ಹಲ್ದಿರಾಮ್ : ಭಾರತದ ಒಂದು ನಗರದಲ್ಲಿ ಆರಂಭವಾದ ಸಣ್ಣ ಉಪಹಾರದ ಅಂಗಡಿ, ಇವತ್ತು 80 ದೇಶಗಳಲ್ಲಿ ಜನಪ್ರಿಯತೆ ಪಡೆದ ಯಶೋಗಾಥೆ ಇದು!
ಭಾರತದಲ್ಲಿ ಹಲ್ದೀರಾಮ್ ಎನ್ನುವ ಸಿಹಿ ತಿಂಡಿಗಳು ಹಾಗೂ ಖಾರ ತಿಂಡಿಗಳ ಬ್ರಾಂಡ್ ಬಹಳ ಪ್ರಸಿದ್ಧ, ಬಹುತೇಕ ನಾವೆಲ್ಲ ಹಲ್ದಿರಾಮ್ ಉತ್ಪನ್ನಗಳನ್ನು ತಿಂದಿದ್ದೇವೆ, ಇವತ್ತು ಆ ಹೆಸರು ಕೇಳದವರೇ ಇಲ್ಲ ಎನ್ನಬಹುದು. ದೇಶದ ಒಂದು ಅತ್ಯುತ್ತಮ ಸ್ವೀಟ್ಸ್ ಹಾಗೂ ತಿಂಡಿಗಳ ಬ್ರಾಂಡ್ ಆಗಿರುವ ಹಲ್ದೀರಾಮ್ ಇಂದು ಈ ಹಂತಕ್ಕೆ ತಲುಪಿದ್ದರ ಹಿಂದೆ ಒಂದು ಇತಿಹಾಸವೇ ಇದೆ. ಆ ಇತಿಹಾಸ ನಿಮಗೆ ತಿಳಿಯದಿದ್ದರೆ, ಆ ಯಶಸ್ಸಿನ ಕಥೆಯನ್ನು ಈಗ ತಿಳಿಯೋಣ ಬನ್ನಿ…
ಹಲ್ದೀರಾಮ್ ಬ್ರಾಂಡ್ ನ ಇತಿಹಾಸ ಇಂದು ನಿನ್ನೆಯದಲ್ಲ, ಬದಲಿಗೆ ಇದು ಸ್ವಾತಂತ್ರ್ಯ ಪೂರ್ವದಿಂದಲೇ ಆರಂಭವಾಯಿತೆನ್ನುವುದು ಬಹಳ ವಿಶೇಷವಾದ ಹಾಗೂ ರೋಚಕ ಎನಿಸುವ ವಿಚಾರ. ಹೌದು ಈ ಬ್ರಾಂಡ್ ನ ಅಡಿಪಾಯ ಇಂದಿಗೆ 84 ವರ್ಷಗಳ ಹಿಂದೆ ಅಂದರೆ 1937 ರಲ್ಲಿ ರಾಜಸ್ಥಾನದ ಬಿಕಾನೇರ್ ನಲ್ಲಿ ಹಾಕಲಾಯಿತು. ಆದರೆ ಆಗ ಒಂದು ಸಣ್ಣ ಉಪಹಾರದ ಅಂಗಡಿಯಾಗಿ ತೆರೆಯಲಾಯಿತು.
ಗಂಗಾ ವಿಷಣ್ ಅಗ್ರವಾಲ್ ಎನ್ನುವವರು ಸಣ್ಣ ಅಂಗಡಿಯನ್ನು ತೆರೆದರು. ಈ ಮೂಲಕ ಅವರು ವ್ಯಾಪಾರ ಕ್ಷೇತ್ರಕ್ಕೆ ಅಡಿಯನ್ನು ಇಡಲು ಆಲೋಚನೆ ಮಾಡಿದರು. ಅವರ ಈ ಅಂಗಡಿ ಬಹಳ ಬೇಗ ಹೆಸರನ್ನು ಮಾಡಿತು. ಜನ ಇವರ ಉಪಹಾರದ ಅಂಗಡಿಯನ್ನು ಬುಜಿಯಾವಾಲ ಅಂಗಡಿ ಎಂದೇ ಹೆಸರುವಾಸಿಯಾಗಿತ್ತು.

ಅನಂತರ ಗಂಗಾ ಬೀಷಣ್ ಅಗ್ರವಾಲ್ ಅವರು ತಮ್ಮ ಅಂಗಡಿಗೆ ಹಲ್ದಿರಾಮ್ ಎಂದು ಹೊಸ ಹೆಸರನ್ನು ಇಡುವ ಮೂಲಕ ಅಂಗಡಿಗೆ ಮರು ನಾಮಕರಣ ಮಾಡಿದರು. ಹಲ್ದೀರಾಮ್ ಎನ್ನುವುದು ಗಂಗಾವಿಷಣ್ ಅವರ ಇನ್ನೊಂದು ಹೆಸರಾಗಿತ್ತು. ಅವರ ಈ ಉಪಹಾರ ಅಂಗಡಿಯು ಇಡೀ ಬಿಕಾನೇರ್ ನಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತು.
ಹಲ್ದೀರಾಮ್ ಅವರ ಅಂಗಡಿ ಒಂದು ಉತ್ತಮವಾದ ಬ್ರಾಂಡ್ ಹಾಗೂ ಉಪಹಾರ ಕೇಂದ್ರವಾಗಿ ಹೆಸರನ್ನು ಪಡೆದುಕೊಂಡಿತ್ತು. ಆದರೆ ಈ ಬ್ರಾಂಡ್ ನ ಯಶಸ್ಸಿನ ಯಾತ್ರೆ ಇನ್ನೂ ಆರಂಭವಾಗಬೇಕಿತ್ತು. ತಮ್ಮ ಉಪಹಾರದ ಕೇಂದ್ರವನ್ನು ದೇಶದೆಲ್ಲೆಡೆ ಹಬ್ಬಿಸಬೇಕು ಎನ್ನುವ ಆಲೋಚನೆಯಿಂದ ಗಂಗಾ ವಿಷಣ್ ಅವರು ತಮ್ಮ ಉಪಹಾರ ಮಂದಿರದ ಔಟ್ ಲೆಟ್ ಗಳನ್ನು ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ತೆರೆದರು.
ಹೀಗೆ ಬಿಕಾನೆರ್ ನಿಂದ ದೆಹಲಿಗೆ ಬಂದ ಹಲ್ದೀರಾಮ್ ಉಪಾಹಾರದ ಉತ್ಪನ್ನಗಳು ನೋಡು ನೋಡುತ್ತಲೇ ಕೆಲವೇ ವರ್ಷಗಳಲ್ಲಿ ಅಮೆರಿಕಾ ವರೆಗೆ ತಲುಪಿತು. ಹಲ್ದೀರಾಮ್ ಕಂಪನಿಯ ತಮ್ಮ ಮೊದಲ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಅನ್ನು ಪಶ್ಚಿಮ ಬಂಗಾಳದಲ್ಲಿ ತೆರೆದರು. ಇದರ ನಂತರ 1970 ರಲ್ಲಿ ಜೈಪುರ ಮತ್ತು 1982 ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಹಲ್ದೀರಾಮ್ ಅವರ ಔಟ್ ಲೆಟ್ ಒಂದನ್ನು ತೆರೆದರು.

ಹೀಗೆ ಬೆಳೆಯುತ್ತಾ ಸಾಗಿದ ಅವರ ಉದ್ಯಮವು 2003 ರಲ್ಲಿ ಹಲ್ದಿರಾಮ್ ಕಂಪನಿಯು ತಮ್ಮ ಉತ್ಪನ್ನಗಳನ್ನು ಅಮೆರಿಕಾಗೆ ರಪ್ತು ಮಾಡಲು ಆರಂಭ ಮಾಡಿತು. ಇದರಿಂದ ಉತ್ತಮವಾದ ಲಾಭದ ಜೊತೆಗೆ ದೊಡ್ಡ ಮಟ್ಟದ ಜನಪ್ರಿಯತೆಯೂ ದೊರೆಯಿತು. ಒಂದು ಹಲ್ದೀರಾಮ್ ಅವರ ಕಂಪನಿಯು 100 ರೀತಿಯ ವೈವಿದ್ಯಮಯ ಉತ್ಪನ್ನಗಳನ್ನು ತಯಾರಿಸುವುದು ಮಾತ್ರವೇ ಅಲ್ಲದೇ ಅದನ್ನು ಸುಮಾರು 80 ರಾಷ್ಟ್ರ ಗಳಿಗೆ ರಫ್ತು ಮಾಡಲಾಗುತ್ತದೆ.
ಹೀಗೆ ವಿಶ್ವ ಪ್ರಸಿದ್ಧವಾದ ಹಲ್ದೀರಾಮ್ ತಿನಿಸುಗಳ ಉತ್ಪನ್ನಗಳಿಗೆ 2015 ರಲ್ಲಿ ಒಂದು ದೊಡ್ಡ ಹೊಡೆತವೇ ಬಿತ್ತು. ಏಕೆಂದರೆ ಈ ಉತ್ಪನ್ನಗಳಲ್ಲಿ ಕೀ ಟ ನಾ’ಶ ಕ ಗಳನ್ನು ಬಳಸಲಾಗಿದೆ ಎಂದು ಅಮೆರಿಕಾ ಹಲ್ದಿರಾಮ್ ಉತ್ಪನ್ನಗಳನ್ನು ನಿ ಷೇ ಧ ಮಾಡಿತು. ಅಮೆರಿಕಾ ಈ ಉತ್ಪನ್ನಗಳ ಮೇಲೆ ನಿಷೇಧ ಹೇರಿದರೂ ಹಲ್ದೀರಾಮ್ ಉತ್ಪನ್ನಗಳು ವಿಶ್ವದ ಅನ್ಯ ರಾಷ್ಟ್ರಗಳಲ್ಲಿ ಹೆಸರು ಕಳೆದುಕೊಳ್ಳಲಿಲ್ಲ.
ಕಂಪನಿ ಕೂಡಾ ತನ್ನ ಕ್ವಾಲಿಟಿ ಯನ್ನು ಸಾಬೀತು ಮಾಡುವಲ್ಲಿ ಹಿಂದೆ ಉಳಿಯಲಿಲ್ಲ. ಹಲ್ದೀರಾಮ್ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಸುಪ್ರಸಿದ್ಧ ಬ್ರಾಂಡ್ ಆಗಿ ಉಳಿದಿದೆ. ಇಂದು ಹಲ್ದೀರಾಮ್ ನ ವ್ಯವಹಾರವನ್ನು ಮೂರು ಭೌಗೋಳಿಕ ಆಧಾರಿತ ಘಟಕಗಳನ್ನಾಗಿ ವಿಭಜಿಸಲಾಗಿದೆ.

ಇದರಿಂದಾಗಿ ಕಂಪನಿ ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ಲಾಭವನ್ನು ಗಳಿಸಲು ಸಾಧ್ಯವಾಗಿದೆ. 2013-14 ರ ಅವಧಿಯಲ್ಲಿ ಹಲ್ದಿರಾಮ್ ಅವರ ಉತ್ಪನ್ನಗಳಿಂದ ಕಂಪನಿ ಗಳಿಸಿದ ಆದಾಯ 2,100 ಕೋಟಿ ರೂಪಾಯಿಗಳಾಗಿದೆ. ಪಶ್ವಿಮ ಮತ್ತು ದಕ್ಷಿಣ ಭಾರತದಲ್ಲಿ ಹಲ್ದೀರಾಮ್ ಅವr ಉತ್ಪನ್ನಗಳ ವಾರ್ಷಿಕ ಮಾರಾಟ 1,225 ಕೋಟಿ ರೂ.ಗಳಾಗಿದೆ.
ಪೂರ್ವ ಭಾರತದಲ್ಲಿ 215 ಕೋಟಿ ರೂ.ಗಳಾಗಿದೆ. 2019 ರಲ್ಲಿ, ಹಲ್ದೀರಾಮ್ ನ ಆದಾಯ 7,130 ಕೋಟಿ ರೂ. ಅಂದರೆ 1.0 ಬಿಲಿಯನ್ ಡಾಲರ್ ಆಗಿತ್ತು, ಇದರಿಂದ ಭಾರತದಾದ್ಯಂತ ಹಲ್ಡೀರಾಮ್ ಎಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಬ್ರಾಂಡ್ ಎಂಬುದು ಅರ್ಥವಾಗುತ್ತದೆ. ಹಲ್ದೀರಾಮ್ ವಿವಿಧ ರೀತಿಯ ತಿನಿಸುಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ.
ತನ್ನ ಉತ್ಪನ್ನಗಳಿಗಾಗಿ ಅದು ವಾರ್ಷಿಕವಾಗಿ 3.8 ಬಿಲಿಯನ್ ಲೀಟರ್ ಹಾಲು, 800 ಮಿಲಿಯನ್ ಕಿಲೋಗ್ರಾಂ ಬೆಣ್ಣೆ, 6.2 ಮಿಲಿಯನ್ ಕಿಲೋಗ್ರಾಂ ಆಲೂಗಡ್ಡೆ ಮತ್ತು ಆರು ಮಿಲಿಯನ್ ಕಿಲೋಗ್ರಾಂಗಳಷ್ಟು ದೇಶೀ ಶುದ್ಧ ತುಪ್ಪವನ್ನು ಬಳಸಲಾಗುತ್ತಿದೆ. ಹೀಗೆ ಪರೋಕ್ಷವಾಗಿ ಕೂಡ ಹಲ್ದಿರಾಮ್ ಸಾಕಷ್ಟು ಜನರ ಜೀವನಾಡಿಯಾಗಿದೆ.

ಈ ಕಂಪನಿಯ ಸಾಧನೆಯನ್ನು ಗಮನಿಸಿದಾಗ ನಮಗೆ ಅರ್ಥವಾಗುವ ವಿಷಯ ಏನೆಂದರೆ ಒಂದು ವೇಳೆ ವ್ಯಕ್ತಿಯು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ದೃಢ ನಿಶ್ಚಯವನ್ನು ಮಾಡಿದರೆ ಅಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇರುವುದಿಲ್ಲ ಎನ್ನುವ ಸತ್ಯ. ವ್ಯಕ್ತಿಯ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ ಎನ್ನುವುದರ ಹಲ್ದೀರಾಮ್ ಉತ್ಪನ್ನಗಳ ಉದ್ಯಮವೇ ಒಂದು ಅತ್ಯುತ್ತಮ ನಿದರ್ಶನವಾಗಿದೆ.
ಇದು ಒಂದು ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡುವ ಸಾಧನೆಯ ಕಥೆಯೆಂದರೆ ತಪ್ಪಾಗಲಾರದು. ಪ್ರತಿ ಯಶಸ್ಸಿನ ಹಿಂದೆ ಸಾಕಷ್ಟು ಶ್ರಮ – ಶ್ರದ್ಧೆ ಇರುತ್ತದೆ, ಹಾಗೂ ಸಂಕಷ್ಟಗಳನ್ನು ದಾಟಬೇಕಾಗುತ್ತದೆ. ಹಲ್ದಿರಾಮ್ ಇವನ್ನೆಲ್ಲ ಅನುಭವಿಸಿಯೇ ಇವತ್ತು ಈ ಮಟ್ಟಕ್ಕೆ ಬೆಳೆದಿದೆ.
-Team Infotrend