ಹುಡುಗನ ಸಖತ್ ತಮಾಷೆಯ ವಿಡಿಯೋ ವೈರಲ್! ಮೊದಲು ಈ ವಿಡಿಯೋ ನೋಡಿ ಆಮೇಲೆ ಲೈಕ್ ಮಾಡಿ ಅಥವಾ ಬಿಡಿ 🤣🤣

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮಕ್ಕಳ ವಿಡಿಯೋಗಳು ಕೆಲವೊಮ್ಮೆ ನೆಟ್ಟಿಗರಿಗೆ ಆಶ್ಚರ್ಯ ಇನ್ನೂ ಕೆಲವೊಮ್ಮೆ ಸಖತ್ ಹಾಸ್ಯವನ್ನು ಕೊಡುತ್ತವೆ. ಮಕ್ಕಳ ಮೈಂಡ್ ಈ ರೀತಿ ಓಡುತ್ತದೆಯೇ ಎಂಬ ಪ್ರಶ್ನೆ ಇಂಥ ವಿಡಿಯೋ ನೋಡಿದ ನಂತರ ಹುಟ್ಟುತ್ತದೆ. ಸದ್ಯ ಇಲ್ಲಿ ನೋಡುವ ಇದೇ ರೀತಿಯ ಒಂದು ವಿಡಿಯೋ ನಮ್ಮ ಮನದಲ್ಲಿ ಯೋಚಿಸುವಂತೆ ಮಾಡುತ್ತದೆ.

ಈ ವಿಡಿಯೋ ಹಿಂದಿ ಭಾಷೆಯಲ್ಲಿದ್ದರೂ ಮಗುವಿನ ಮಾತು ಮಾತ್ರ ಸ್ಪಷ್ಟವಾಗಿ ತಿಳಿದು ಬರುತ್ತದೆ. ವ್ಯಕ್ತಿ ಒಬ್ಬ ಹುಡುಗನಿಗೆ ಅಂಕಿಗಳನ್ನು ಎಣಿಸಲು ಹೇಳುತ್ತಾನೆ. ಆಗ ಹುಡುಗ ಕ್ರಮವಾಗಿ ನಂಬರ್ಗಳನ್ನು ಹಿಂದಿಯಲ್ಲಿ ಎಣಿಸುತ್ತಾ ಹೋಗುತ್ತಾನೆ…ಏಕ್ (1), ದೋ(2), ತೀನ್(3) ಎನ್ನುತ್ತಾ ನಾಲ್ಕನ್ನು ಕೌಂಟ್ ಮಾಡದೇನೆ ನೇರ ಪಾಚ್(5) ಎಂದು ಬಿಡುತ್ತಾನೆ. ಹುಡುಗನಿಗೆ ಪ್ರಶ್ನೆ ಕೇಳುತ್ತಿರುವ ವ್ಯಕ್ತಿಯು (ಚಾರ್ (4) ಕಹಾ ಗಯಾ?) ನಾಲ್ಕು ಎಲ್ಲಿ ಹೋಯಿತು ಎಂದು ಕೇಳುತ್ತಾನೆ. ಅದಕ್ಕೆ ಹುಡುಗ ತುಂಬಾ ವಿನೀತನಾಗಿ ಅಷ್ಟೇ ಮಾರ್ಮಿಕವಾಗಿ ಉತ್ತರಿಸುತ್ತಾನೆ. ಆತನ ಈ ಉತ್ತರವನ್ನು ಕೇಳಿದ ನಂತರ ನಿಮಗೂ ಸಹ ನಗು ತಡೆದುಕೊಳ್ಳುವುದು ಸಾಧ್ಯವಿಲ್ಲ.

ಮೊದಲು ಈ ವಿಡಿಯೋ ನೋಡಿ…

 

View this post on Instagram

 

A post shared by Anurag Kushwaha (@anuragkushwaha123)

ಹುಡುಗನಿಗೆ ಪ್ರಸ್ತುತ ವ್ಯಕ್ತಿಯು ನಾಲ್ಕು ಎಲ್ಲಿ ಹೋಯಿತು ಎಂದು ಕೇಳಿದಾಗ ಚಾರ್ ತೊ ಮೇರೆ ಮೂಹ್ ಮೆ ಹೈ (ನಾಲ್ಕು ನನ್ನ ಬಾಯಿಯಲ್ಲಿದೆ) ಎಂದು ಉತ್ತರಿಸುತ್ತಾನೆ. ಈ ತಮಾಷೆಯ ವಿಡಿಯೋ instagram ನಲ್ಲಿ ಇಲ್ಲಿಯವರೆಗೆ 8 ಲಕ್ಷ 54 ಸಾವಿರ ವೀಕ್ಷಣೆಯನ್ನು ಪಡೆದಿದೆ.