ಸುಶಾಂತ್ ಇದ್ದ ಮನೆ ಮತ್ತೆ ಬಾಡಿಗೆಗೆ, ಯಾರೂ ಕೇಳುವವರಿಲ್ಲ! ಬಾಡಿಗೆ ಎಷ್ಟು ಗೊತ್ತಾ?

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ರವರು ಇದ್ದ  ಅಪಾರ್ಟಮೆಂಟ್ ಮತ್ತೆ ಬಾಡಿಗೆಗೆ ಲಭ್ಯವಿದೆ. ಒಂದು ವರ್ಷದಿಂದ ಆ ಮನೆ ತನಿಖಾ ಏಜೆನ್ಸಿಗಳ ಸುಪರ್ದಿಯಲ್ಲಿ ಇತ್ತು. ಅತ್ಯಂತ ಸೆನ್ಸೆಶನ್ ಕ್ರಿಯೇಟ್ ಮಾಡಿದ ಸಾ’ವುಗಳಲ್ಲಿ ಇದೂ ಒಂದಾಗಿತ್ತು, ಆದ್ದರಿಂದ ಈ ಮನೆಯಲ್ಲಿ ಬರೊಬ್ಬರಿ ಏಜೆನ್ಸಿಗಳು ತನಿಖೆ ನಡೆಸಿವೆ. ಕೊನೆಯದಾಗಿ ಈಗ ಅದು ಖಾಲಿ ಆಗಿದ್ದು, ಕೆಲದಿನಗಳೇ ಹಿಂದೆಯೇ ಅದು ಬಾಡಿಗೆಗೆ ಲಭ್ಯ ಎಂದು ತಿಳಿಸಲಾಗಿದೆ, ಆದರೆ ಇನ್ನೂ ಕೂಡ ಯಾರೂ ಅಲ್ಲಿ ಬಾಡಿಗೆ ಬರಲು ಮುಂದೆ ಬಂದಿಲ್ಲ.

ಮುಂಬೈನ ಬಾಂದ್ರಾದಲ್ಲಿನ ಅವರ  ಮನೆಯಲ್ಲಿ ಸುಶಾಂತ್ ರವರು ಜೂನ್ 14 2020 ರಂದು ಡೂಪ್ಲೆಕ್ಸ್ ಫ್ಲಾಟ್ ನ ಕೋಣೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇ ‘ ಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದಿನಿಂದ ಆ ಮನೆಯನ್ನು ಸೀ’ಜ್ ಮಾಡಲಾಗಿತ್ತು. ವಾಸ್ತವವಾಗಿ ಈ ಫ್ಲಾಟ್ ತನಿಖೆಯ ಭಾಗವಾಗಿತ್ತು ಮತ್ತು ಕಳೆದ ಒಂದು ವರ್ಷದಲ್ಲಿ ಸಿಬಿಐ, ಎನ್‌ಸಿಬಿ, ಇಡಿ, ಮುಂಬೈ ಮತ್ತು ಬಿಹಾರ ಪೊಲೀಸರ ಜನರು ಇಲ್ಲಿಗೆ ಅನೇಕ ಬಾರಿ ಬಂದಿದ್ದಾರೆ.

ಕೊನೆಗೆ ತನಿಖೆ ಬಹುತೇಕ ಪೂರ್ಣಗೊಂಡ ನಂತರ ಈಗ ಈ ಅಪಾರ್ಟ್ಮೆಂಟ್ ಬಾಡಿಗೆಗೆ ಸಿದ್ಧವಾಗಿದೆ. ಈ ಎರಡು ಅಂತಸ್ತಿನ ಸೀ ವ್ಯೂ ಅಪಾರ್ಟ್ಮೆಂಟ್ ತುಂಬಾ ಸುಂದರವಾಗಿದೆ. ನೀವು ನಂಬಲಿಕ್ಕಿಲ್ಲ, ಸುಶಾಂತ್ ಅದಕ್ಕೆ ಪ್ರತಿ ತಿಂಗಳು 4 ಲಕ್ಷ 51 ಸಾವಿರ ಬಾಡಿಗೆಯನ್ನು ಪಾವತಿಸುತ್ತಿದ್ದರು! ಹೌದು ಪ್ರತಿ ತಿಂಗಳು ಅದರ ಬಾಡಿಗೆ ನಾಲ್ಕೂವರೆ ಲಕ್ಷ!

ಹೀಗಾಗಿ ಕಳೆದ ಒಂದು ವರ್ಷದಿಂದ ಈ ಮನೆಯ ಮಾಲಿಕರು ಭರ್ತಿ 55 ಲಕ್ಷ ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ! ಈ ಅಪಾರ್ಟ್‌ಮೆಂಟ್‌ ನ ಬಾಡಿಗೆಯನ್ನು ಸುಶಾಂತ್ 3 ಭಾಗಗಳಲ್ಲಿ ಪಾವತಿಸುವವರಿದ್ದರು. ಅವರು ಮೊದಲ ವರ್ಷದಲ್ಲಿ ತಿಂಗಳಿಗೆ 4.3 ಲಕ್ಷ ರೂ., ಎರಡನೇ ವರ್ಷದಲ್ಲಿ 4.51 ಲಕ್ಷ ರೂ. ಮತ್ತು ಮೂರನೇ ವರ್ಷದಲ್ಲಿ ತಿಂಗಳಿಗೆ 4.74 ರೂ. ಪಾವತಿಸಬೇಕಿತ್ತು.

ಸೆಲೆಬ್ರಿಟಿ ಬ್ರೋಕರ್ ಮಾತನಾಡಿ, ಅಪಾರ್ಟ್ಮೆಂಟ್ ಬಾಡಿಗೆಗೆ ಸಿದ್ಧವಾಗಿದೆ ಆದರೆ ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಈ ಮನೆಯನ್ನು ನೋಡಲು ಹೆಚ್ಚಿನ ಜನರು ಬಂದಿಲ್ಲ. ಬಂದ ಕೆಲವರು ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಕೇಳುತ್ತಾರೆ. ಈ ಸಾಂಕ್ರಾಮಿಕ ರೋಗವು ಕೊನೆಗೊಂಡ ಮೇಲೆ ಬಾಡಿಗೆದಾರ ಸಿಗಬಹುದು ಎಂದಿದ್ದಾರೆ.

ಸುಶಾಂತ್ 2022 ರವರೆಗೆ ಅದರಲ್ಲಿ ವಾಸಿಸಬೇಕಾಗಿತ್ತು :

ಫ್ಲ್ಯಾಟ್‌ ನ ಸ್ಥಳದಿಂದಾಗಿ ಹೊಸ ಬಾಡಿಗೆದಾರರು ಆದಷ್ಟು ಬೇಗ ಅಪಾರ್ಟ್‌ಮೆಂಟ್‌ಗೆ ಬರುತ್ತಾರೆ ಎಂದು ಅದರ ಮಾಲಿಕರು ಭಾವಿಸುತ್ತಾರೆ. ಸುಶಾಂತ ಸಾ’ವಿನ ವಿಷಯ ಮನೆಗೆ ಬಾಡಿಗೆ ಬರುವವರಿಗೆ ಕಾಡಲಿಕ್ಕಿಲ್ಲ, ಈಗಿನವರು ಹಾಗೆಲ್ಲ ಯೋಚಿಸುವುದಿಲ್ಲ ಎಂಬುದು ಅವರ ಅನಿಸಿಕೆ.

ಸುಶಾಂತ್ ಸಾ’ವಿಗೆ ಮುಂಚೆ ರಿಯಾ ಚಕ್ರವರ್ತಿ, ಸಿದ್ಧಾರ್ಥ್ ಪಿಠಾನಿ ಮತ್ತು ಮನೆಕೆಲಸಗಾರರಾದ ನೀರಜ್ ಮತ್ತು ಕೇಶವ್ ಅದರಲ್ಲಿ ವಾಸಿಸುತ್ತಿದ್ದರು. ಸುಶಾಂತ್ ಅವರು 2019 ರಲ್ಲಿ ಈ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು ಮತ್ತು ಅವರು 2022 ರ ಡಿಸೆಂಬರ್ ವರೆಗೆ ಈ ಮನೆಯಲ್ಲಿ ವಾಸಿಸಬೇಕಿತ್ತು.

-Team Infotrend