ಶಾರುಖ್ ಖಾನ್ ನಂತೆ ಕಾಣುವ ತುಂಬಾ ಜನ ಇದ್ದಾರಾದರೂ ಎಲ್ಲರಿಗಿಂತ ಅತಿ ಹೆಚ್ಚು ಹೋಲುವ ವ್ಯಕ್ತಿ ಈತ! ಈ ಡೂಪ್ಲಿಕೇಟ್ ಶಾರುಖ್ ಯಾರು ಗೊತ್ತಾ?

ಬಾಲಿವುಡ್ ಬಾದಶಾ ಎಂದೇ ಕರೆಯಲ್ಪುಡುವ ಬಾಲಿವುಡ್ ನ ಶ್ರೀಮಂತ ನಟರಲ್ಲಿ ಮೊದಲ ಸ್ಥಾನದಲ್ಲಿರುವ ನಟ ನಿರ್ಮಾಪಕ ಶಾರುಖ್ ಖಾನ್ ಅವರು ಎಷ್ಟೊಂದು ಫೇಮಸ್ ಎಂದು ನಿಮಗೆಲ್ಲ ಗೊತ್ತೇ ಇದೆ, ಇನ್ನೂ ಇವರ ಅಭಿಮಾನಿಗಳಿಗೂ ಕೊರತೆ ಏನಿಲ್ಲ ಅದರಲ್ಲೂ ಅವರಂತೆಯೇ ಹೇರ್ ಸ್ಟೈಲ್, ಮಾತನಾಡುವ ಸ್ಟೈಲ್ ಹಾವ ಭಾವ ಮಾಡುವ ಯುವಕರಿಗೂ ಏನೂ ಕೊರತೆ ಇಲ್ಲ ಆದರೆ ಇಲ್ಲೊಬ್ಬ ಯುವಕ ನೋಡಲು ಥೇಟ್ ಶಾರುಖ್ ಖಾನ್ ರಂತೆಯೇ ಇದ್ದಾನೆ. ಯಾರು ಈ ವ್ಯಕ್ತಿ ನೋಡುವಾ ಬನ್ನಿ…

ಆತನ ಹೆಸರು ಇಬ್ರಾಹಿಂ ಎಂದು, ಜುನಾಗಡ್ ದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿರುವ ಈತ ಸ್ವತಃ ತಾನೇ ಹೇಳುವ ಪ್ರಕಾರ ಈ ಕೆಲಸದಿಂದ ಬರುವ ಹಣವೆಲ್ಲ ಕೇವಲ ಬಟ್ಟೆ ಮತ್ತು ಸ್ಟೈಲಿಶ್ ಚಸ್ಮಾಗಳನ್ನು ಕೊಂದುಕೊಳ್ಳಲೇ ಖರ್ಚಾಗುತ್ತದಂತೆ. ಈತ ಶಾರುಖ್ ಖಾನ್ ರಂತೆಯೇ ಆಕ್ಟಿಂಗ್ ಹಾಗೂ ಡೈಲಾಗ್ ಕೂಡ ಹೊಡೆಯುತ್ತಾನೆ.

ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ರಂತೆ ನೋಡಲು ನಿಖರವಾಗಿ ಯಾರಾದರೂ ಇದ್ದಾರೆ ಎಂದರೆ ಅದು ಗುಜರಾತ್ ನ ಈ ವ್ಯಕ್ತಿ, ಈತನ ಪೂರ್ತಿ ಹೆಸರು ಇಬ್ರಾಹಿಂ ಖಾದ್ರಿ, ನಿಜವಾದ ಶಾರುಖ್ ಖಾನ್ ರನ್ನು ಭೇಟಿಯಾಗುವ ಆಸೆಯೊಂದಿಗೆ ಅವರು ಡೂಪ್ಲಿಕೇಟ್ ಶಾರುಖ್ ಎಂಬ ಹಣೆಪಟ್ಟಿಯಿಂದ ತಮ್ಮ ನಿತ್ಯದ ಉಪಜೀವನ ನಡೆಸುತ್ತಾರೆ.

ಇಬ್ರಾಹಿಂ ಶಾರುಖ್ ಖಾನ್ ರಂತೆಯೇ ಬಟ್ಟೆ ತೊಟ್ಟು ಅವರಂತೆಯೇ ಹೇರ್ ಸ್ಟೈಲ್ ಮಾಡಿ ಫೋಟೋ ಶೂಟ್ ಮಾಡಿಸುತ್ತಾನೆ. ಅಷ್ಟೇ ಅಲ್ಲದೇ, ಅವರಂತೆಯೇ ನಟಿಸಿ ಕೆಲವು ವಿಡಿಯೋಗಳನ್ನು ಸಹ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾನೆ. ಇಬ್ರಾಹಿಂ ನಿಗೂ ಕೂಡ ಫ್ಯಾನ್ ಫಾಲೋಯಿಂಗ್ ಜಾಸ್ತಿನೇ ಇದೆ..!

ಜುನಾಗಡ್ ದಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿರುವ ಇಬ್ರಹಿಂ ಅದರಿಂದ ಬಂದ ಹಣದಲ್ಲಿ ಶಾರುಖ್ ರಂತೆಯೇ ಕಾಣಲು ಬಟ್ಟೆ ಹಾಗೂ ಚಸ್ಮಾ ಕೊಂಡುಕೊಳ್ಳಲು ಖರ್ಚು ಮಾಡುತ್ತಾನಂತೆ, ಹೀಗೆಲ್ಲ ಬಟ್ಟೆ ತೊಟ್ಟು ಫೋಟೋಸ್ ಹಾಗೂ ವಿಡಿಯೋಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಫೇಮಸ್ ಆದನು.

ನಂತರ ಈತನನ್ನು ಕೆಲವು ಪ್ರೋಗ್ರಾಮ್ ಗಳಿಗೆ ಕರೆಸಿದ್ದಾರಂತೆ, ಇದರಿಂದ ಈತನಿಗೆ ಉತ್ತಮ ಮಟ್ಟದಲ್ಲಿ ಹಣವೂ ಕೂಡ ಸಿಗುತ್ತಿದೆ ಎಂದು ಸ್ವತಃ ಇಬ್ರಹಿಂ ಹೇಳಿಕೊಳ್ಳುತ್ತಾನೆ. ಕೊರೊನ ಮಹಾಮಾರಿಯ ಅಟ್ಟಹಾಸ ಮುಗಿದ ಕೂಡಲೇ ಶಾರುಖ್ ಖಾನ್ ರನ್ನು ಭೇಟಿಯಾಗಲು ಕಾಯುತ್ತಿದ್ದಾನೆ ಇಬ್ರಾಹಿಂ.

ಇಬ್ರಾಹಿಂ ಶಾರುಖ್ ಖಾನ್ ರವರ ದೀವಾನ, ಜೋಶ್, ಕುಚ್ ಕುಚ್ ಹೋತಾ ಹೈ, ಡಾನ್, ರಯಿಸ್ ನಂತಹ ಫಿಲಂ ಗಳಲ್ಲಿನ ಶಾರುಖ್ ರ ವೇಷ ತೊಟ್ಟು ಫೋಟೋಸ್ ಹಾಗೂ ಆ ಚಿತ್ರಗಳಲ್ಲಿನ ವಿಡಿಯೋಸ್ ಮಾಡಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಗಳಲ್ಲಿ ಅಪ್ಲೋಡ್ ಮಾಡುತ್ತಾನೆ.

ಈತನ ಈ ವಿಡಿಯೋಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಪ್ರಶಂಸೆಯ ಕಾಮೆಂಟ್ಸ್ ಬರುತ್ತಿವೆ. ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಬರೋಬ್ಬರಿ 50 ಸಾವಿರಕ್ಕಿಂತಲೂ ಹೆಚ್ಚಿನ ಫಾಲ್ಲೋರ್ಸ್ ಇದ್ದಾರೆ..! ಇವರ ವಿಡಿಯೋ ಹಾಗೂ ಫೋಟೋ ನೋಡಿದರೆ ನಿಮಗೆಲ್ಲ ಇದು ಇಬ್ರಾಹಿಂ ಅಥವಾ ಶಾರುಖ್ ಎಂದು ಕನ್ಫ್ಯೂಸ್ ಆಗುವುದಂತೂ ಗ್ಯಾರಂಟಿ..!
-ಮಂಜುನಾಥ್