Video; ಅಜ್ಜಿಗೆ ಗೋಳು ಹೊಯ್ದುಕೊಳ್ಳುತ್ತಿರುವ ಅಜ್ಜನ ಈ ತುಂಟ ಡಾನ್ಸ್ ನೋಡಿ. ಹುಣಸೆ ಮರ ಹಳೆಯದಾದರೂ…

ನೃತ್ಯ ಇದು ಯಾವ ವಯಸ್ಸಿನವರಿಗೂ ಆಕರ್ಷಣೆ ಮಾಡಿಕೊಳ್ಳುತ್ತದೆ. ಅದರಲ್ಲೂ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ವಯಸ್ಸಿನವರೂ ತಮ್ಮಲ್ಲಿರುವ ನೃತ್ಯ ಕಲೆಯನ್ನು ಸಾದರ ಪಡಿಸುತ್ತಿದ್ದಾರೆ, ಅಥವಾ ಅವರು ಮನೆಯಲ್ಲಿ ಮಾಡಿದ ತುಂಟಾಟದಲ್ಲಿ ಮಾಡಿದ ನೃತ್ಯದ ವಿವಿಧ ವಿಡಿಯೋಗಳು ಇಂಟರ್ನೆಟ್ ನಲ್ಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿವೆ. ಸದ್ಯ ಇದೇ ರೀತಿಯ ಹಿರಿಯ ಕಪಲ್ ಗಳ ವಿಡಿಯೋ ಒಂದು ನಿಮಗಾಗಿ ಇಲ್ಲಿ ತಂದಿದ್ದೇವೆ. ಇದನ್ನು ನೋಡಿದ ನಂತರ ವಾವ್ ಸೂಪರ್ ವಿಡಿಯೋ ಎನ್ನುವಿರಿ.

ಪ್ರಸ್ತುತ ವಿಡಿಯೋದಲ್ಲಿ ಅಜ್ಜ ಅಜ್ಜಿಯ ತುಂಬಾ ಸುಮಧುರ ಬಾಂಡಿಂಗ್ ಕಂಡು ಬರುತ್ತಿದೆ. ಇಲ್ಲಿ ಅಜ್ಜಿಯ ಸುತ್ತ ಅಜ್ಜ ಡಾನ್ಸ್ ಮಾಡುತ್ತ ತಮ್ಮ ಕಲೆಯನ್ನು ಮೆರೆಯುತ್ತಿದ್ದಾರೆ. ಸುಮ್ಮನೆ ಕುಳಿತ ಅಜ್ಜಿಯ ಸುತ್ತಮುತ್ತ ಅಜ್ಜ ಡಾನ್ಸ್ ಮಾಡುತ್ತ ಪ್ರೀತಿಯಿಂದ ಕಿರುಕುಳ ನೀಡುತ್ತಿದ್ದಾರೆ. ಈ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲವು. ಈ ಸಂದರ್ಭದಲ್ಲಿ ಅಜ್ಜಿ ಚೇರ್ ಮೇಲೆ ಕುಳಿತು ಟಿವಿ ವೀಕ್ಷಿಸುತ್ತಿದ್ದಾಳೆ. ಆಗ ಅಜ್ಜ ಬಂದು ಅಜ್ಜಿ ಕುಳಿತ ಚೇರ್ ಸುತ್ತ ಡಾನ್ಸ್ ಮಾಡುತ್ತಾರೆ. ಈ ದೃಶ್ಯ ನೋಡಲು ತುಂಬಾ ಅದ್ಭುತವಾಗಿದೆ, ಅಷ್ಟೆ ಅಲ್ಲ ಆ ಸಮಯದಲ್ಲಿ ಅಜ್ಜಿ ತನ್ನ ಒಡೆಯನ ಮೇಲೆ ತೋರಿಸುವ ಹುಷಿಗೋಪ ಹಾಗೂ ಪ್ರೀತಿ ಎರಡು ಒತ್ತಟ್ಟಿಗೆ ಕಂಡು ಬರುತ್ತಿವೆ. ಅಜ್ಜ ಮಾತ್ರ ತನ್ನದೇ ಲಯದಲ್ಲಿ ಡಾನ್ಸ್ ಮಾಡುತ್ತ ಅಜ್ಜಿಗೆ ಗೋಳು ಹೊಯ್ದುಕೊಳ್ಳುತ್ತಿದ್ದಾರೆ ನಿಜ.

ವೀಡಿಯೋ ನೋಡಿ

ಪ್ರಸ್ತುತ ಈ ಸುಂದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಆಪ್ಟಿಮೆಸ್ಟಿಕ್ ಚಾಟರ್ ಬಾಕ್ಸ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಅಜ್ಜ ಅಜ್ಜಿಯರ ಪ್ರೀತಿಯ ಈ ವಿಡಿಯೋ ಇಲ್ಲಿಯವರೆಗೆ 18.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಪ್ರೀತಿಯ ಈ ವಿಡಿಯೋವನ್ನು ಮೆಚ್ಚಿ 1.1 ಮಿಲಿಯನ್ ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.