ಟೀಮ್ ಇಂಡಿಯಾಕ್ಕೆ ಮರಳಲು ಪೃಥ್ವಿ ಶಾ ಗೆ ವಿಚಿತ್ರ ಟಾಸ್ಕ್ ಕೊಟ್ಟ ಆಯ್ಕೆದಾರರು : ಹಿಂದೆ ಯಾವ ಆಟಗಾರರಿಗೂ ಹಿಗೆ ಹೇಳಿರಲಿಲ್ಲ!
ಬಿಸಿಸಿಐ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು, ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕಡೆಗಣಿಸಲಾಗಿದೆ. ವರದಿಗಳ ಪ್ರಕಾರ, ಪೃಥ್ವಿ ಶಾ ಅವರನ್ನು ಆಯ್ಕೆಗಾಗಿ ಭಾರತ ತಂಡಕ್ಕೆ ಮರಳಲು ಕೆಲವು ಟಾಸ್ಕ್ ನೀಡಲಾಗಿದೆ.
ಪೃಥ್ವಿ ಶಾ ಕೊನೆಯ ಬಾರಿಗೆ 2020 ರಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು, ಅಲ್ಲಿ ಅವರು ಕೇವಲ 0 ಮತ್ತು 2 ರನ್ಗಳಿಗೆ ಔಟಾಗಿದ್ದರು. ನಂತರ ಇಂಗ್ಲೆಂಡ್ ವಿರುದ್ಧದ ಎಲ್ಲ ಬಗೆಯ ಪಂದ್ಯಗಳ ಸರಣಿಗೆ ಪೃಥ್ವಿ ಶಾ ಅವರನ್ನು ಕೈಬಿಡಲಾಯಿತು.
ಐಪಿಎಲ್ 2021 ರಲ್ಲಿ ಕೂಡ ಪೃಥ್ವಿ ಭರ್ಜರಿ ಫಾರ್ಮ್ ನಲ್ಲಿದ್ದರೂ, ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ, ಆಯ್ಕೆದಾರರು 24 ಆಟಗಾರರ ತಂಡವನ್ನು ಆಯ್ಕೆ ಮಾಡಿದರು. ಅದರಲ್ಲಿ ಪೃಥ್ವಿ ಶಾ ಸೇರಿದಂತೆ ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್ ಹೆಸರು ಕೂಡ ಇಲ್ಲ.

21 ವರ್ಷ ವಯಸ್ಸಿನ ಪೃಥ್ವಿ ಶಾ ಕ್ರೀಡಾಂಗಣದಲ್ಲಿ ಮೇಲೆ ನಿಧಾನವಾಗಿದ್ದಾರೆ, ಅಂದರೆ ಫಿಲ್ಡಿಂಗ್ ಮಾಡುವ ರೀತಿ ಸ್ಲೋ ಇದೆ, ಇದಕ್ಕೆ ಕಾರಣ ಅವರ ತೂಕ! 21 ವರ್ಷ ವಯಸ್ಸಿ ಪೃಥ್ವಿ ಸದ್ಯ 70 ಕೆ.ಜಿ ಗೂ ಹೆಚ್ಚು ತೂಕವಿದ್ದು ಅದು ಅವರ ಚಟುವಟಿಕೆಗೆ ಅಡ್ಡಿಯಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಇದೇ ಕಾರಣಕ್ಕೆ ಮಾಡದಿರುವ ಆಯ್ಕೆ ಮಾಡಿಲ್ಲವಂತೆ!
ಅವರು ಇನ್ನೂ ಕೆಲವು ಕಿಲೋಗಳಷ್ಟು ತೂಕ ಕಳೆದುಕೊಳ್ಳಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ, ಅವರು ಫೀಲ್ಡಿಂಗ್ನಲ್ಲಿ ಗಮನಹರಿಸಲು ಕಷ್ಟಪಡುತ್ತಿದ್ದರು. ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಶಾ ಬ್ಯಾಟಿಂಗ್ ಸುಧಾರಿಸಿಕೊಳ್ಳುವಲ್ಲಿ ಶ್ರಮಿಸಿದರು ಮತ್ತು ಯಶಸ್ವಿಯಾದರು. ಆದರೆ ಫಿಲ್ಡಿಂಗ್ ನಲ್ಲಿ ಅವರಿನ್ನೂ ಸುಧಾರಿಸಬೇಕಿದೆ.
ಪೃಥ್ವಿ ಶಾ ಪ್ರತಿಭಾನ್ವಿತರಾಗಿದ್ದು, ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಉತ್ತಮ ಆಟಗಾರರಾಗಿದ್ದು ಅವರನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಬಾರದು ಎಂಬುದು ಬಹುತೇಕರ ಅಭಿಪ್ರಾಯ. ರವಿಶಾಸ್ತ್ರಿ ಪೃಥ್ವಿ ಶಾ ಅವರಿಗೆ ತೂಕ ಇಳಿಸಿಕೊಳ್ಳುವ ಈ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಪೃಥ್ವಿ ಶಾ ತಮ್ಮ ಬ್ಯಾಟಿಂಗ್ನಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಅದ್ಬುತ ಫಲಿತಾಂಶಗಳನ್ನು ಕಂಡಿದ್ದಾರೆ. ಪೃಥ್ವಿ ಶಾ 2021 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, 165.40 ಸರಾಸರಿಯಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದರು! ಇದು ಆ ಟೂರ್ನಿಯಲ್ಲಿ ಒಂದು ದಾಖಲೆ.
ಅವರು ಐಪಿಎಲ್ನಲ್ಲೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಐಪಿಎಲ್ನಲ್ಲಿ ಪೃಥ್ವಿ ಶಾ 166 ಸ್ಟ್ರೈಕ್ ರೇಟ್ ನಲ್ಲಿ 8 ಪಂದ್ಯಗಳಿಂ 307 ರನ್ ಗಳಿಸಿದ್ದಾರೆ. ಪಾಯಿಂಟ್ಸ್ ಟೇಬಲ್ನಲ್ಲಿ ದೆಹಲಿಯ ತಂಡ ಅಗ್ರಸ್ಥಾನದಲ್ಲಿತ್ತು, ಆದರೆ ಐಪಿಎಲ್ ಬಯೋ ಬಬಲ್ ನಲ್ಲಿ ಕರೋನಾ ವೈರಸ್ ಪ್ರಕರಣ ಹೆಚ್ಚಾದ ನಂತರ ಮಂಡಳಿಯು ಟಿ 20 ಲೀಗ್ ಅನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿತು,
ಈಗ ತೂಕ ಇಳಿಸಿಕೊಳ್ಳುವ ವಿಚಿತ್ರ ಟಾಸ್ಕ್ ಪಡೆದಿರುವ ಪೃಥ್ವಿ ಶಾ ಮುಂದಿನ ದಿನಗಳಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಮತ್ತು ಮುಂದಿನ ಸರಣಿಗೆ ಭಾರತೀಯ ತಂಡಕ್ಕೆ ಮರಳುತ್ತಾರೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ.
-Team Infotrend