VIDEO : ಕ್ಯಾಮೆರಾ ಎದುರೇ ಶಾರ್ಟ್ಸ್ ಸರಿ ಮಾಡಿಕೊಂಡ ರಾಖಿ ಸಾವಂತ್ : ಆ ವಿಡಿಯೊವನ್ನು ಕೂಡ ವೈರಲ್ ಮಾಡಿದ ಟ್ರೋಲಿಗರು!

ಅಂಥ ಮಹತ್ವ ಏನಿಲ್ಲದಿದ್ದರೂ ರಾಖಿ ಸಾವಂತ್ ಅವರ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ರಾಖಿ ಸಾವಂತ್ ಭರ್ತಿ ಟ್ರೋಲ್ ಆಗಿದ್ದಾರೆ. ಆದರೆ ರಾಖಿ ಇದಕ್ಕೆ ಯಾವುದೇ ಮಹತ್ವವನ್ನೇ ಕೊಟ್ಟಿಲ್ಲ. ರಾಖಿ ಸಾವಂತ್ ಆವಾಗಾವಾಗ ಚರ್ಚೆಯಲ್ಲಿ ಇರುತ್ತಾರೆ. ಅವರ ವಿಭಿನ್ನ ಹೇಳಿಕೆಗಳು ವೈರಲ್ ಆಗುವುದುಂಟು.

ರಾಖಿ ಪ್ರತಿದಿನ ಸಂಜೆ ಕಾಫಿ ಕುಡಿಯಲು ಹೋಗುತ್ತಾಳೆ ಮತ್ತು ಪಾಪರಾಜಿಗಳು ಅವಳನ್ನು ಬಿಟ್ಟು ಬಿಡದೇ ಹಿಂಬಾಲಿಸುತ್ತಾರೆ. ಎರಡು ದಿನಗಳ ಹಿಂದೆ ಶುಕ್ರವಾರವೂ ಇದೇ ರೀತಿ ಆಗಿದೆ, ಆದರೆ ಈ ಬಾರಿ ರಾಖಿಗೆ ಅವಮಾನವಾದಂತಾಗಿದೆ. ರಾಖಿ ತೊಟ್ಟಿದ್ದ ಶಾರ್ಟ್ಸ್ ಸಿಗಾಕಿಕೊಂಡಿದ್ದು ಅದನ್ನು ಕ್ಯಾಮೆರಾದ ಮುಂದೆಯೇ ಸರಿ ಮಾಡಿಕೊಂಡಿದ್ದಾರೆ.

ಇದು ರಾಖಿಗಾಗಲಿ ಅಥವಾ ಆ ರೀತಿ ಬಟ್ಟೆ ತೊಡುವ ಬೇರೆಯವರಿಗಾಗಲಿ ಅಂಥ ದೊಡ್ಡ ಸಂಗತಿಯೇನಲ್ಲ, ಆದರೂ ರಾಖಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ತಿ ವೈರಲ್ ಆಗುತ್ತಿದೆ. ಇದರಲ್ಲಿ ಅಂಥ ಸಂಗತಿ ಏನಿದೆಯೋ ಗೊತ್ತಿಲ್ಲ, ಜನ ಮಾತ್ರ ಟ್ರೋಲ್ ಮಾಡುತ್ತಿದ್ದಾರೆ.

ಈ ವೀಡಿಯೊದಲ್ಲಿ, ರಾಖಿ ಸಾವಂತ್ ಕಾರಿನಿಂದ ಇಳಿದು ಕಾಫಿ ಶಾಪ್ ಕಡೆಗೆ ಹೋಗುತ್ತಿದ್ದಾಳೆ, ಅಲ್ಲಿಗೆ ಅವಳು ಪ್ರತಿದಿನ ಹೋಗುತ್ತಾಳೆ. ರಾಖಿ ಸಾವಂತ್ ತನ್ನ ತೊಡೆಯ ನಡುವೆ ಸಿಲುಕಿದ್ದ ಶಾರ್ಟ್ಸ್ ಅನ್ನು ಕ್ಯಾಮೆರಾದ ಮುಂದೆಯೇ ಸರಿಪಡಿಸಿಕೊಳ್ಳಲು ಪ್ರಾರಂಭಿಸುತ್ತಾಳೆ. ಈಗ ಟ್ರೋಲರ್‌ ಗಳು ಈ ವಿಡಿಯೋ ಬಗ್ಗೆ ಸಾಕಷ್ಟು ಕಾಲೆಳೆಯುವ ಮೂಲಕ ರಾಖಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಅವಳು ಚಡ್ಡಿ ಸರಿಪಡಿಸಿಕೊಳ್ಳುತ್ತಾ ನಾಣು ದಪ್ಪಗಾಗಿದ್ದೀನಾ? ಎಂದು ಫೋಟೊಗ್ರಾಫರ್ ನನ್ನೇ ಕೇಳಿದಳು. ಅದಕ್ಕೆ ಅನೇಕ ಪಾಪರಾಜಿಗಳು ಹೌದು ಎಂದು ಹೇಳಿದರು! ರಾಖಿಗೆ ಇವೆಲ್ಲ ಮಾಮೂಲಾದರೂ ಜನರಿಗೆ ವೈರಲ್ ಮಾಡೋಕೆ ಒಂದು ಮ್ಯಾಟರ್ ಸಿಕ್ಕಹಾಗಾಯಿತಷ್ಟೇ.

ರಾಖಿ ಸಾವಂತ್‌ ಗೆ ಇದು ಮಾಮೂಲು, ಅವಳು ಸಂಪೂರ್ಣ ಆತ್ಮವಿಶ್ವಾಸದಿಂದ ಕಾಣುತ್ತಾಳೆ. ರಾಖಿ ಸಾವಂತ್ ಅವರು ಮತ್ತೊಂದು ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿಯ ಸಂಬಂಧದ ಬಗ್ಗೆ ಜ್ಞಾನವನ್ನೂ ನೀಡಿದ್ದಾರೆ. ಇದರೊಂದಿಗೆ ಅವರು ನಿಶಾ ರಾವಲ್ ಮತ್ತು ಅವರ ಪತಿ ಕರಣ್ ಮೆಹ್ರಾ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ರಾಖಿ ಮತ್ತಷ್ಟು ಮಾತನಾಡುತ್ತಾ, ‘ನನ್ನ ಪತಿ ಕೂಡ ಶೀಘ್ರದಲ್ಲೇ ಬರಲಿ ಎಂದು ಪ್ರಾರ್ಥಿಸಿ. ಅವನು ಕೆನಡಾದಲ್ಲಿದ್ದಾನೆ, ಅವನು ಎಲ್ಲಿ ರೋಮಿಂಗ್ ಮಾಡುತ್ತಾನೆಂದು ನನಗೆ ತಿಳಿದಿಲ್ಲ. ಎಂದರು. ಪತಿಯೊಂದಿಗೆ ಮಾತುಕತೆ ಇದೆಯೇ ಎಂದು ಪಾಪರಾಜಿ ಕೇಳಿದರು, ಇದಕ್ಕೆ ಪ್ರತಿಕ್ರಿಯೆಯಾಗಿ ರಾಖಿ, ‘ಹೌದು ಕಾಲ್ – ವೀಡಿಯೊ ಕಾಲ್ ಮಾಡುತ್ತಾರೆ’ ಎಂದರು.
-Team Infotrend