VIDEO : ಸುದೀಪ್ ಮಾತಾಡೋದೇ ಹೀಗೆ : ಕೆಟ್ಟ ಪದ ಬಳಸಲ್ಲ, ಆದ್ರೆ ಚುಚ್ಚಬೇಕಾದವರಿಗೆ ಸರಿಯಾಗಿ ಚುಚ್ಚಿರುತ್ತೆ!

ಸುಮ್ನೆ ಇರಲಾರದೆ ಇರುವೆ ಬಿಟ್ಕೊಳೊದು, ಕೆರೆದು ಹುಣ್ಣು ಮಾಡ್ಕೊಳೋದು, ಆವಾಗಾವಾಗ ಅವರಿವರ ಕಡೆಯಿಂದ ಹೆಟ್ಟಿಸಿಕೊಳ್ಳೋದು ಇವೆಲ್ಲ ನಟ ಚೇತನ್ ರವರಿಗೆ ಮಾಮೂಲಾಗಿಬಿಟ್ಟಿದೆ. ಅವರ ಉದ್ದೇಶ ಸರಿ ಇರುತ್ತೆ ಆದ್ರೆ ಏನೋ ಮಾಡ್ಬೇಕಾದೋರು ಮತ್ತೇನೋ ಮಾಡಿ ತಗಲಾಕ್ಕೊತಾರೆ, ಮಕ ಮಕ ಅನಿಸ್ಕೊತಾರೆ. ಇದು ಈ ಹಿಂದೆ ಕೂಡ ಸಾಕಷ್ಟು ಸಲ ಆಗಿದೆ, ಆದರೂ ನಟ ಚೇತನ್ ಬುದ್ದಿ ಕಲಿತಿಲ್ಲ.

ಮೊನ್ನೆ ನಟ ಉಪೇಂದ್ರ ಸಾಕಷ್ಟು ಜನರಿಗೆ ಆಹಾರದ ಕಿಟ್ ವಿತರಿಸಿದರು. ಅವರು ವಿತರಿಸಿದವರಲ್ಲಿ ಅರ್ಚಕರೂ ಇದ್ದರು, ಅದನ್ನಷ್ಟೇ ತಿಳಿದುಕೊಂಡ ಚೇತನ್ ಉಪೇಂದ್ರ ಬ್ರಾಹ್ಮಣ, ಅದಕ್ಕೇ ಬ್ರಾಹ್ಮಣರಿಗೆ ಸಹಾಯ ಮಾಡಿದ್ದು ಎಂಬರ್ಥದಲ್ಲಿ ಮಾತಾಡಿದರು. ವಾಪಸ್ ಉಪೇಂದ್ರ ಕಡೆಯಿಂದ ಯಕ್ಕಾ ಮಕ್ಕಾ ಅನಿಸಿಕೊಂಡರು.

ಪ್ರಜಾಕೀಯವನ್ನು ಹೊರತುಪಡಿಸಿ ನೋಡುವುದಾದರೆ ಉಪೇಂದ್ರ ಒಬ್ಬ ಜನಪರ ಕಾಳಜಿಯುಳ್ಳ ವ್ಯಕ್ತಿ. ಉತ್ತಮ ನಾಯಕನಾಗುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಉತ್ತಮ ವ್ಯಕ್ತಿ ಅಂತೂ ಹೌದು. ಸಾಧ್ಯವಾದಾಗಲೆಲ್ಲ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಅವರ ಗುಣ.

ಎಲ್ಲೂ ಹೇಳಿಕೊಳ್ಳುವುದಿಲ್ಲವಾದರೂ ಅವರಿಂದ ಸಹಾಯ ಪಡೆದವರು ಅನೇಕ ಜನರಿದ್ದಾರೆ. ಇನ್ನು ಮೊನ್ನೆ ಕೊರೋನ ಕಾರಣಕ್ಕೆ ಲಾಕ್ ಡೌನ್ ಆಗಿ ಸಂಕಷ್ಟಕ್ಕೀಡಾಗಿರುವ ಬಡವರಿಗೆ, ಕಾರ್ಮಿಕರಿಗೆ ಇವರು ಆಹಾರ ಕಿಟ್ ಸಮೇತ ಹಲವು ಸಹಾಯ ಮಾಡಿರುವುದು ತಮಗೆಲ್ಲ ಗೊತ್ತಿದೆ. ಈ ಲಿಸ್ಟಲ್ಲಿ ಅರ್ಚಕರಿಗೂ ಅವರು ಸಹಾಯ ಮಾಡಿದರು.

ಆದರೆ ಉಪೇಂದ್ರ ಒಬ್ಬ ಬ್ರಾಹ್ಮಣ, ಹೀಗಾಗಿ ಅವರು ಬ್ರಾಹ್ಮಣ ಅರ್ಚಕರಿಗೆ ಸಹಾಯ ಮಾಡಿದ್ದಾರೆ ಅಂತ ಅವರದೇ ಚಿತ್ರರಂಗದ ಮಾಜಿ ಹೀರೊ ಚೇತನ್ ಆರೋಪಿಸಿದರು. ಉಪೇಂದ್ರ ಸುಮಾರು ಒಂದು ತಿಂಗಳಿಂದ ಸಾವಿರಾರು ಬಡ ಜನರಿಗೆ, ರೈತರಿಗೆ, ಸಿನೆಮಾ ಕಲಾವಿದರಿಗೆ, ಕಾರ್ಮಿಕರಿಗೆ ಸಹಾಯ ಮಾಡಿದ್ದು ಚೇತನ್ ಕಣ್ಣಿಗೆ ಕಾಣಲೇ ಇಲ್ಲ.

ಚೇತನ್ ಮೊದಲು ತಾನು ಎಲ್ಲ ವರ್ಗದವರಿಗೆ ಸಹಾಯ ಮಾಡಲಿ, ನಂತರ ಉಳಿದವರ ಬಗ್ಗೆ ಮಾತಾಡಬಹುದಿತ್ತು‌. ಉಪೇಂದ್ರ ತನ್ನ ದುಡ್ಡಲ್ಲಿ ತಾನು ಯಾರಿಗಾದರೂ ಕೊಡಲಿ, ಅದು ಇತರರಿಗೆ ಸಂಬಂಧವಿರಲಾರದ ವಿಷಯ. ಅವರೇನು ಸರ್ಕಾರದ ಸೌಲಭ್ಯ ಹಂಚುತ್ತಿಲ್ಲ, ತಮ್ಮ ಸ್ವಂತ ದುಡಿಮೆಯಲ್ಲಿ ದಾನ ಮಾಡಿರುವುದು.

ಇನ್ನು ಸಾ’ರಾ’ಯಿಯಿಂದ ಜನ ಸಾಯುತ್ತಾರೆ, ಹೊಲ ಮನೆ ಕಳೆದುಕೊಳ್ಳುತ್ತಾರೆ, ಹೆಂಡತಿ ಮಕ್ಕಳು ಉಪವಾಸ ಇರಬೇಕು ಎಂಬುದು ಎಲ್ಲರಿಗೂ ಗೊತ್ತು, ಹಾಗಿದ್ದಾಗೂ ಸರ್ಕಾರವೇ ಮುಂದೆ ನಿಂತು ಸಾ’ರಾ’ಯಿ ಮಾರುತ್ತದೆ. ಆಗ ನಾವು ಮಾಡಬೇಕಾಗಿದ್ದು ಸರ್ಕಾರದ ವಿರುದ್ಧ ಪ್ರತಿಭಟನೆಯೇ ಹೊರತು, ಬಾ’ರ್ ಗಳ‌ ಮುಂದೆ ಅಲ್ಲ. ಇವರು ಅನುಮತಿ ಕೊಟ್ಟಿದ್ದಕ್ಕೆ ತಾನೆ ಅವರು ಮಾರುವುದು.

ಇನ್ನು ಆನ್ ಲೈನ್ ರಮ್ಮಿ ಗೇಮ್ ಬಗ್ಗೆ ಕೂಡ ಇದೇ ಮಾತು ಅಪ್ಲೈ ಆಗುತ್ತದೆ. ಕೆಲವು ರಾಜ್ಯಗಳಲ್ಲಿ ಈ ರಮ್ಮಿಯನ್ನು ಬ್ಯಾನ್ ಮಾಡಿದ್ದಾರೆ, ಆದರೆ ಕೆಲವು ರಾಜ್ಯಗಳಲ್ಲಿ. ಅಂದ ಮೇಲೆ ನಾವು ಆಯಾ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟೊಸಬೇಕೇ ಹೊರತು, ಅದರ ಜಾಹಿರಾತು ಮಾಡಿದ ಮಾಡೆಲ್ ವಿರುದ್ಧ ಅಲ್ಲ. ಇಲ್ಲಿ ಚೇತನ್ ಮಾಡಿದ ತಪ್ಪು ಇದೇ.

ಚೇತನ್ ಉದ್ದೇಶ ಸರಿ ಇದೆ, ಆನ್ ಲೈನ್ ರಮ್ಮಿ ಬ್ಯಾನ್ ಆಗಬೇಕು. ಆದರೆ ಅದನ್ನು ವ್ಯವಸ್ಥಿತವಾಗಿ ಹೋರಾಟದ ಮೂಲಕ ಮಾಡಬೇಕೇ ಹೊರತು, ಅದರ ಜಾಹಿರಾತು ಮಾಡಿದ ಸುದೀಪ್ ವಿರುದ್ಧ ಮಾತಾಡಿದರೆ ಅವರು ಏನು ಮಾಡಬೇಕು? ಸುದೀಪ್ ಕೂಡ ಹೇಳಿಕೊಳ್ಳುವುದಿಲ್ಲವಾದರೂ ಅವರಿಂದ ನೆರವು ಪಡೆದವರು ಅನೇಕರಿದ್ದಾರೆ.

ರಮ್ಮಿ ಜಾಹಿರಾತಿನಿಂದ ಬಂದ ದುಡ್ಡನ್ನು ಕೂಡ ಸುದೀಪ್ ಮತ್ಯಾವುದೋ ಒಳ್ಳೆ ಕೆಲಸಕ್ಕೇ ಬಳಸುವುದು. ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡುತ್ತಿರುವ ಸಮಾಜಸೇವೆ ತುಂಬಾ ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಚಿತ್ರರಂಗದ ಎಲ್ಲ ಹಿರಿಯ ಕಲಾವಿದರ ಲಿಸ್ಟ್ ಮಾಡಿ ಅವರ ಮನೆ ಬಾಗಿಲಿಗೇ ಕಿಟ್ ಕಳಿಸಿದರು.

ಚೇತನ್ ಇನ್ನೊಬ್ಬರ ಬಗ್ಗೆ ಮಾತಾಡುವಾಗ ತಮ್ಮ ಬಗ್ಗೆ ಯೋಚಿಸಿಕೊಳ್ಳಲಿ, ತಮ್ಮ ಕೆಲಸ ಏನು, ತಮ್ಮ ಸೇವೆ ಏನು ನೋಡಿಕೊಳ್ಳಲಿ. ವಿನಾಕಾರಣ ಕಂಡಕಂಡವರ ಬಗ್ಗೆ ಮಾತಾಡಿ ತಮ್ಮಗಿರುವ ಮರ್ಯಾದೆಯನ್ನು ಕಡಿಮೆ ಮಾಡಿಕೊಳ್ಳಬಾರದು. ಮೇಲಿನ ವಿಡಿಯೊದಲ್ಲಿ ಸುದೀಪ್ ಒಂದೇ ಒಂದು ಅಸಂವಿಧಾನಿಕ ಪದ ಬಳಸದೇ ತಿವಿದಿರುವುದು ಹೇಗಿದೆ ನೋಡಿ…
-Team Infotrend