(SKY) ಸೂರ್ಯ ಕುಮಾರ್ ಯಾದವ್ ರ ಅಗ್ರೆಸಿವ್; ವಿಕಟ್ ಪಡೆದು ಜೋಶ್ ನಲ್ಲಿದ್ದಾಗಲೇ ಬೆಚ್ಚಿಬಿದ್ದ ಚಹಲ್ ಮತ್ತು ಅಶ್ವಿನ್!

ಕ್ರಿಕೆಟ್ ನಲ್ಲಿ ಎಲ್ಲ ನವರಸಗಳು ನೋಡಲು ಸಿಗುತ್ತವೆ. ಇಲ್ಲಿ ಅನೇಕ ರೀತಿಯ ಪ್ರಸಂಗಗಳು ಸತತವಾಗಿ ನಡೆಯುತ್ತವೆ. ಅದರಲ್ಲೂಬಿಲ್ಲಿ ಕಂಡು ಬರುವ ತಮಾಷೆಯ ಪ್ರಸಂಗಗಳೆಂದರೆ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಇಂತದ್ದೇ ಒಂದು ತಮಾಷೆಯ ಪ್ರಸಂಗವನ್ನು ನಿಮಗಾಗಿ ತಂದಿದ್ದೇವೆ. ಇದನ್ನು ನೋಡಿ ನಗದೇ ಇರಲು ಸಾಧ್ಯವೇ ಇಲ್ಲ.

ಪ್ರಸ್ತುತ ವಿಡಿಯೋದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆದಿದೆ. ಈ ಸಂದರ್ಭದಲ್ಲಿ ಚಹಲ್ ವಿಕೆಟ್ ಕಿತ್ತುವಲ್ಲಿ ಯಶಸ್ವಿಯಾಗುತ್ತಾರೆ. ಬ್ಯಾಟ್ಸ್ಮನ್ ಜೋರಾಗಿ ಬ್ಯಾಟ್ ಬೀಸಿ 6 ರನ್ಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಆ ಪ್ರಯತ್ನ ಫೇಲಾಗಿ ಚೆಂಡು ಆಕಾಶದ ಎತ್ತರಕ್ಕೆ ಹೋಗಿ ವಾಪಸ್ ಸೂರ್ಯಕುಮಾರ್ ಯಾದವ್ ಅವರ ಕೈಯಲ್ಲಿ ಕ್ಯಾಚ್ ಆಗುತ್ತದೆ. ಸೂರ್ಯ ಕುಮಾರ್ ಯಾದವ್ ಸಹ ಆ ಕ್ಯಾಚ್ ಹಿಡಿದು ಅಷ್ಟೇ ಆನಂದ ಮತ್ತು ಜೋಶ್ ನಲ್ಲಿ ವಾಪಸ್ ಮತ್ತೆ ಜೋರಾಗಿ ಮೇಲಕ್ಕೆ ಎಸೆಯುತ್ತಾರೆ. ಇತ್ತ ಬೌಲರ್ ಚಹಲ್ ಮತ್ತು ಅಶ್ವಿನ್ ಸಹ ಉಳಿದ ಆಟಗಾರರು ವಿಕೆಟ್ ಪಡೆದ ಆನಂದವನ್ನು ಜೋರಾಗಿ ಸಂಭ್ರಮಿಸುತ್ತಿರುತ್ತಾರೆ. ಅದೇ ಸಂದರ್ಭದಲ್ಲಿ ಸೂರ್ಯಕುಮಾರ ಯಾದವ್ ಅವರು ಕ್ಯಾಚ್ ಹಿಡಿದು ಜೋರಾಗಿ ಮೇಲೆ ಎಸೆದ ಚೆಂಡು ಜೋಶ್ ನಲ್ಲಿದ್ದ ಚಹಲ್ ಮತ್ತು ಅಶ್ವಿನ್ ಅವರ ತಲೆ ಮೇಲೆಯೇ ಬರಬೇಕೆ? ಈ ಸಂದರ್ಭದಲ್ಲಿ ಆಟಗಾರರು ಮಾಡಿದ ಹಠಾತ್ ಆಕ್ಷನ್ ಒಮ್ಮೆ ನೋಡುವಂತಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by SWAGAT HAI🙏 (@comedyreels____)

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದ ನಂತರ ಇಲ್ಲಿಯವರೆಗೆ 8.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.