ದೆಹಲಿಯಲ್ಲಿ ದೇವರನ್ನು ಹುಡುಕುವುದು ಸುಲಭ, ಆದರೆ ಅಲ್ಲಿನ ಆಸ್ಪತ್ರೆಯಲ್ಲಿ ಬೆಡ್ ಹುಡುಕುವುದು ಕಷ್ಟ -ಸೋನು ಸೂದ್
ಕೋವಿಡ್ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ದುರ್ಬಲರಿಗೆ ಆರ್ಥಿಕವಾಗಿ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ. ಎಷ್ಟೇ ಕಷ್ಟವಾದರೂ ಸೋನು ಸೂದ್ ಅವರು ಎಲ್ಲವನ್ನು ಮಾಡುವ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅದರಂತೆ ಸೋನು ಸೂದ್ ಇತ್ತೀಚೆಗೆ ಹೊಸ ಸೇವೆ ಪ್ರಾರಂಭಿಸಿದ್ದಾರೆ. ಅವರು ಕೋವಿಡ್ಗೆ ಸಂಬಂಧಿಸಿದ ಎಲ್ಲ ಜನರಿಗೆ ಉಚಿತ ಸಹಾಯವನ್ನು ಈ ಮೂಲಕ ನೀಡುತ್ತಾರೆ.
ಸೋನುರವರ ಈ ಅಭಿಯಾನಕ್ಕೆ ‘Free Covid Help’ ಎಂದು ಹೆಸರಿಸಿದ್ದಾರೆ. ಇದರ ನಂತರ ದೇಶದ ಮೂಲೆ ಮೂಲೆಯಿಂದ ಸೋನು ಸೂದ್ ಗೆ ಸಂದೇಶಗಳು ಬರುತ್ತಿವೆ. ಸಾಧ್ಯವಾದಷ್ಟು ಜನರಿಗೆ ಸೋನು ಹಗಲಿರುಳು ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ. ಎಷ್ಟೊ ಜನರಿಗೆ ವೆಂಟಿಲೇಟರ್ – ಆಕ್ಸಿಜನ್ ಕೊಡಿಸುವಲ್ಲಿ ಅವರು ಇದುವರೆಗೆ ಸಫಲರಾಗಿದ್ದಾರೆ.
ಈ ಸಮಯದಲ್ಲಿ, ದೆಹಲಿಯಲ್ಲಿ ಆಕ್ಸಿಜನ್ ಇರುವ ಬೆಡ್ ವ್ಯವಸ್ಥೆ ಮಾಡಲು ಜನರು ಬಾಲಿವುಡ್ ನಟ ಸೋನು ಸೂದ್ ಅವರಿಂದ ಸೋಷಿಯಲ್ ಮೀಡಿಯಾ ಮೂಲಕ ವಿನಂತಿಸಿಕೊಳ್ಳುತ್ತಲೇ ಇದ್ದಾರೆ. ತುಂಬಾ ಜನರಿಗೆ ಬೆಡ್ ವ್ಯವಸ್ಥೆ ಮಾಡಿ ಸೋನು “ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿದ್ದೇನೆ” ಎಂದು ಟ್ವೀಟ್ ಮಾಡುತ್ತಾರೆ.
ಇತ್ತೀಚೆಗೆ ಸೋನು ಟ್ವೀಟ್ ಮಾಡುವ ಮೂಲಕ ಅದರಲ್ಲಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವಲ್ಲಿ ದೆಹಲಿ ಮತ್ತು ಯುಪಿ ಯ ಪ್ರಸ್ತುತ ಪರಿಸ್ಥಿತಿಗಳನ್ನು ಸೋನು ಸೂದ್ ಟ್ವೀಟ್ ಮೂಲಕ ವಿವರಿಸಿದ್ದಾರೆ. ಸೋನು ಸೂದ್ ತಮ್ಮ ಟ್ವೀಟ್ ನಲ್ಲಿ ‘ದೆಹಲಿಯಲ್ಲಿ ಬೆಡ್ ವ್ಯವಸ್ಥೆ ಮಾಡಲು ನನಗೆ 11 ಗಂಟೆ ತೆಗೆದುಕೊಂಡಿತು ಮತ್ತು ಯುಪಿ ಯಲ್ಲಿ 9.5 ಗಂಟೆ ಬೇಕಾಯಿತು. ಎಂದಿದ್ದಾರೆ.
ದೆಹಲಿಯ ಪರಿಸ್ಥಿತಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅವರು ಆದರೂ ಎದೆಗುಂದದೇ ಸೇವೆ ಮುಂದುವರೆಸಿದ್ದಾರೆ. ದೆಹಲಿಯಲ್ಲಿ ದೇವರನ್ನು ಹುಡುಕುವುದು ಸುಲಭ, ಆದರೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ ಎಂದು ಸೋನು ಸೂದ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ. ಆದರೂ ಹುಡುಕುತ್ತೇವೆ, ನೀವು ಧೈರ್ಯವಾಘಿರಿ ಎಂಬುದು ಅವರ ಟ್ವೀಟ್ ಸಾರಾಂಶ. ‘
-Team Infotrend