ಪುಟ್ಟಿಗೆ ಸಿಕ್ಕಿತು ಜಬರ್ದಸ್ತ್ ಸರ್ಪ್ರೈಸ್! ಕಿವಿ ಚುಚ್ಚಿದ ನಂತರ ಪುಟ್ಟಿಯ ರಿಯಾಕ್ಷನ್ ನೋಡಿ! ಅಳಬೇಕೋ ನಗಬೇಕೋ ಒಂದು ಗೊತ್ತಾಗ್ತಿಲ್ಲ.

ಮಕ್ಕಳು ಯಾವತ್ತೂ ದೊಡ್ಡವರ ಹಾಗೆ ಅನುಕರಣೆ ಮಾಡಲು ಇಷ್ಟಪಡುತ್ತಾರೆ. ಪ್ರತಿಯೊಂದು ರೀತಿಯಲ್ಲಿ ದೊಡ್ಡವರಂತೆ ವರ್ತಿಸಲು ಹಾಗೂ ದೊಡ್ಡವರ ಹಾಗೆ ಬಟ್ಟೆ ಬರೆಗಳನ್ನು ತೊಟ್ಟುಕೊಳ್ಳಲು ಇಷ್ಟಪಡುತ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ತಾಯಿಯ ಹಾಗೆ ಸಿಂಗರಿಸಿಕೊಳ್ಳಲು ತುಂಬಾನೇ ಹಠ ಮಾಡುತ್ತಾರೆ. ಒಟ್ಟಿನಲ್ಲಿ ತಾಯಿಯಂತೆಯೇ ಪ್ರತಿಯೊಂದು ವಿಷಯದಲ್ಲಿ ಫಾಲೋ ಮಾಡಲು ಬಯಸುತ್ತಾರೆ. ಸದ್ಯ ಒಂದು ವಿಡಿಯೋದಲ್ಲಿ ಪುಟ್ಟಿಯೊಬ್ಬಳು ತಾಯಿಯ ಹಾಗೆ ಕಿವಿ ಚುಚ್ಚಿಕೊಳ್ಳಲು ಮುಂದಾಗಿದ್ದಾಳೆ ಅಲ್ಲಿ ನಡೆದ ಸುಂದರವಾದ ದೃಶ್ಯ ನಿಮಗಾಗಿ ತಂದಿದ್ದೇವೆ.

ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ತುಂಬಾ ಆಸಕ್ತಿಯಿಂದ ತನ್ನ ಕಿವಿಯನ್ನು ಚುಚ್ಚಿಕೊಳ್ಳಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ನಡೆದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿಯ ಈ ಪುಟ್ಟ ಹುಡುಗಿಯ ಎಕ್ಸ್ಪ್ರೆಶನ್ ನೋಡುವಂಥದ್ದಾಗಿದೆ. ಎರಡು ಕಿವಿಗಳಿಗೆ ಏಕಕಾಲಕ್ಕೆ ಕಿವಿ ಚುಚ್ಚುವ ಸಲುವಾಗಿ 1,2,3 ಹೀಗೆ ನಂಬರ್ ಕೌಂಟ್ ಮಾಡಿ ಒಮ್ಮೆಲೇ ಚುಚ್ಚಿ ಬಿಡುತ್ತಾರೆ. ಆಗ ಪುಟ್ಟ ಹುಡುಗಿಯು ಏನಾಯಿತು ಎಂದು ಒಮ್ಮೆಲೆ ಗಾಬರಿಯಾಗಿಬಿಡುತ್ತಾಳೆ. ಆ ಸಂದರ್ಭದಲ್ಲಿ ಹುಡುಗಿಯ ಮುಖದ ಮೇಲೆ ಕಂಡುಬಂದ ಭಾವ ನಿಜಕ್ಕೂ ಗಮನಿಸುವ ಹಾಗಿದೆ.

ನೋಡಿ ಈ ವಿಡಿಯೋ…

https://twitter.com/Gulzar_sahab/status/1573607329391857664?t=0pjZjny4uAa9iAb4Yicg2Q&s=09

ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 1 ಲಕ್ಷ 10 ಸಾವಿರ ವೀಕ್ಷಣೆಯನ್ನು ಪಡೆದಿದೆ. ಮತ್ತು ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.