ಏಂಜೆಲೊ ಮೊರಿಯೊಂಡೊ ಜೀವನ ಪರಿಚಯ | Story of Angelo Moriondo

ಏಂಜೆಲೊ ಮೊರಿಯೊಂಡೊ

ಏಂಜೆಲೊ ಮೊರಿಯೊಂಡೋ ಇವರು ಇಟ್ಯಾಲಿಯನ್ ಇನ್ವೆಂಟರ್ ಆಗಿ ಎಲ್ಲರಿಗು ಪರಿಚಿತರಾಗಿದ್ದಾರೆ. ಈ ವ್ಯಕ್ತಿಯ ಜೀವನದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇವರು 1851ರ ಜೂನ್ 6ರಂದು ಸಾರ್ಡಿನಿಯಾದ ಟುರಿನ್ ನಲ್ಲಿ ಕ್ರಿಶ್ಚಿಯನ್ ಫ್ಯಾಮಿಲಿಯಲ್ಲಿ ಜನಿಸಿದರು. ಏಂಜೆಲೋ ಖ್ಯಾತ ಸಂಶೋಧಕರಾಗಿದ್ದು, 1884ರಲ್ಲಿ ಮೊದಲ ಎಸ್ಪ್ರೆಸೋ ಮಷಿನ್ ಅನ್ನು ಕಂಡುಹಿಡಿದು, ಪೇಟೆಂಟ್ ಪಡೆದವರು ಇವರೇ. ಇವರು ಉತ್ತಮ ಕುಟುಂಬದಲ್ಲಿ ಬೆಳೆದವರು.

ಏಂಜೆಲೊ ಮೊರಿಯೊಂಡೊ

ಏಂಜೆಲೊ ಮೊರಿಯೊಂಡೊ

 

ಇವರ ತಾತ ವೈನ್ ಕಂಪನಿ ಸ್ಥಾಪಿಸಿದ್ದರು, ಈ ಕಂಪನಿಯನ್ನು ಇವರ ತಂದೆ ಮುಂದುವರೆಸಿಕೊಂಡು ಹೋದರು. ಏಂಜೆಲೋ ಮೊರಿಯಂಡೋ ಅವರನ್ನು ಎಸ್ಪ್ರೆಸೋ ಮಷಿನ್ ಗಳ ಗಾಡ್ ಫಾದರ್ ಎಂದು ಕರೆಯುತ್ತಾರೆ. ಇವರು ತಮ್ಮ ಶಾಲಾ ಶಿಕ್ಷಣವನ್ನು ಸಾರ್ಡಿನಿಯಾದ ಟುರಿನ್ ನಲ್ಲೇ ಪೂರ್ತಿ ಮಾಡಿದರು. ಏಂಜೆಲೋ ಅವರು ಎಸ್ಪ್ರೆಸೋ ಮಷಿನ್ ಕಂಡುಹಿಡಿದು ಪೇಟೆಂಟ್ ಮಾಡಿಸಿಕೊಂಡಾಗ ಸೆನ್ಸೇಷನ್ ಆಗಿದ್ದರು. ಇವರು 1984ನಲ್ಲಿ ಟುರಿನ್ ನಲ್ಲಿ ನಡೆದ ಜನರಲ್ ಎಕ್ಸ್ಪೋದಲ್ಲಿ ತಮ್ಮ ಡಿಸ್ಕವರಿಯನ್ನು ಪ್ರದರ್ಶಿಸಿದರು, ಇದಕ್ಕಾಗಿ ಅವರಿಗೆ ಬ್ರಾಂಜ್ ಪದಕ ಬೀಡಕಾಯಿತು.

1884ರ ಮೇ 16ರಂದು, ಕಾಫಿ ಇಂದ ಕನ್ಫೆಕ್ಷನ್ ಮಾಡುವ ಹೊಸ ತಂತ್ರಜ್ಞಾನಕ್ಕೆ 6 ವರ್ಷಗಳ ಕಾಲಕ್ಕೆ ಪೆಂಟೆಂಟ್ ಕೊಡಲಾಯಿತು. ಎಸ್ಪ್ರೆಸೋ ಮಷಿನ್ ಅನ್ನು ಮಾರ್ಟಿನಾ ಎನ್ನುವ ವ್ಯಕ್ತಿ ಡಿಸೈನ್ ಮಾಡಿದರು. ಎಸ್ಪ್ರೆಸೋ ಮಷಿನ್ ಅನ್ನು 1884ರ ನವೆಂಬರ್ 20ರಂದು, 381 ನಂಬರ್ ಅಡಿಯಕ್ಕಿ ಪೇಟೆಂಟ್ ಅನ್ನು ಅಪ್ಡೇಟ್ ಮಾಡಲಾಯಿತು. 1885ರ ಆಕ್ಟೊಬರ್ 25ರಂದು ಪ್ಯಾರಿಸ್ ನಲ್ಲಿ ಎಸ್ಪ್ರೆಸೋ ಮಷಿನ್ ಅನ್ನು ರಿಜಿಸ್ಟರ್ ಮಾಡಿಸಿ, ಇಂಟರ್ನ್ಯಾಷನಲ್ ಪೇಟೆಂಟ್ ಪಡೆದು ದೃಢೀಕರಣ ಮಾಡಲಾಯಿತು. ಏಂಜೆಲೋ ಅವರು ವಿಧಿವಶರಾದ ನಂತರ ಎಸ್ಪ್ರೆಸೋ ಮಷಿನ್ ಅನ್ನು ಅಪ್ಗ್ರೇಡ್ ಮಾಡುತ್ತಾ ಹೋಗಲಾಯಿತು.

ಏಂಜೆಲೊ ಮೊರಿಯೊಂಡೊ

ಏಂಜೆಲೊ ಮೊರಿಯೊಂಡೊ

 

ಪ್ರತಿ ಸಾರಿ ಅಪ್ಗ್ರೇಡ್ ಮಾಡಿ ಪೇಟೆಂಟ್ ಪಡೆಯಲಾಯಿತು. ಏಂಜೆಲೋ ಅವರು ಫ್ಯಾಕ್ಟರಿ ಗಳಲ್ಲಿ, ದೊಡ್ಡದಾಗಿ ಯಂತ್ರಗಳನ್ನು ತಯಾರಿಸಿರಲಿಲ್ಲ, ಕೈಯಲ್ಲಿ ಯಂತ್ರಗಳನ್ನು ತಯಾರಿಸುವುದು ಒಳ್ಳೆಯದು ಎನ್ನುವುದು ಅವರ ಭಾವನೆ ಆಗಿತ್ತು. 1884ರಲ್ಲಿ ಇವರು ಮೊದಲಿಗೆ ತಯಾರಿಸಿದ ಕಾಫಿ ಯಂತ್ರದಲ್ಲಿ ಕಾಫಿ ಮಾಡಲು ಬಳಸಲಾಗುತ್ತಿತ್ತು, ಇದಕ್ಕಾಗಿ ಕಂಚಿನ ಪದಕವನ್ನು ಪಡೆದರು. 2022ರ ಜೂನ್ 6ರಂದು ಏಂಜೆಲೋ ಅವರ ಹುಟ್ಟುಹಬ್ಬದ ದಿನ ಗೂಗಲ್ ಡೂಡಲ್ ಅವರಿಗೆ ಗೌರವ ನೀಡಿತು. ಇವರು ಟುರಿನ್ ನ ಮರಾಂಟಿನೋದಲ್ಲಿ 62ನೇ ವಯಸ್ಸಿನಲ್ಲಿದ್ದಾಗ ಇಹಲೋಕ ತ್ಯಜಿಸಿದರು. ಇವರು ಹೇಗೆ ವಿಧಿವಶರಾದರು ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ.

ಏಂಜೆಲೋ ಅವರ ತಂದೆ ಜಿಯಾಕೊಮೊ ಅವರು ವಿಧಿವಶರಾದ ಬಳಿಕ, ಅವರ ಜನಪ್ರಿಯ ಚಾಕೋಲೇಟ್ ಕಂಪನಿ, ಮೊರಿಯೊಂಡೋ & ಗ್ಯಾರಿಗ್ಲಿಯೋ ಅನ್ನು ಇವರ ಸಹೋದರ ಆಗೋಸ್ಟಿನೋ ಹಾಗೂ ಹತ್ತಿರದವರಾದ ಗ್ಲಾರಿಗ್ಲಿಯೋ ಸ್ಥಾಪಿಸಿದರು. ಏಂಜೆಲೋ ಅವರ ಒಟ್ಟು ಆಸ್ತಿ ಎಷ್ಟಿರಬಹುದು ಎಂದು ಹಲವರಲ್ಲಿ ಕುತೂಹಲ ಇದೆ, ಆದರೆ ಯಾರಿಗೂ ಕೂಡ ಈ ಬಗ್ಗೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲ.