Video; ಮುಖಕ್ಕೆ ಕಚ್ಚಲು ಬಂದ ವಿಷಕಾರಿ ಹಾವಿಗೆ ವಿದ್ಯುತ್ ವೇಗದಲ್ಲಿ ಪಂಜೆಯಿಂದ ತಲೆಗೆ ಕುಕ್ಕಿ ನೆಲಕ್ಕೆ ಬಾರಿಸಿದ ಬೆಕ್ಕು;

ಪ್ರಾಣಿಗಳ ವಿಡಿಯೋಗಳು ತುಂಬಾ ರೋಚಕತೆಯಿಂದ ಕೂಡಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಬೇರೆ ಬೇರೆ ಪ್ರಾಣಿಗಳ ಬೇಟೆಯಾಡುವ ಅಥವಾ ತನ್ನನ್ನು ಸಂರಕ್ಷಿಕೊಳ್ಳಲು ಮಾಡಿದ ಹೋರಾಟ ಇಂಥ ವಿಡಿಯೋಗಳು ಇಂಟರ್ನೆಟ್ ನಲ್ಲಿ ತುಂಬಾ ಇಷ್ಟದಿಂದ ನೋಡಲಾಗುತ್ತದೆ. ರೋಚಕತೆಯಿಂದ ಕೂಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ತುಂಬಾ ವೈರಲಾಗುತ್ತದೆ.

ಮನೆಯಲ್ಲಿ ಸಾಕಲಾಗುವ ಹುಲಿಯ ಸೋದರ ಮಾವ ಎಂದೇ ಪ್ರಸಿದ್ಧವಾದ ಬೆಕ್ಕಿನ ವಿಡಿಯೋಗಳು ತುಂಬಾ ಫೇಮಸ್ ಆಗಿವೆ. ಬೆಕ್ಕು ಎಷ್ಟು ಶಾಂತವಾಗಿರುತ್ತದೆ ಅಷ್ಟೇ ಖತರ್ನಾಕ್ ಸಹ ಆಗಿರುತ್ತದೆ. ಇದು ಯಾವುದೇ ಪ್ರಾಣಿಗೆ ಹೆದರುವುದಿಲ್ಲ. ವಿಷಕಾರಿ ಹಾವಿಗೂ ಸಹ ಹೆದರದೆ ಟಕ್ಕರ್ ಕೊಡುತ್ತದೆ.

ಸದ್ಯ ಟ್ವಿಟರ್ ನಲ್ಲಿ ಶೇರ್ ಮಾಡಲಾದ ಹಾಗೂ ಇಲ್ಲಿಯವರೆಗೆ 2.7 ವೀಕ್ಷಣೆಯನ್ನು ಪಡೆದ ಬೆಕ್ಕಿನ ವಿಡಿಯೋ ಒಂದು ಎಲ್ಲರ ಗಮನ ತನ್ನೆಡೆಗೆ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ತೋಟದಲ್ಲಿ ಮೂರು ಬೆಕ್ಕುಗಳು ಕಂಡುಬರುತ್ತಿವೆ. ಅದರಲ್ಲಿ ಒಂದು ಬೆಕ್ಕು ವಿಷಕಾರಿ ರಸೆಲ್ ವೈಪರ್ಸ್ ಹಾವಿಗೆ ನೀಡಿದ ಪಂಚ್ ತುಂಬಾ ಸಕತ್ತಾಗಿದೆ.

ತೋಟದಲ್ಲಿ ಮೂರು ಬೆಕ್ಕುಗಳ ಮುಂದೆ ರಸೆಲ್ ವೈಪರ್ಸ್ ಹಾವು ತರಗೆಲೆಗಳ ಮೇಲಿಂದ ಸರ ಸರನೆ ಹರಿದಾಡುತ್ತ ಬರುವುದನ್ನು ನೋಡಿ ಮೂರೂ ಬೆಕ್ಕುಗಳು ಜಾಗೃತೆಯಿಂದ ಹಿಂದೆ ಸರಿದು ನಿಲ್ಲುತ್ತವೆ. ಎರಡು ಬೆಕ್ಕುಗಳು ತುಂಬಾನೇ ಹಾವಿನಿಂದ ಅಂತರ ಕಾಯ್ದುಕೊಂಡು ನಿಂತಿರುವಾಗ ಒಂದು ಬೆಕ್ಕು ಮಾತ್ರ ಹಾಗೆ ಧೈರ್ಯದಿಂದ ಹಾವಿಗೆ ಸಮೀಪದಲ್ಲಿಯೇ ನಿಂತಿದೆ. ಅಷ್ಟರಲ್ಲಿ ಹಾವು ತನ್ನ ಮುಖವನ್ನು ಬೆಕ್ಕಿನ ಮೂಗಿನ ಹತ್ತಿರ ತೆಗೆದುಕೊಂಡು ಹೋಗುತ್ತದೆ. ಆದರೂ ಬೆಕ್ಕು ಹೆದರದೆ ಹಿಂದೆ ಸರಿಯದೆ ಧೈರ್ಯದಿಂದ ಅದನ್ನೇ ದಿಟ್ಟಿಸಿ ನೋಡುತ್ತಿರುತ್ತದೆ. ಅದನ್ನು ಗಮನಿಸಿದ ಹಾವು ಇನ್ನೇನು ಕಚ್ಚಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ ಬೆಕ್ಕು ತಲೆಯ ಮೇಲೆ ನೀಡಿದ ಜೋರಾದ ಪಂಚ್ ದಿಂದ ಹಾವು ಕ್ಷಣದಲ್ಲಿಯೇ ನೆಲಕ್ಕೆ ಅಪ್ಪಳಿಸುತ್ತದೆ. ಹೀಗೆ ಎರಡು ಬಾರಿ ಬೆಕ್ಕು ಹಾವಿಗೆ ಹೆವಿ ಪಂಚ್ ನೀಡುತ್ತದೆ. ಇಲ್ಲಿ ಬೆಕ್ಕಿನ ಧೈರ್ಯ ಮತ್ತು ಚಾಕ ಚಕ್ಯತೆ ಗಮನಾರ್ಹ. ಬಹುಶಃ ಇದೇ ಕಾರಣಕ್ಕಾಗಿ ರೈತರು ತೋಟದಲ್ಲಿ ಮತ್ತು ಮನೆಯಲ್ಲಿ ಬೆಕ್ಕು ಹಾಗೂ ನಾಯಿಗಳನ್ನು ಸಾಕುತ್ತಾರೆ. ಇವುಗಳಿಂದ ಯಾವತ್ತೂ ರೈತರು ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.

ನೋಡಿ ಈ ವಿಡಿಯೋ…

https://twitter.com/TheFigen_/status/1617980726502359040?s=20&t=jaSGN2vfDCzYIMWykB5ugw

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಸೈಟ್ ಆದ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಲಾಗಿದೆ. ಇದನ್ನು Figen ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 2.7 ಮಿಲಿಯನ್ ವೀಕ್ಷಣೆ ಪಡೆದಿದೆ.