Shocking video; ದೇಹದಿಂದ ರುಂಡ ಬೇರೆಯಾದರೂ ಸಿಟ್ಟಿನಲ್ಲಿ ತನ್ನ ಮುಂಡವನ್ನೇ ಕಚ್ಚುತ್ತಿರುವ ಹಾವು..!

ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುವ ಅನೇಕ ವಿಡಿಯೋಗಳು ಇಂಟರ್ನೆಟ್ ಯೂಸರ್ ಗಳಿಗೆ ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತದೆ. ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಸಹ ನೋಡುಗನಿಗೆ ಶಾಕ್ ನೀಡುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ವಿಷಾರಿ ಹಾವು ಕಂಡುಬರುತ್ತಿದೆ. ಈ ಹಾವು ಎರಡು ಭಾಗಗಳಾಗಿದೆ. ತಲೆ ಮತ್ತು ದೇಹ ಹೀಗೆ ಎರಡು ಬೇರೆ ಬೇರೆ ಭಾಗಗಳಾಗಿವೆ. ಇಲ್ಲಿ ಕುತ್ತಿಗೆಯಿಂದ ಬೇರೆಯಾದ ಉಳಿದ ದೇಹದ ಭಾಗವು ಒದ್ದಾಡುತ್ತಾ ಒದ್ದಾಡುತ್ತಾ ತನ್ನದೇ ಮುಖದ ಮುಂದಿನ ಭಾಗಕ್ಕೆ ಬಂದು ಟಚ್ ಆಗುವುದೇ ತಡ, ಕುತ್ತಿಗೆಯ ಮೇಲಿನ ತುಣಕಾದ ಭಾಗದಿಂದ ಒಮ್ಮೆಲೇ ಬಾಯಿ ತೆರೆದು ತನ್ನ ದೇಹವನ್ನೇ ಸಿಟ್ಟಿನಿಂದ ಕಚ್ಚಲು ಮುಂದಾಗುತ್ತದೆ ಹಾವು. ಈ ದೃಶ್ಯ ನೋಡುಗನಿಗೆ ನಿಜಕ್ಕೂ ಅದ್ಭುತ ಮತ್ತು ಆಶ್ಚರ್ಯವನ್ನು ತರಿಸುತ್ತದೆ. ಈ ರೀತಿಯ ವಿಚಿತ್ರ ದೃಶ್ಯ ಇದಕ್ಕೂ ಮೊದಲು ಬಹುಶಃ ನೋಡಲಿಕ್ಕಿಲ್ಲ ಎನಿಸುತ್ತದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Na Lida do Agro® (@na_lida_do_agro)

ಹಾವಿನ ಈ ವಿಚಿತ್ರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ na _lida_do_agro ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 19.2 ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದೆ. ಮತ್ತು 5 ಲಕ್ಷ 10 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.