ಶೂಟಿಂಗ್ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಹಾವು ಹಿಡಿಯಲು ಮುಂದಾದ ಬಾಲಿವುಡ್ ನಟ ವಿದ್ಯುತ್! ಮುಂದೇನಾಯಿತು..? ನೋಡಿ ಈ Video

ಸೋಶಿಯಲ್ ಮೀಡಿಯಾದಲ್ಲಿ ವಿದ್ಯುತ್ ಜಾಮ್ ವಾಲಾ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಇವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ಫೋಟೋ ಮತ್ತು ವಿಡಿಯೋಗಳು ಅಭಿಮಾನಿಗಳಿಗೆ ಯಾವತ್ತು ಚರ್ಚೆಯ ವಿಷಯವಾಗುತ್ತವೆ.

ಇವರು ಅರಣ್ಯದ ಒಂದು ಪೊದೆಯಲ್ಲಿ ಹಾವು ಹಿಡಿಯುತ್ತಿರುವ ವಿಡಿಯೋ ಒಂದು ಸಖತ್ ವೇಗದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವಿದ್ಯುತ್ ಅವರು ಹಾವು ಹಿಡಿಯುವ ದೃಶ್ಯ ಕಂಡು ಬರುತ್ತಿದೆ. ಹಾವನ್ನು ಹಿಡಿಯುವ ಪ್ರಯತ್ನದಲ್ಲಿ ಅವರ ಕೈಗೆ ಬೇರೆ ವಸ್ತುವೊಂದು ಸಿಕ್ಕಿದೆ.

ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋವನ್ನು ವೀಕ್ಷಿಸುವವನಿಗೆ ಸ್ವಲ್ಪ ಭಯ, ಆತಂಕವಾಗದೆ ಇರಲಾರದು. ಏಕೆಂದರೆ ಅರಣ್ಯದಲ್ಲಿರುವ ಆ ಹಚ್ಚಹಸಿರಿನ ಪೊದೆಯಲ್ಲಿ ವಿದ್ಯುತ್ ಅವರು ತುಂಬಾ ಸೀರಿಯಸ್ ಆಗಿ ಕೈ ಹಾಕಿ ಹಾವನ್ನು ಹಿಡಿಯುವುದನ್ನು ನೋಡಿದರೆ ನೋಡುಗರಿಗೆ ಮುಂದೇನು ಗಂಡಾಂತರ ಕಾದಿದೆ ಎಂದು ಎನಿಸುತ್ತದೆ. ಈ ಎಲ್ಲ ಪ್ರಯತ್ನ ನಡೆದಾಗ ಬದಿಗೆ ನಿಂತ ಜನರು ಒಂದೇ ಸಮನೆ ಅರಚುತ್ತಿದ್ದಾರೆ, ಮತ್ತು ಕೆಲವು ಸೂಚನೆಗಳನ್ನು ಕೊಡುತ್ತಿದ್ದಾರೆ.

View this post on Instagram

This is how it's done😶 #CountryBoy

A post shared by Vidyut Jammwal (@mevidyutjammwal) on

ಮುಂದೇನಾಗುತ್ತದೆ…. ಮುಂದೇನಾಗುತ್ತದೆ…. ಎಂದು ನೋಡುಗರು ಕಾಯುತ್ತಿರುವಾಗ ವಿದ್ಯುತ್ ಅವರ ಕೈಯಲ್ಲಿ ಹಾವು ಸಿಕ್ಕಂತೆ ಭಾಸವಾಗುತ್ತದೆ. ಇನ್ನೇನು ಹಾವನ್ನು ಹಿಡಿದು ಬದಿಗೆ ತೆಗೆದೇ ತೆಗೆಯುತ್ತಾರೆ ಎನ್ನುವಾಗ ಅವರ ಕೈಯಲ್ಲಿ ಕಾಣಿಸುತ್ತದೆ ಬೆಲ್ಟ್! ಆ ಬೆಲ್ಟನ್ನು ಜಾಡಿಸಿ ತಮ್ಮ ಜೀನ್ಸ್ ಪ್ಯಾಂಟ್ ಗೆ ಧರಿಸಿಕೊಳ್ಳುತ್ತಾರೆ. ಈ ರೀತಿಯ ತುಂಬಾ ಮಜವಾದ ಫನ್ನಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೇಕೇ ಹಾಕುತ್ತಿದೆ.