ಶನಿಕಾಟ ಸುರುವಾಗಿದೆ ಅಂತ ತಿಳಿಯುವುದು ಹೇಗೆ? ಶನಿಯ ವಕ್ರದೃಷ್ಟಿಯಿಂದ ಬಚಾವಾಗುವುದು ಹೇಗೆ? ಶನಿ ದೇವನ ಬಗ್ಗೆ 16 ಅಂಶಗಳು
ಜ್ಯೋತಿಷ್ಯದಲ್ಲಿ ಶನಿದೇವನನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಅವನನ್ನು ಸಂತೋಷಪಡಿಸುವವನಿಗೆ ಯಾವುದಕ್ಕೂ ಕೊರತೆಯಿಲ್ಲ. ಅವನು ರಾತ್ರೋರಾತ್ರಿ ರಾಜನಾಗುತ್ತಾನೆ. ಇನ್ನು ಶನಿಯ ವಕ್ರದೃಷ್ಟಿ ಬಿದ್ದರೆ ಆ ಮನುಷ್ಯ ಉದ್ದಾರವಾಗುವುದು ಕಷ್ಟ, ಇದಕ್ಕೆ ಸಾಡೇಸಾತಿ ಅನ್ನುತ್ತಾರೆ. ಹಾಗಂದರೇನು, ಅದರ ಲಕ್ಷಣಗಳೇನು, ಅದಕ್ಕೆ ಪರಿಹಾರಗಳೇನು ನೋಡುವಾ ಬನ್ನಿ…
ಶನಿಯ ಸಾಡೆ ಸಾತಿ ಅಂದರೇನು?
ಶನಿಯ ನಿಧಾನಗತಿಯ ಚಲನೆಯಿಂದಾಗಿ, ಈ ಗ್ರಹವು ಸುಮಾರು ಎರಡೂವರೆ ವರ್ಷಗಳ ಕಾಲ ರಾಶಿಚಕ್ರದಲ್ಲಿ ಚಲಿಸುತ್ತದೆ, ಹೀಗಾಗಿ ಒಂದು ಹಿಂದಿನ ಮತ್ತು ಮುಂದಿನ ಗ್ರಹದ ಮೇಲೆ ವರ್ತಮಾನದ ಮೊದಲು ಪರಿಣಾಮ ಬೀರುತ್ತದೆ. ಅಂದರೆ ತಾನಿರುವ ಗ್ರಹದಲ್ಲಿ ಎರಡೂವರೆ ವರ್ಷ, ಅದರ ಹಿಂದಿನ ಗ್ರಹದಲ್ಲಿ ಎರಡೂವರೆ ವರ್ಷ, ಅದರ ಮುಂದಿನ ಗೃಹದಲ್ಲಿ ಎರಡೂವರೆ ವರ್ಷ, ಅಂದರೆ ಇದರ ಒಟ್ಟು ಅವಧಿ ಏಳೂವರೆ ವರ್ಷಗಳು. ಭಾರತೀಯ ಜ್ಯೋತಿಷ್ಯದಲ್ಲಿ ಇದನ್ನು ಸಾಡೆ ಸಾತಿ ಎಂದು ಕರೆಯಲಾಗುತ್ತದೆ.

ಸಾಡೆಸಾತಿಯಲ್ಲಿ ಮೂರು ಹಂತ :
ಎರಡೂವರೆ ವರ್ಷಗಳ ಮೂರು ಕಂತುಗಳು ಇರುವುದರಿಂದ ಶನಿಯ ಸಾಡೆಸಾತಿ ಕೂಡ ಮೂರು ಹಂತಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಶನಿಯು ಮಾನಸಿಕವಾಗಿ ತೊಂದರೆ ಕೊಟ್ಟು ಕಾಡುತ್ತಾನೆ. ಆಗ ವಿನಾಕಾರಣ ಕಿರಿಕಿರಿ – ವಿಪರೀತ ತಲೆನೋವು ಇರುತ್ತದೆ. ಇನ್ನು ಎರಡನೇ ಹಂತದಲ್ಲಿ ಆರ್ಥಿಕ ಮತ್ತು ದೈಹಿಕ ಸಮಸ್ಯೆ ಸುರುವಾಗುತ್ತವೆ. ಉದ್ಯೋಗದಲ್ಲಿ ನಷ್ಟ, ಕಾಯಿಲೆ, ಅಪಘಾತ ಇವು ಘಟಿಸಬಹುದು.
ಇನ್ನು ಇದರ ಮೂರನೇ ಹಂತ ಭಾರಿ ಕೆಟ್ಟದ್ದು ಎಂದು ಸಾಮಾನ್ಯವಾಗಿ ಜನರು ಭಾವಿಸುತ್ತಾರಾದರೂ, ಮೂರನೇ ಹಂತ ಉತ್ತಮವೆಂದು ಹಂತ. ಏಕೆಂದರೆ ಇಲ್ಲಿ ಶನಿದೇವ ಹಿಂದೆ ಮಾಡಿದ ನಷ್ಟವನ್ನು ಸರಿದೂಗಿಸುತ್ತಾನೆ. ಹಿಂದಿನ ಹಂತದಲ್ಲಿನ ಅವರ ನಡುವಳಿಕೆಯಿಂದಾಗಿ ಕೊಡಬೇಕಾದುದನ್ನು ಕೊಡುತ್ತಾನೆ.

ಶನಿದೇವನ ಬಗ್ಗೆ 16 ಅಶಂಗಳು ಇಲ್ಲಿವೆ ನೋಡಿ…
1) ಶನಿದೇವ ಸೂರ್ಯನ ಮಗ. ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ಮೃತ್ಯುಲೋಕದಲ್ಲಿ ಜನರಿಗೆ ನೀಡುವಾತ.
2) ಶನಿದೇವನನ್ನು ನ್ಯಾಯಾಧೀಶರು ಎಂದು ಕರೆಯಲಾಗಿದೆ. ಅವನು ತಪ್ಪನ್ನು ಕ್ಷಮಿಸುವುದಿಲ್ಲ.
3) ಶನಿದೇವ ಬಣ್ಣ ಕಪ್ಪು. ಎಷ್ಟು ಕಪ್ಪು ಎಂದರೆ ಅದರ ಮುಂದೆ ಎಲ್ಲಾ ಬಣ್ಣಗಳು ಬಣ್ಣರಹಿತವಾಗುತ್ತವೆ.
4) ಶನಿದೇವನಿಗೆ ಸಂಬಂಧಪಟ್ಟ ಲೋಹವನ್ನು ಕಬ್ಬಿಣ-ಉಕ್ಕು ಎಂದು ಪರಿಗಣಿಸಲಾಗುತ್ತದೆ.
5) ಶನಿದೇವನಿಗೆ – ಸಾಸಿವೆ ಎಣ್ಣೆ, ಕಲ್ಲಿದ್ದಲು, ಕಬ್ಬಿಣ, ಕಪ್ಪು ಎಳ್ಳು, ಉದ್ದು, ಚಪ್ಪಲಿ ನೆಚ್ಚಿನ ವಸ್ತುಗಳು.
6) ತನ್ನ ಕೆಲಸವನ್ನು ತಾನು ಪ್ರಾಮಾಣಿಕವಾಗಿ ಮಾಡುವ ವ್ಯಕ್ತಿಯ ಮೇಲೆ ಶನಿದೇವ ಸಂತೋಷವಾಗಿರುತ್ತಾನೆ.
7) ಶನಿದೇವನಿಂದ ಆಶೀರ್ವದಿಸಲ್ಪಟ್ಟವನು ಆಧ್ಯಾತ್ಮಿಕತೆಯ ಕಡೆಗೆ ತಿರುಗುತ್ತಾನೆ.
8) ಯಾರ ಜಾತಕದಲ್ಲಿ ಶನಿದೇವ ಒಳ್ಳೆಯವನಾಗಿರುತ್ತಾನೊ ಆ ಜನರು ಅವಿಭಕ್ತ ಕುಟುಂಬದಲ್ಲಿ ವಾಸಿಸಲು ಬಯಸುತ್ತಾರೆ.
9) ಶನಿದೇವ ಯಾರ ಬಗ್ಗೆ ಒಳ್ಳೆ ಭಾವನೆ ತಾಳುತ್ತಾನೋ ಅವರು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆಧ್ಯಾತ್ಮಿಕ, ಆಡಳಿತ ಇತ್ಯಾದಿಗಳಲ್ಲಿ ಆ ವ್ಯಕ್ತಿಗೆ ಉತ್ತಮ ಸ್ಥಾನವನ್ನು ನೀಡುತ್ತಾನೆ.

10) ಶನಿದೇವ ರೋಗಗಳಿಂದ ಪರಿಹಾರವನ್ನು ನೀಡುತ್ತಾನೆ. ಅವನ ಅನುಗ್ರಹದಿಂದಾಗಿ, ವಯಸ್ಸು ಹೆಚ್ಚಾಗುತ್ತದೆ.
11) ಶನಿದೇವನನ್ನು ಕಲಿಯುಗದ ನಿಜವಾದ ದೇವರು ಎಂದು ಪರಿಗಣಿಸಲಾಗಿದೆ.
12) ಶನಿದೇವ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಾನೆ. ತಾಯಿಗಾಗಿ ಅವನು ತನ್ನ ತಂದೆಯೊಂದಿಗೆ ಹೋರಾಡಿದನು.
13) ಶನಿದೇವ ಯಾವಾಗಲೂ ಬಡವರಿಗೆ ಸಹಾಯ ಮಾಡುವುದರಲ್ಲಿ ಸಂತೋಷವಾಗಿರುತ್ತಾನೆ.
14) ಶನಿದೇವ ಸ್ವತಃ ಶಿವನನ್ನು ಪೂಜಿಸುತ್ತಾನೆ. ಹೀಗಾಗಿ ಶಿವನ ಭಕ್ತರೆಂದರೆ ಶನಿಗೆ ಇಷ್ಟ.
15) ಶನಿಯ ವಾಹನ ರಣಹದ್ದು.
16) ಶನಿದೇವನ ರಥವನ್ನು ಕಬ್ಬಿಣದಿಂದ ಮಾಡಲಾಗಿದೆ.
ಶನಿಯ ಸಾಡೆಸಾತಿಯ ಚಿಹ್ನೆಗಳು :
*ಕೈ ಬಣ್ಣ (ಅಂಗೈ ಬಣ್ಣ) ಬದಲಾಗುವುದು ಅಥವಾ ಅಂಗೈ ರೇಖೆಗಳಲ್ಲಿ ನೀಲಿ ಅಥವಾ ಕಪ್ಪು ಬಣ್ಣದ ಕೆಲವು ಕಲೆಗಳು ಆಗುವುದು.
*ಹಣೆಯ ಮೇಲೆ ಕಪ್ಪು ಬಣ್ಣ ಕಾಣುವುದು, ಹೊಳಪು ಕಮ್ಮಿಯಾಗುವುದು. ಯಾರಿಂದಾದರೂ ಅವಮಾನ ಆಗಬಹುದೆಂಬ ಭಯದಿಂದ ಸುಖಾ ಸುಮ್ಮನೆ ಯಾವಾಗಲೂ ಚಿಂತೆ ಕಾಡುತ್ತಿರುತ್ತದೆ.

*ಉಗುರು ದುರ್ಬಲಗೊಳ್ಳುವುವು, ತಾವಾಗೇ ಮುರಿಯತೊಡಗುತ್ತವೆ.
*ಕಣ್ಣುಗಳ ಸುತ್ತ ಕಪ್ಪು ಸರ್ಕಲ್ ಕಾಣಿಸುತ್ತದೆ.
*ಮಾತಿನಲ್ಲಿ ಒರಟುತನ ಬರುತ್ತದೆ, ಕೋಪ ಮೂಗಿನ ಮೇಲೆಯೇ ಇರುತ್ತದೆ.
*ಸದಕಾಲ ಉ’ಗ್ರ ಆಲೋಚನೆಗಳು – ಅಥವಾ ವಿ’ನಾ’ಶಕಾರಿ ಆಲೋಚನೆಗಳು ಇರುವುವು.
*ಕುಟುಂಬದಲ್ಲಿ ಅಪಶ್ರುತಿ ಕಾಡುತ್ತಿರುತ್ತದೆ.
ಶನಿ ದೋಷವನ್ನು ತಪ್ಪಿಸಲು ಪರಿಹಾರಗಳು ಅಥವಾ ಸಾಡೆಸಾತಿಗೆ ಪರಿಹಾರ :
1) ಜ್ಯೋತಿಷಿಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಅರಳಿ ಮರಕ್ಕೆ ನೀರನ್ನು ಅರ್ಪಿಸಿ ಪೂಜೆ ಮಾಡಬೇಕು. ಸಂಜೆ ಅರಳಿ ಮರದ ಬಳಿ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸುವ ಮೂಲಕ ಪೂಜಿಸಿ, ಶನಿಯ ಸಾಡೆ ಸಾತಿ ಸಮಯದಲ್ಲಿ ಪಕ್ಷಿಗಳಿಗೆ ಸೇವೆ ಸಲ್ಲಿಸಿದ ವ್ಯಕ್ತಿಗೆ ಶನಿದೇವ ಕಷ್ಟ ಕಮ್ಮಿ ಮಾಡುತ್ತಾನೆ. ಪಕ್ಷಿಗಳಿಗೆ ಆಹಾರ ದಾನ್ಯ – ನೀರು ಒದಗಿಸಿದರೆ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
2) ಶನಿ ಸ್ತ್ರೋತ್ರವನ್ನು ಪಠಿಸಿದರೆ ಶನಿದೇವ ಸಂತಸಗೊಳ್ಳುತ್ತಾನೆ.
3) ಶನಿವಾರ ಶನಿದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶನಿದೇವನಿಗೆ ಅರ್ಪಿಸಬೇಕು.
4) ಸಂಕಟಮೋಚನ ಹನುಮಂತನನ್ನು ಪೂಜಿಸುವ ಮೂಲಕ ಕೂಡ ಶನಿದೇವ ಶಾಂತವಾಗುತ್ತಾನೆ. ಶನಿಯ ಸಾಡೆಸಾತಿ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಆಂಜನೇಯನನ್ನು ಆರಾಧಿಸಿ ಮತ್ತು ಹನುಮಾನ್ ಚಾಲಿಸಾ ಓದಿ.