ಎರಡು ವಿಡಿಯೊ : 1-ವಿಮಾನ ನಿಲ್ದಾಣದಲ್ಲೂ ಜನ ಸೋನು ನೆರವು ಕೇಳುತ್ತಿರುವುದು! 2-ನೆರವು ಕೇಳಿ ಬರುತ್ತಿರುವ ವಾಟ್ಸಪ್ ಮೆಸ್ಸೆಜ್ ತೋರಿಸುತ್ತಿರುವ ಸೋನು ಸೂದ್
ಬಡವರ ಬಂಧು, ಆಪತ್ಬಾಂದವ ಎಂದೇ ಪ್ರಸಿದ್ಧರಾಗುತ್ತಿರುವ ಸೋನು ಸೂದ್ ರವರಿಗೆ ಈಗಂತೂ ಪ್ರತಿದಿನ, ಪ್ರತಿ ನಿಮಿಷ ಸಹಾಯ ಕೇಳಿ ಸಂದೇಶ ಬರುತ್ತಿವೆ. ಅವರು ಕೂಡ ತಮ್ಮ ಕೈಲಾದಷ್ಟು ಬೆರವು ನೀಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೆಚ್ಚಾಗಿ ಬಡವರತ್ತಲೇ ಸೋನು ಸಹಾಯ ಹಸ್ತ ಚಾಚುವುದು.
ಮೊದಲು ಕೊರೋನ ಕಾರಣಕ್ಕೆ ಲಾಕ್ ಡೌನ್ ಆದಾಗ ಮನೆಗೆ ಹೊರಟ ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಸೋನು ಸೂದ್ ಮನೆಮಾತಾದರು. ಹಣಕಾಸು, ಊಟ, ತಿಂಡಿ, ವಸತಿ, ವಾಹನ ಸೇರಿದಂತೆ ಸೋನು ಕಾರ್ಮಿಕರಿಕೆ ಎಲ್ಲ ರೀತಿಯ ಬೆರವು ನೀಡಿದರು. ನಂತರ ದೇಶದಾದ್ಯಂತ ಬಡ ವಿದ್ಯಾರ್ಥಿಗಳ ನೆರವಿಗಿಳಿದರು. ಅವರ ಶಿಕ್ಷಣಕ್ಕೆ ಅಗತ್ಯವಿರುವ ಸಾಮಾನು ಸರಂಜಾಮು ಕೊಡಿಸಲು ಸುರು ಮಾಡಿದರು.
ಅದಾದ ಮೇಲೆ ಕರೊನ ಪ್ರಕರಣಗಳು ಹೆಚ್ಚಾದ ಹಾಗೆ ಬಡಮಧ್ಯಮವರ್ಗದವರಿಗೆ ಆಸ್ಪತ್ರೆ ಬೆಡ್ ಕೊಡಿಸಲು ಶ್ರಮಿಸತೊಡಗಿದರು. ಭಾರತದ ಹಲವು ರಾಜ್ಯದಲ್ಲಿ ಸಾಕಷ್ಟು ಕಾಂಟ್ಯಾಕ್ಟ್ ಇಟ್ಟುಕೊಂಡಿರುವ ಸೋನು ಬೆಡ್ ಕೇಳಿದ ಬಹುತೇಕರಿಗೆ ಅದನ್ನು ಒದಗಿಸಿದರು. ಈಗ ವೈರಸ್ ಹರಡುವಿಕೆ ವ್ಯಾಪಕವಾದ ಹಾಗೆ ತುಂಬಾ ಜನ ಆಕ್ಸಿಜನ್ ಒದಗಿಸುವಂತೆ ಸೋನು ಸೂದ್ ರವರಲ್ಲಿ ಮನವಿ ಮಾಡುತ್ತಿದ್ದಾರೆ.
ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಕೊರತೆ ಇದೆ. ಅದನ್ನು ಒದಗಿಸುವುದು ಸುಲಭವಲ್ಲ, ಆದರೂ ಸೋನು ತಮ್ಮ ಪ್ರಯತ್ನ ಕೈಬಿಟ್ಟಿಲ್ಲ. ಫ್ರಿ ಕೋವಿಡ್ ಹೆಲ್ಪ್ ಎಂಬ ಸಂಸ್ಥೆ ಆರಂಭಿಸಿ ಆ ಮೂಲಕ ಕೋರೋನ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಸೋನುರವರನ್ನು ಸಂಪರ್ಕಿಸಬಹುದಾದ ಎಲ್ಲ ಮೂಲಗಳಿಂದಲೂ ಅವರನ್ನು ಸಂಪರ್ಕಿಸುವ ಜನ ನೆರವು ಕೇಳುತ್ತಲೇ ಇದ್ದಾರೆ.
ಇಲ್ಲಿರುವ ಮೊದಲನೇ ವಿಡಿಯೊ ನೋಡಿ. ಅಲ್ಲಿ ಸೋನು ವಿಮಾನವೇರಲು ಅವಸರವಸರವಾಗಿ ಹೊರಟಿದ್ದಾರೆ. ಈ ನಡುವೆ ಅಭಿಮಾನಿಗಳ ಸೆಲ್ಫಿ ಕಾಟ ಕೂಡ ಇತ್ತು. ಆ ಗ್ಯಾಪಲ್ಲೇ ಒಬ್ಬ ನೆರವು ಕೇಳಿದ, ಬಹುಶ ಆತ ರೆಮಿಡಿಸಿವರ್ ಇಂಜೆಕ್ಷನ್ ಬಗ್ಗೆ ವಿಚಾರಿಸಿದ. ಆಗ ತಕ್ಷಣ ಸ್ಪಂದಿಸಿದ ಸೋನು “ಡಿಟೈಲ್ಸ್ ಕೊಡಿ, ಹೇಗೆ ಕಳಸ್ತಿರಿ ವಿವರಾನಾ?” ಅಂತ ಹೇಳುತ್ತಾ ತನ್ನ ಸಹಾಯಕರಿಗೆ ಆತನ ವಿವರ ಪಡೆಯಲು ಸೂಚಿಸುತ್ತಾರೆ.
ಇನ್ನು ಎರಡನೇ ವಿಡಿಯೊದಲ್ಲಿ ಅವರಿಗೆ ಬಂದಿರುವ – ಬರುತ್ತಲೇ ಇರುವ ವಾಟ್ಸಪ್ ಸಂದೇಶಗಳನ್ನು ಸೋನು ತೋರಿಸುತ್ತಿದ್ದಾರೆ. ನೆಟ್ ಆಫ್ ಮಾಡಿ ಆನ್ ಮಾಡಿದ ತಕ್ಷಣ ಬರೀ ಹೆಲ್ಪ್ ಕೇಳಿಕೊಂಡು ಬರುವ ಸಂದೇಶಗಳೇ ಬರುತ್ತಿವೆ. ಒಬ್ಬರು ಆಕ್ಸಿಜನ್ ಕೇಳಿದರೆ, ಮತ್ತೊಬ್ಬರು ಬೆಡ್, ಇನ್ಮೊಬ್ಬರು ಫೋನ್ ನಂಬರ್ ಕಳಿಸಿದರೆ, ಮಗದೊಬ್ಬರು ಅಡ್ರೆಸ್ ಕಳಿಸಿದ ಸಂದೇಶಗಳೇ ತುಂಬಿರುತ್ತವೆ.
ಅವರಾದರೂ ಅಷ್ಟೇ, ಯಾವುದಕ್ಕೂ ಬೇಸರಿಸಿಕೊಳ್ಳದೇ ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ದೇವರು ಅವರಿಗೆ ಆಯುರಾರೋಗ್ಯ ದಯಪಾಲಿಸಲಿ.
-Team Infotrend