುವದಿಲ್ಲ. ಅಂಥ ಸ್ಥಳಗಳಲ್ಲಿ ತುಂಬಾ ಅನುಭವ ಹಾಗೂ ಲೋಕಲ್ ಡ್ರೈವರ್ ಇರುವದು ಅವಶ್ಯಕವಾಗಿರುತ್ತದೆ. ಈಗ ನೀವಿಲ್ಲಿ ಡ್ರೈವರ್ ನ ಕಾರು ನಡೆಸುವ ಕರಾಮತ್ತಿನ ವಿಡಿಯೋ ನೋಡಿ ನಿಜಕ್ಕೂ ದಂಗಾಗುವಿರಿ.

ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಸದ್ಯ ಹರಿದಾಡುತ್ತಿದೆ. ಇದರಲ್ಲಿ ಡ್ರೈವರ್ ತನ್ನ SUV ಕಾರಿನಲ್ಲಿ ಕುಳಿತು ಅತೀ ಚಿಕ್ಕ ಕಡಿದಾದ ಬೆಟ್ಟದ ಮೇಲಿರುವ ರಸ್ತೆಯ ಮೇಲೆ U ಟರ್ನ್ ತೆಗೆದುಕೊಳ್ಳುತ್ತಿದ್ದಾನೆ. ಇಲ್ಲಿ ಒಂದು ಬದಿಗೆ ಬೆಟ್ಟವಿದ್ದರೆ ಇನ್ನೊಂದು ಬದಿಗೆ ಆಳವಾದ ಕಣಿವೆ ಇದೆ. ಕಾರಿನ ಮುಂದಿನ ಭಾಗ ಬೆಟ್ಟದ ಕಡೆಗೆ ಇದ್ದರೆ ಹಿಂದಿನ ಭಾಗ ಕಣಿವೆ ಅಥವಾ ಪ್ರಪಾತದ ಕಡೆಗೆ ಇದೆ. ಕಾರನ್ನು ತಿರುಗಿಸುತ್ತಿರುವಾಗ ಹಿಂದಿನ ಚಕ್ರಗಳು ಹೆಚ್ಚು ಕಡಿಮೆ ಹವೆಯಲ್ಲಿಯೇ ಕಾಣುತ್ತಿವೆ. ಈ ಕೃತಿ ನಡೆದಾಗ ಮುಂದೇನಾದರೂ ಭಯಾನಕ ಅನಾಹುತ ನಡೆಯುತ್ತದೆಯೋ ಏನೋ ಎಂಬಂತೆ ಭಾಸವಾಗುತ್ತದೆ. ಆದರೆ ಸುದೈವದಿಂದ ಅಂಥ ಯಾವುದೇ ಘಟನೆ ನಡೆದಿಲ್ಲ. ಪ್ರಸ್ತುತ ವಿಡಿಯೋ ಜಪಾನ ದೇಶದಲ್ಲಿಯದು ಇರಬಹುದೆಂಬ ಶಂಕೆ ವ್ಯಕ್ತ ಮಾಡಲಾಗಿದೆ. ಎಂತಹ ಚಪಲ ಹಾಗೂ ಚಾಣಾಕ್ಷ ಡ್ರೈವರ್ ಇದ್ದರೂ ಸಹ ಇಂಥ ಕೆಲಸವನ್ನು ಮಾಡುವ ಮೊದಲು ಸುಮಾರು ಸಲ ಯೋಚಿಸುವನು.

1.22 ನಿಮಿಷದ ಈ ವಿಡಿಯೋದಲ್ಲಿಯ ದೃಶ್ಯ ನೋಡಿ, ಆಗ ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.