😳 ಭಯ ಅಂದ್ರೇನು? ಕಣ್ಣುಗಳಿಂದ ನೋಡಬೇಕಾದರೆ ಈ ವಿಡಿಯೋ ನೋಡಿ, ಚೆನ್ನಾಗಿ ಗೊತ್ತಾಗುತ್ತೆ…

ಸಾಮಾಜಿಕ ಜಾಲತಾಣವು ಇಂಟರ್ನೆಟ್ ಯೂಸರ್ಸ್ಗಳಿಗೆ ದಿನನಿತ್ಯ ನವರಸಗಳು ತುಂಬಿದ ವಿವಿಧ ರೀತಿಯ ವಿಡಿಯೋಗಳನ್ನು ತಂದು ತೋರಿಸುತ್ತದೆ. ಈ ಎಲ್ಲ ವಿಡಿಯೋಗಳಲ್ಲಿ ಬೇರೆ ಬೇರೆ ರಸಗಳು ಶಾಮಿಲಾಗಿರುತ್ತವೆ. ಈ ನವರಸಗಳಲ್ಲಿ ಒಂದಾದ ಭಯಾನಕ ರಸದ ಉದಾಹರಣೆಯನ್ನು ತೋರಿಸುವ ದೃಶ್ಯ ಒಂದು ಇಲ್ಲಿ ನೋಡಲಿದ್ದೀರಿ.

ಪ್ರಸ್ತುತ ವಿಡಿಯೋ 2011 ರಲ್ಲಿ ಜಪಾನಿನ ತೊಹೊಕುನಲ್ಲಿ (tohoku) ಬಂದ ಭಾರಿ ಭೂಕಂಪ ಮತ್ತು ನಂತರದಲ್ಲಿ ಬಂದ ಭಯಾನಕ ಸುನಾಮಿ ದೃಶ್ಯವನ್ನು ಒಳಗೊಂಡಿದೆ. 52 ಸೆಕೆಂಡುಗಳ ಈ ವಿಡಿಯೋದಲ್ಲಿಯ ದೃಶ್ಯ ನೋಡುವಾಗ ಮೊದಲಿಗೆ ಏನೂ ಗಮನಕ್ಕೆ ಬೇಗ ಬರುವದಿಲ್ಲ. ನಂತರ ಮಾತ್ರ ಕೆಲವೇ ಕ್ಷಣಗಳು ಉರುಳುತ್ತಿದ್ದಂತೆ ಅಲ್ಲಿ ನಡೆಯುತ್ತಿರುವ ದೃಶ್ಯ ಕಂಡು ನೋಡುಗ ಭಯಭೀತನಾಗುತ್ತಾನೆ. ಅಲ್ಲಿ ಕಂಡು ಬರುವ ರಿಯಲ್ ದೃಶ್ಯ ಯಾವುದೇ ಹಾಲಿವುಡ್ ಚಿತ್ರದಲ್ಲಿ ತೋರಿಸುವ ಭಯಾನಕ ದೃಶ್ಯಕ್ಕಿಂತಲೂ 100 ಪಟ್ಟು ಭಯವನ್ನು ಹುಟ್ಟಿಸುವ ದೃಶ್ಯವಾಗಿದೆ. ವಿಡಿಯೋದಲ್ಲಿ ಮೊದಲು ರಸ್ತೆ ಮೇಲೆ ಕಂಡುಬರುವ ಕಾರುಗಳು ಮತ್ತು ವಾಹನಗಳು ಯೂ ಟರ್ನ್ ತೆಗೆದುಕೊಂಡು ಲಗುಬಗೆಯಲ್ಲಿ ಯಾಕೆ ಮರಳಿ ಹೋಗುತ್ತಿದ್ದಾರೆ ಎಂಬುದು ಅಷ್ಟೊಂದು ಬೇಗನೆ ತಿಳಿಯುವುದಿಲ್ಲ. ವಿಡಿಯೋ ಮುಂದೆ ಸಾಗಿದಂತೆ ಮಾತ್ರ ಎಲ್ಲವೂ ಸ್ಪಷ್ಟವಾಗಿ ತಿಳಿಯಲು ಶುರುವಾಗುತ್ತದೆ. ಭೂಕಂಪನದ ಕಾರಣಕ್ಕಾಗಿ ಸಮುದ್ರದಲ್ಲಿ ತಯಾರಾದ ಸುನಾಮಿಯ ಅಲೆಗಳು ರೌದ್ರ ರೂಪ ತಾಳಿ ಹೇಗೆ ಕೊಚ್ಚಿಕೊಂಡು ಬರುತ್ತಿವೆ ಎಂಬುದನ್ನು ನೋಡಿದಾಗ ಎಂಥ ಚಳಿಯಲ್ಲಿಯೂ ದೇಹಕ್ಕೆ ಬೆವರು ಬಿಡುವಂತಹ ದೃಶ್ಯವಾಗಿದೆ ಎನ್ನಬಹುದು. ದೊಡ್ಡ ದೊಡ್ಡ ಮನೆಗಳು ಸುನಾಮಿಯ ಹೊಡೆತದಲ್ಲಿ ಬೆಂಕಿಪೊಟ್ಟಣದಂತೆ ನೀರಿನಲ್ಲಿ ತೇಲುತ್ತಾ ಬರುತ್ತಿವೆ. ಈ ದೃಶ್ಯವನ್ನು ನೋಡಿದಾಗ ಮನುಷ್ಯನ ದೇಹದಲ್ಲೂ ಸಣ್ಣಗೆ ಕಂಪನವಾಗುವುದು ನಿಶ್ಚಿತ.

ಸುನಾಮಿಯ ಹೊಡೆತದ ಈ ಅದ್ಭುತ ದೃಶ್ಯ ನೋಡಿ ಈ ವಿಡಿಯೋದಲ್ಲಿ…

https://twitter.com/fasc1nate/status/1590940599381012480?s=20&t=j7V3e2OG36QcKHNldLggpw

ಈ ಮೈ ನಡುಗಿಸುವ ವಿಡಿಯೋವನ್ನು ಟ್ವಿಟರ್ ನಲ್ಲಿ ಫೆಸಿನೇಟಿಂಗ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 8.5 ಮಿಲಿಯನ್ ಜನರು ವೀಕ್ಷಿಸಿದ್ದಲ್ಲದೆ 91 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ನಿಮ್ಮ ಅನುಭವವೇನು ಕಮೆಂಟ್ ಮಾಡಿ ಹೇಳಿ ಮಿತ್ರರೇ.