ಶನಿ ಜಯಂತಿ : ಇವತ್ತೇ ಸೂರ್ಯಗ್ರಹಣ ಕೂಡ ಇದೆ, ಮರೆತು ಕೂಡ ಈ ಕೆಲಸ ಮಾಡಬೇಡಿ

ಇವತ್ತು ನ್ಯಾಯದೇವತೆ ಶನಿದೇವನ ಜಯಂತಿ ಇದೆ, ಹಾಗೆಯೇ ಈ ದಿನ ಸೂರ್ಯಗ್ರಹಣ ಕೂಡ ಇದೆ. ಶನಿದೇವ ಎಲ್ಲರಿಗೂ ಅವರವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುತ್ತಾನೆ. ಕೆಟ್ಟ ಕರ್ಮಾಡಿದವರಿಗಷ್ಟೆ ಶನಿದೇವ ಹಾನಿ ಮಾಡುವುದು, ಒಳ್ಳೆ ಕೆಲಸ ಮಾಡಿದವರಿಗೆ ಆತ ಯಾವತ್ತೂ ಕೃಪೆ ತೋರುತ್ತಾನೆ. ಆದರೆ ಈ ದಿನ ಈ ಕೆಳಗಿನ ಕೆಲವು ತಪ್ಪುಗಳನ್ನು ಮಾಡದೇ ಶನಿದೇವನ ಕೃಪೆಗೆ ಪಾತ್ರರಾಗಿ…

1) ಶನಿಜಯಂತಿಯ ದಿನ ಗಾಜಿನ ಯಾವುದೇ ವಸ್ತುವನ್ನು ಖರೀದಿಸಬಾರದು. ಗಾಜಿನಿಂದ ಮಾಡಿದ ಸಾಮಾನುಗಳನ್ನು ಕೊಂಡು ಮನೆಯೊಳಗೆ ತಗೆದುಕೊಂಡು ಹೋಗಬೇಡಿ.
2) ಶನಿ ಜಯಂತಿ ದಿನ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಸಹ ಮನೆಯೊಳಗೆ ಕೊಂಡೊಯ್ಯಬಾರದು. ಶನಿಯ ವಿಶೇಷ ಸಮಯದಲ್ಲಿ ಹೀಗೆ ಮಾಡುವುದರಿಂದ ಶನಿದೇವ ಬೇಜಾರಾಗಬಹುದು. ಆತನ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳಬಹುದು.

3) ಶನಿ ಜಯಂತಿಯ ಈ ದಿನ ಪವಿತ್ರ ಸಸ್ಯಗಳಾದ ತುಳಸಿ, ಬೇಲಪತ್ರಿ, ಅರಳಿ ಮುಂತಾದವುಗಳ ಎಲೆ ಕೀಳಬಾರದು. ಹೀಗೆ ಮಾಡುವುದರಿಂದಲೂ ಶನಿಯ ಅವಕೃಪೆಗೆ ಒಳಗಾಗಬಹುದು.
4) ಆದಷ್ಟು ಇವತ್ತು ದುಡ್ಡಿನ ವ್ಯವಹಾರದಿಂದ ದೂರ ಇರಿ, ಯಾರಿಂದಲೂ ಸಾಲ ಪಡೆದು ದುಡ್ಡನ್ನು ಮನೆಗೆ ತಂದು ಇಡಬೇಡಿ. ಸುಳ್ಳು ಹೇಳುವುದು – ಕೋಪ ಮಾಡಿಕೊಳ್ಳುವುದರಿಂದಲೂ ಜಾಗೃತೆವಹಿಸಿ.

5) ಶನಿ ಜಯಂತಿಯ ಈ ದಿನ ಹೇರ್ ಕಟ್ ಮಾಡಿಸಬೇಡಿ. ಉಗುರು ಕತ್ತರಿಸಬೇಡಿ, ಹೀಗೆ ಮಾಡುವುದರಿಂದ ಶನಿ ನಿಮ್ಮ ಆರ್ಥಿಕ ಏಳಿಗೆಗೆ ಹೊಡೆತ ಕೊಡಬಹುದು.
6) ಶನಿ ಜಯಂತಿಯ ಈ ದಿನ ಹೊಸ ಬಟ್ಟೆ, ಹೊಸ ಚಪ್ಪಲಿ ಯಾವುದನ್ನೂ ಕೊಳ್ಳಬೇಡಿ. ಹೀಗೆ ಕೊಂಡು ಮನೆಗೆ ತಂದು ಇಡುವುದು ಇವತ್ತು ಅಶುಭದಾಯಕ.

7) ಶನಿ ಜಯಂತಿಯ ಈ ದಿನ ಆದಷ್ಟು ಮನೆಯಲ್ಲೇ ಇರಿ, ಮುಖ್ಯ ಕೆಲಸದ ಹೊರತು ಊರಿಂದೂರಿಗೆ ಪ್ರಯಾಣ ಬೇಡ. ಪ್ರವಾಸ ಮುಂದೆ ಹಾಕಲು ಸಾಧ್ಯವಿದ್ದರೆ ಮುಂದೆ ಹಾಕುವುದು ಒಳ್ಳೆಯದು.
8) ಇವತ್ತು ಮನೆಗೆ ಎಣ್ಣೆ ತರಬಾರದು, ಹಾಗೂ ಎಣ್ಣೆಯಿಂದ ಶರೀರಕ್ಕೆ ಮಸಾಜ್ ಮಾಡಿಕೊಳ್ಳಬಾರದು. ಶನಿವಾರ ದಿನ ಶನಿದೇವನಿಗೆ ಕಪ್ಪು ಎಳ್ಳಿನ ಎಣ್ಣೆ ಅರ್ಪಿಸುವುದು ಒಳ್ಳೆಯದು.
9) ಶನಿ ಅಮವಾಸೆಯ ದಿನ ಶಾರರೀಕ ಸಂಬಂಧ ಬೇಡ, ಸಂಯಮದಿಂದ ಇರಿ.
10) ಶನಿದೇವನನ್ನು ಬಡವರು ಹಾಗೂ ಅಸಹಾಯಕರ ದೇವರು ಎನ್ನಲಾಗುತ್ತದೆ. ಆದ್ದರಿಂದ ಅಂಥವರ ಅವಮಾನ ಅಥವಾ ಅಂಥವರಿಗೆ ನೋವು ಕಪೆಉವ ಕೆಲಸ ಮಾಡಿದರೆ ಶನಿದೇವ ಖಂಡಿತ ಶಿಕ್ಷೆ ವಿಧಿಸುವನು.
-Team Infotrend