VIDEO : ಬಾ ಕೊರೋನ ಅದೆಲ್ಲಿಂದ ಬರ್ತಿಯೋ ನಾನೂ ನೋಡ್ತಿನಿ! ಸುಮ್ ತಮಾಷೆಗೆ
ಇದೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ. ವಿಡಿಯೊ ಎಲ್ಲಿಯದು ಅಂತ ಗೊತ್ತಿಲ್ಲವಾದರೂ ಆ ವ್ಯಕ್ತಿ ಸ್ಯಾನಿಟೈಸರ್ ಬಳಸುವ ರೀತಿ ಎಲ್ಲರಲ್ಲೂ ನಗು ತರಿಸಿದೆ. ಕೊರೋನ ಎರಡನೇ ಅಲೆಯಿಂದ ದೇಶ ತಲ್ಲಣಗೊಂಡಿದೆ, ಎಲ್ಲ ಕಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಕೂಡ ಅನೇಕರು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಬಿಟ್ಟಿಲ್ಲ.
ಕೊರೋನ ಬಂದು ಒಂದು ವರ್ಷದ ಮೇಲಾಯಿತು, ಈಗಲೂ ನಮ್ಮ ಜನಕ್ಕೆ ಪೊಲೀಸರು ಹೊಡೆದು ಹೊಡೆದು ಮಾಸ್ಕ್ ಹಾಕಿಸಬೇಕಾಗಿದೆ. ಪರಸ್ಥಿತಿ ಹೇಗಿದೆ ಅಂತ ಅರ್ಥ ಮಾಡಿಕೊಂಡು ಹಾಗೆ ನಡೆಯುವುದು ಸಂಸ್ಕಾರವಂತರ ಲಕ್ಷಣ. ಬಹುಶಃ ಮೊದಲೇ ಜನ ಈಗಿನಷ್ಟು ಹುಷಾರಾಗಿದ್ದಿದ್ದರೆ ವೈರಸ್ ಈ ಪರಿ ಬೆಳೆಯುತ್ತಿರಲಿಲ್ಲ. ಇಷ್ಟೊಂದು ಸಾವು ಸಂಭವಿಸುತ್ತಿರಲಿಲ್ಲ, ಈ ಪರಿ ಆರ್ಥಿಕ ಹೊಡೆತ ಕೂಡ ಬೀಳುತ್ತಿರಲಿಲ್ಲ.
ನೀವು ಸಾಮಾನ್ಯವಾಗಿ ನಿಮ್ಮೂರಲ್ಲೇ ಗಮನಿಸಿ ನೋಡಿ, ಪೊಲೀಸರು ಬಂದಾಗ ಮಾಸ್ಕ್ ಮೇಲೇರಿಸಿಕೊಳ್ಳುತ್ತಾರೆ! ಯಾಕೆ, ಪೊಲೀಸರೇನು ತಮಗೆ ಕೊರೋನ ಬರಬಾರದು ಅಂತ ನಮಗೆಲ್ಲ ಮಾಸ್ಕ್ ಹಾಕಿಕೊಳ್ಳಲು ಹೇಳುತ್ತಾರಾ? ಮನೆ – ಮಕ್ಕಳಿಂದ ದೂರ ಇದ್ದು ಅವರು ನಮಗೋಸ್ಕರ ಡ್ಯೂಟಿ ಮಾಡುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕು.
ನಮ್ಮ ರಕ್ಷಣೆ ನಾವು ಮಾಡಿಕೊಳ್ಳಬೇಕು, ಆದರಿಲ್ಲಿ ಪೊಲೀಸರು ಹೊಡೆದು ಬಡಿದು ನಮ್ಮ ರಕ್ಷಣೆ ಮಾಡಬೇಕಾಗಿದೆ. ಹಗಲಿರುಳು ರಸ್ತೆಯಲ್ಲಿ ನಿಂತು ನಮಗಾಗಿ ಅವರು ಕೆಲಸ ಮಾಡುತ್ತಿರುವಾಗ ನಮಗೂ ಸ್ವಲ್ಪ ಜವಾಬ್ಧಾರಿ ಇರಬೇಕು. ನಾವಿಲ್ಲಿ ಬೇಕಾಬಿಟ್ಟಿ ತಿರುಗಿದಷ್ಟೂ ಅಲ್ಲಿ ಅವರು ನರಕ ಅನುಭವಸಿಬೇಕು.
ಈಗಾಗಲೇ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ಪ್ರತಿದಿನ ಮೂರ್ನಾಲ್ಕು ಲಕ್ಷ ಹೊಸ ಪ್ರಕರಣ ಬರುತ್ತಿವೆ. ನಮ್ಮ ರಾಜ್ಯದಲ್ಲಿಯೇ ಪ್ರತಿದಿನ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಹೀಗಿರುವಾಗ ಸಾಧ್ಯವಾದಷ್ಟು ನಮ್ಮ ಹಾಗೂ ನಮ್ಮವರ ಕಾಳಜಿ ಮಾಡುವುದನ್ನು ನಾವು ಕಲಿಯಬೇಕು. ಸರ್ಕಾರವನ್ನು ಆಮೇಲೆ ಟೀಸಿದರಾಯ್ತು ಮೊದಲು ಜೀವ ಉಳಿಸಿಕೊಳ್ಳುವುದು ಮುಖ್ಯ.
ಇನ್ನು ನಿರಂತರವಾಗಿ ಆಸ್ಪತ್ರೆಗಳಲ್ಲಿ ಡಾಕ್ಟರ್ – ನರ್ಸ್ ಕೊರೋನ ಜೊತೆ ಹೋರಾಡಿ ಹೈರಾಣಾಗಿದ್ದಾರೆ. ಹೀಗಿರುವಾಗ ಮಾಸ್ಕ್ – ಸ್ಯಾನಿಟೈಸರ್, ಸಾಮಾಜಿಕ ಅಂತರ, ಸ್ವಚ್ಚತೆ ನಮ್ಮ ಆಧ್ಯತೆಗಳಾಗಲಿ. ಲಾಕ್ ಡೌನ್ ಮಾಡಿರುವುದು ನಮ್ಮ ಹಿತಕ್ಕಾಗಿ. ಎಷ್ಟು ದಿನ ನಾವು ಕೊರೋನ ಗೈಡ್ಲೈನ್ಸ್ ಪಾಳಿಸುವುದಿಲ್ಲವೋ ಅಷ್ಟು ಹೊಡೆತ ನಮಗೇ ಬೀಳುತ್ತದೆ ಎಂಬುದು ನೆನಪಿರಲಿ.
ವಿಡಿಯೊದಲ್ಲಿರುವ ವ್ಯಕ್ತಿ ಅನಕ್ಷರಸ್ಥನಂತೆ ಕಂಡರೂ ಆತನ ಜಾಗರೂಕತೆ ಮೆಚ್ಚುವಂಥದ್ದು. ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲವಾದರೂ ಅದರಿಂದ ಕೊರೋನ ಬರಲ್ಲ ಅಂತ ಗೊತ್ತಿದೆ. ವಿಡಿಯೊ ನೋಡಿದವರೆಲ್ಲ ಬಾ ಕೊರೊನ ಎಲ್ಲಿಂದ ಬರ್ತಿಯಾ ಅಂತ ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲು ಕೈಗೆ ಸ್ಯಾನಿಟೈಸ್ ಹಾಕಿಸಿಕೊಳ್ಳುವ ವ್ಯಕ್ತಿ ಅದನ್ನು ನೀಟಾಗು ಕೈಗೆ ಹಚ್ಚಿಕೊಂಡು ನಂತರ ತೋಳಿನವರೆಗೂ ಸವರಿಕೊಂಡು, ಮುಖ – ತಲೆಗೂ ಅದನ್ನೇ ಅಪ್ಲೈ ಮಾಡಿಕೊಳ್ಳುತ್ತಾನೆ! ಇನ್ನು ಕೈಯಲ್ಲಿ ತೇವಾಂಶ ಉಳಿದಿತ್ತೇನೋ, ಅದನ್ನು ಕಾಲಿಗೈ ಮೊಣಕಾಲವರೆಗೆ ಹಚ್ಚಿಕೊಳ್ಳುತ್ತಾನೆ!
ಅದನ್ನು ನೋಡಿದ ಆ ಸ್ಯಾನಿಟೈಸರ್ ಹಾಕುವ ಹುಡುಗ ಮತ್ತಷ್ಟು ಸ್ಯಾನಿಟೈಸರ ಆತನ ಕೈಗೆ ಹಾಕುತ್ತಾನೆ! ಅದನ್ನು ಮತ್ತೆ ಕೈಗೆ ಮುಖಕ್ಕೆ ನೀಟಾಗಿ ಸವರಿಕೊಂಡು ವ್ಯಕ್ತಿ ನಂತರ ಮಾಸ್ಕ್ ಹಾಕಿಕೊಳ್ಳುತ್ತಾನೆ! ಇದು ತಮಾಷೆಯಾಗಿ ಕಂಡರೂ ಆತನ ಮುನ್ನೆಚ್ಚರಿಕೆ ಇಷ್ಟವಾಗುತ್ತದೆ.
ಅದು ಬಹುಶ ಯಾವುದೊ ಸರ್ಕಾರಿ ಕಚೇರಿ ಅಥವಾ ಆಸ್ಪತ್ರೆಯಾಗಿರಬಹುದು, ಆ ಹುಡುಗ ಎಲ್ಲರಿಗೂ ಸ್ಯಾನಿಟೈಸರ್ ಹಾಕಿಕೊಂಡು ಬರುತ್ತಿದ್ದಾನೆ, ಜನ ಕೂಡ ಮಾಸ್ಕ್ ತಗೆಯದೇ ಕುಳಿತಿದ್ದಾರೆಂದರೆ ಅದು ಆಸ್ಪತ್ರೆಯೇ ಇರಬಹುದು. ವಿಡಿಯೊ ಮೇಲಿದೆ ನೋಡಿ.
-Team Infotrend