ಸರ್ಕಾರದ ಸಹಾಯದಿಂದ ಹೈನುಗಾರಿಕೆ ಪ್ರಾರಂಭಿಸಿ : ಸರ್ಕಾರದ ವೆಬ್ ಸೈಟ್ ಮೂಲಕವೇ ಹಸು ಖರಿದಿಸಬಹುದು
ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಮಾರುಕಟ್ಟೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದರ ನಂತರವೇ ಉದ್ಯಮವನ್ನು ಪ್ರಾರಂಭಿಸುವ ರಿಸ್ಕ್ ತೆಗೆದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವ ವ್ಯವಹಾರದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ನಷ್ಟದ ಅಪಾಯ ತೀರ ಕಮ್ಮಿ ಇದೆ. ಅದುವೇ ಹೈನುಗಾರಿಕೆ ಅಥವಾ ಡೈರಿ ಫಾರ್ಮ್.
ಡೈರಿ ಫಾರ್ಮ್ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ, ನೀವು ಪ್ರತಿದಿನ ಅಥವಾ ತಿಂಗಳಿಗೆ ಉತ್ತಮ ಹಣವನ್ನು ಗಳಿಸಬಹುದು. ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ. ಇದರಿಂದ ನೀವು ಈ ವ್ಯವಹಾರವನ್ನು ಸುಲಭವಾಗಿ ಪ್ರಾರಂಭಿಸಬಹುದು. ಆದ್ದರಿಂದ ಡೈರಿ ಫಾರ್ಮ್ ವ್ಯವಹಾರವನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಯೋಣ ಬನ್ನಿ…
ಡೈರಿ ಫಾರ್ಮ್ ವ್ಯವಹಾರದಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು :
ಡೈರಿ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಡೈರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಡೈರಿ ಫಾರ್ಮ್ ಗಳ ಮೂಲಕ ರೈತರು ಮತ್ತು ಜಾನುವಾರು ರೈತರ ಆದಾಯವನ್ನು ಹೆಚ್ಚಿಸುವುದು ಇದರ ಉದ್ದೇಶ. ಡೈರಿ ಉದ್ಯಮದಲ್ಲಿ ಬೆಳೆಯಲು ಇಂದು ಅನೇಕ ಅವಕಾಶಗಳಿವೆ, ಆದರೆ ನೀವು ಉತ್ತಮ ರೀತಿಯಲ್ಲಿ ಮಾಡಬೇಕು.

ಇಂದು ಮಾರುಕಟ್ಟೆಯಲ್ಲಿ ಹಾಲು, ಮೊಸರು ಸೇರಿದಂತೆ ಎಲ್ಲಾ ಡೈರಿ ಉತ್ಪನ್ನಗಳಿಗೆ ಭಾರಿ ಬೇಡಿಕೆಯಿದೆ. ನೀವು ಡೈರಿ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಸಹ ಪಡೆಯುತ್ತೀರಿ. ಈ ವಲಯವನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲ ಮತ್ತು ಸಹಾಯಧನವನ್ನು ನೀಡುತ್ತವೆ.
ಕಡಿಮೆ ಹಸುಗಳೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿ :
ನೀವು ಡೈರಿ ಫಾರ್ಮ್ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಆರಂಭದಲ್ಲಿ ಕಡಿಮೆ ಹಸು ಅಥವಾ ಎಮ್ಮೆಗಳೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಿ. ಇದಕ್ಕಾಗಿ ಹಸು ಅಥವಾ ಎಮ್ಮೆಯ ಉತ್ತಮ ತಳಿಗಳನ್ನು ಆರಿಸಿ. ನಿಮ್ಮ ವ್ಯಾಪಾರ ಬೆಳೆದಂತೆ, ನೀವು ಸಂಖ್ಯೆಯನ್ನು ಹೆಚ್ಚಿಸಬಹುದು.
ಹಾಗೆಯೇ ಡೈರಿ ಫಾರಂನಲ್ಲಿ ಉತ್ತಮ ಲಾಭ ಗಳಿಸಲು ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯ. ಇದಕ್ಕಾಗಿ ಅವುಗಳ ಆಹಾರ – ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಾಕಷ್ಟು ಒಣ ಹಾಗೂ ಹಸಿರು ಮೇವಿನ ಲಭ್ಯತೆ ಇರಬೇಕು. ಹಸಿರು ಮೇವು ಅತ್ಯವಶ್ಯವಾದ್ದರಿಂದ ಮೊದಲೇ ಹುಲ್ಲು ನಾಟಿ ಮಾಡಿಕೊಂಡಿರಬೇಕು.

ಸರ್ಕಾರ ಶೇ 25 ರಷ್ಟು ಅನುದಾನ ನೀಡಲಿದೆ :
ಆರಂಭದಲ್ಲಿ ನೀವು ಎರಡು ಹಸುಗಳೊಂದಿಗೆ ನಿಮ್ಮ ಡೈರಿ ಫಾರ್ಮ್ ಅನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನೀವು ಸರ್ಕಾರದಿಂದ 35 ರಿಂದ 50 ರೂಪಾಯಿಗಳ ಸಹಾಯಧನವನ್ನು ಪಡೆಯುತ್ತೀರಿ. ಡಿಇಡಿಎಸ್ (Dairy Entrepreneurship Development Scheme) ಯೋಜನೆಯಡಿ ಡೈರಿ ಫಾರ್ಮ್‌ಗಳಿಗೆ 25 ಪ್ರತಿಶತ ಸಹಾಯಧನ ಲಭ್ಯವಿದೆ. ನೀವು ರಿಶರ್ವೇಶನ್ ಕೋಟಾದವರಾಗಿದ್ದರೆ ಮತ್ತು ಶೇಕಡಾ 33 ರಷ್ಟು ಸಬ್ಸಿಡಿ ತೆಗೆದುಕೊಳ್ಳಬಹುದು.
ಅಂಥವರು 10 ಪ್ರಾಣಿಗಳೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಪ್ರಾಜೆಕ್ಟ್ ಫೈಲ್ ತಯಾರಿಸಿ ಮತ್ತು ನಬಾರ್ಡ್ ಕಚೇರಿಯನ್ನು ಸಂಪರ್ಕಿಸಿ, ನಿಮ್ಮ ಜಿಲ್ಲೆಯ ಪಶುಸಂಗೋಪನಾ ಇಲಾಖೆಯನ್ನು ಸಹ ನೀವು ಸಂಪರ್ಕಿಸಬಹುದು. ನಿಮ್ಮ ಡೈರಿ ಫಾರ್ಮ್ ಅನ್ನು ನೀವು 10 ಹಸುಗಳೊಂದಿಗೆ ಪ್ರಾರಂಭಿಸುತ್ತಿದ್ದರೆ ನೀವು ನಬಾರ್ಡ್‌ನಿಂದ 2.50 ಲಕ್ಷ ಅನುದಾನವನ್ನು ಪಡೆಯುತ್ತೀರಿ.

ಪ್ರಾಣಿಗಳನ್ನು ಎಲ್ಲಿ ಖರೀದಿಸಬೇಕು?
ಡೈರಿ ಕ್ಷೇತ್ರವನ್ನು ಉತ್ತೇಜಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅನೇಕ ಸಬ್ಸಿಡಿ ಯೋಜನೆಗಳನ್ನು ಪ್ರಾರಂಭಿಸಲಾಗುದೆ ಮತ್ತು ಅನೇಕ ರೀತಿಯಲ್ಲಿ ಸಹಾಯ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ಪ್ರಾಣಿಗಳ ಖರೀದಿಗಾಗಿ https://epashuhaat.gov.in/ ಅನ್ನು ಸಹ ಪ್ರಾರಂಭಿಸಿದೆ. ಇಲ್ಲಿಂದ ನೀವು ಉತ್ತಮ ತಳಿ ಹಸು – ಎಮ್ಮೆಗಳನ್ನು ಸುಲಭವಾಗಿ ಖರೀದಿಸಬಹುದು.
ನಿಮಗೆ ಗೊತ್ತಿರುವ ಪ್ರಾದೇಶಿಕ ಮಾರುಕಟ್ಟೆಯಿಂದ ಕೂಡ ನೀವು ಉತ್ತಮ ತಳಿ ಪ್ರಾಣಿಗಳನ್ನು ಖರೀದಿಸಬಹುದು, ಹಸುಗಳ ತಳಿ ಹಾಗೂ ಅವುಗಳ ಹಿನ್ನೆಲೆ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಹಸು ತರುವಾಗ ಜೊತೆಗೊಬ್ಬ ಪಶು ವೈದ್ಯರು ಇದ್ದರೆ ಒಳ್ಳೆಯದು. ಹೆಚ್ಚು ಹಾಲು ಕೊಡುವ ಹಾಗೂ ಆರೋಗ್ಯವಂತ ಹಸುಗಳ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಾಗುತ್ತದೆ.
ರೈತರಿಗೆ ಬ್ಯಾಂಕ್ ಗಳು ಸುಲಭವಾಗಿ ಸಾಲ ಕೊಡುವುದಿಲ್ಲ, ಪಶು ಸಂಗೋಪನಾ ಇಲಾಖೆಯಲ್ಲಿ ಸರಿಯಾಗಿ ರೆಸ್ಪಾನ್ಸ್ ಮಾಡುವುದಿಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿರುತ್ತದೆ. ಆದರೆ ನೀವು ಪಟ್ಟು ಬಿಡದೇ ಪ್ರಯತ್ನಿಸಿ, ನಿಮ್ಮ ಜಿಲ್ಲಾ ಪಂಚಾಯತ್ ಮೇಂಬರ್ ಮೇಲೆ ಒತ್ತಡ ಹಾಕಿ ಜಿಲ್ಲಾ ಪಶು ಸಂಗೋಪನಾ ಇಲಾಖೆಗೆ ಭೆಟಿ ನೀಡಿ, ಕೆಲಸ ಆಗುವವರೆಗೆ ಬಿಡಬೇಡಿ.