ಎಸ್ಪಿಜಿ ಕಮಾಂಡೋಗಳು ತಮ್ಮ ಬಳಿ ಎಷ್ಟು ಮಾರಕ ಆಯುಧಗಳನ್ನು ಹೊಂದಿದ್ದಾರೆ? ಅವು ಏಕೆ ಅಪಾಯಕಾರಿ? ರೋಚಕ ಮಾಹಿತಿ ಇಲ್ಲಿದೆ!
ದೇಶದಲ್ಲಿ ಗಣ್ಯರಿಗೆ ರಕ್ಷಣೆ ಎನ್ನುವುದು ಅತ್ಯಾವಶ್ಯಕ. ಆದ್ದರಿಂದಲೇ ಅವರ ರಕ್ಷಣೆಗೆ ವಿಶೇಷವಾದ ಒತ್ತನ್ನು ನೀಡಲಾಗಿದ್ದು, ಗಣ್ಯರ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ವಿಶೇಷ ಕಮಾಂಡೋಗಳ ಭದ್ರತೆಯನ್ನು ನೀಡಲಾಗಿದೆ. ಅಂತಹ ಸಮರ್ಥ ಕಮಾಂಡೋಗಳಲ್ಲಿ ಎಸ್ ಪಿ ಜಿ ಕಮಾಂಡೋಗಳು ಬಹಳ ಮುಖ್ಯರಾಗಿದ್ದಾರೆ. ಎಸ್ ಪಿ ಜಿ ಕಮಾಂಡೋಗಳಿಗೆ ಆಟೋಮ್ಯಾಟಿಕ್ ಗನ್ FNF-2000 ಅಸಾಲ್ಟ್ ರೈಫಲ್ ನೀಡಲಾಗುತ್ತದೆ. ಅಲ್ಲದೇ ಅವರಿಗೆ ಗ್ಲಾಕ್ ಎನ್ನುವ ಹೆಸರಿನ ಪಿಸ್ತೂಲ್ ಅನ್ನು ಸಹಾ ನೀಡಲಾಗಿರುತ್ತದೆ. ಫೋನ್ ನಲ್ಲಿ ಅಳವಡಿಸಲಾಗಿರುವ ಪ್ಲಗ್ ಗಳ ಮೂಲಕ ಅವರು ತಮ್ಮೊಂದಿಗೆ ಡ್ಯೂಟಿಯಲ್ಲಿರುವ ಇತರೆ ಕಮಾಂಡೋಗಳ ಸಂಪರ್ಕದಲ್ಲಿ ಇರುತ್ತಾರೆ. ಸೋಶಿಯಲ್ ಪ್ರೊಟಕ್ಷನ್ ಗ್ರೂಪ್ ಅಥವಾ ಎಸ್ ಪಿ ಜಿ ಕಮಾಂಡೋಗಳು ಅತ್ಯಂತ ಮಾರಕ ಎನ್ನಲಾಗಿದೆ.
ಇವರ ಆಯ್ಕೆ ಹಾಗೂ ತರಬೇತಿ ಪ್ರಕ್ರಿಯೆಗಳು ಬಹಳ ವಿಭಿನ್ನವಾಗಿರುತ್ತದೆ. ಈ ಕಮಾಂಡೋಗಳ ಕೈಯಲ್ಲಿ ದೇಶದ ಪ್ರಮುಖ ಗಣ್ಯರನ್ನು ರಕ್ಷಣೆಯನ್ನು ಮಾಡುವ ಜವಾಬ್ದಾರಿ ಇರುತ್ತದೆ. ವಿವಿಐಪಿ ಎನಿಸಿಕೊಂಡಿರುವ ವ್ಯಕ್ತಿಗಳ ಮೇಲೆ ಎದುರಾಗಬಹುದಾದಂತಹ ಅ ಪಾಯಗಳಿಂದ ಅವರಿಗೆ ರಕ್ಷಣೆಯನ್ನು ಒದಗಿಸುವ ಸಲುವಾಗಿ ಎಸ್ ಪಿ ಜಿ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತದೆ. ಎಸ್ ಪಿ ಜಿ ದೇಶದ ಅತ್ಯಂತ ವೃತ್ತಿಪರ ಹಾಗೂ ಅತ್ಯಾಧುನಿಕ ಭದ್ರತಾ ಪಡೆಗಳಲ್ಲಿ ಒಂದಾಗಿದೆ.
ಅತ್ಯಂತ ಫಿಟ್ ಮತ್ತು ಸ್ಮಾರ್ಟ್ SPG ಕಮಾಂಡೋಗಳು ಹಾಗೂ ಅವರ ಬಳಿ ಲಭ್ಯವಿರುವ ಉಪಕರಣಗಳು ಮತ್ತು ಆಯುಧಗಳನ್ನು ಅವರನ್ನು ಇನ್ನಷ್ಟು ಮಾರಕವನ್ನಾಗಿಸುತ್ತದೆ ಎನ್ನಬಹುದು. ಅವರ ಕನ್ನಡಕದಿಂದ ಹಿಡಿದು ಧರಿಸುವ ಪಾದರಕ್ಷೆಗಳವರೆಗೆ ಒಂದೊಂದರಲ್ಲೂ ಸಹಾ ಏನೋ ಒಂದು ವಿಶೇಷತೆ ಎನ್ನುವುದು ಇದ್ದೇ ಇದೆ. ಇನ್ನು ಅವರ ಸುರಕ್ಷಾ ಕವಚದ ಬಗ್ಗೆ ಹೇಳುವುದಾದರೆ, SPG ಕಮಾಂಡೋಗಳು ಕಡಿಮೆ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಧರಿಸುತ್ತಾರೆ. ಈ ಜಾಕೆಟ್ ಗಳು, AK-47 ನಂತಹ ರೈಫಲ್ನ ಬುಲೆಟ್ ಅನ್ನು ಸಹ ನಿರೋಧಿಸುವಂತಹ ಸಾಮರ್ಥ್ಯವನ್ನು ಪಡೆದಿರುತ್ತದೆ.
ಈ ಕಮಾಂಡೋಗಳಿಗೆ ಸ್ವಯಂಚಾಲಿತ ಗನ್ FNF-2000 ಅಸಾಲ್ಟ್ ರೈಫಲ್ ನೀಡಲಾಗಿದೆ.
ಅದೇ ಸಮಯದಲ್ಲಿ, ಅವರಿಗೆ ಗ್ಲಾಕ್ 17 ಹೆಸರಿನ ಪಿಸ್ತೂಲ್ ಕೂಡಾ ನೀಡಲಾಗಿದೆ. ಅವರ ಫೋನ್ನಲ್ಲಿ ಅಳವಡಿಸಲಾಗಿರುವ ಇಯರ್ ಪ್ಲಗ್ಗಳ ಮೂಲಕ, ಅವರು ತಮ್ಮೊಂದಿಗೆ ಕರ್ತವ್ಯ ನಿರತವಾಗಿರುವಂತಹ ಅನ್ಯ ಕಮಾಂಡೋಗಳ ಜೊತೆಯಲ್ಲಿ ಸಂಪರ್ಕದಲ್ಲಿ ಇರುತ್ತಾರೆ. ಅವರು ಎಷ್ಟು ಕ್ರಿಯಾಶೀಲ ಹಾಗೂ ಶಿಸ್ತು ಬದ್ಧ ಎಂದರೆ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಸ್ಥಾನವನ್ನು ( ಪೊಸಿಷನ್ ) ತೆಗೆದುಕೊಳ್ಳುತ್ತಾರೆ.
ಎಸ್ ಪಿ ಜಿ ಕಮಾಂಡೋ ಗಳ ಕಣ್ಣುಗಳು ತುಂಬಾ ತೀಕ್ಷ್ಣವಾಗಿರುತ್ತವೆ. ಅವು ಯಾವುದೇ ರೀತಿಯ ಕೆಟ್ಟ ವರ್ತನೆಗಳನ್ನು ಸುಲಭವಾಗಿ ಗ್ರಹಿಸಬಲ್ಲವು. ಇದಲ್ಲದೇ, ಎಸ್ಪಿಜಿ ಸಿಬ್ಬಂದಿ ಅನ್ಯರ ಮುಖವನ್ನು ನೋಡಿದ ತಕ್ಷಣವೇ ಅವರ ಆಲೋಚನೆಗಳನ್ನು ಗ್ರಹಿಸುವ ನಿಪುಣರು.
ಈ ಕಮಾಂಡೊಗಳು ಒಂದು ವಿಶೇಷ ರೀತಿಯ ಕನ್ನಡಕವನ್ನು ಧರಿಸುತ್ತಾರೆ, ಇದು ಒಂದು ವೇಳೆ ಯಾವುದೇ ರೀತಿಯ ಧಾಳಿ ನಡೆದಂತಹ ಸಂದರ್ಭದಲ್ಲಿ ಅವರ ಕಣ್ಣುಗಳಿಗೆ ರಕ್ಷಣೆಯನ್ನು ನೀಡಲು ಬಹಳಷ್ಟು ಸಹಕಾರಿಯಾಗಿದ್ದು ಕಣ್ಣಿಗೆ ಆಗುವ ತೊಂದರೆಯನ್ನು ಇದು ತಪ್ಪಿಸುತ್ತದೆ. SPG ಕಮಾಂಡೋಗಳ ಕೈಯಲ್ಲಿ ‘ಬ್ರೀಫ್ಕೇಸ್’ ಇರುತ್ತದೆ. ಇದು ‘ಬ್ರೀಫ್ಕೇಸ್’ ಹಾಗೂ ರಕ್ಷಣೆ ಮಾಡುವ ವೇಳೆಯಲ್ಲಿ ಗುರಾಣಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ‘ಬ್ರೀಫ್ಕೇಸ್’ ನ ಮತ್ತೊಂದು ವಿಶೇಷತೆ ಏನೆಂದರೆ ಇದು ಪೋರ್ಟಬಲ್ ಬುಲೆಟ್ ಪ್ರೂಫ್ ಶೀಲ್ಡ್ನಂತೆ ಕಾರ್ಯನಿರ್ವಹಿಸುತ್ತದೆ.