ಬಂದಿದೆ ಹೊಚ್ಚ ಹೊಸ ಕೂಲರ್ : AC ಯ ಹಾಗೆ ಗೋಡೆಯಲ್ಲಿ ಫಿಟ್ ಮಾಡಬಹುದು ಮತ್ತು ವಿದ್ಯುತ್ ಕೂಡ ಉಳಿಸಬಹುದು..!

ಬಿರು ಬಿಸಿಲಿನ ತಾಪಕ್ಕೆ ಸಾಕಾಗಿ AC ಏರ್ ಕಂಡೀಶನರ್ ಕೊಂಡು ಕೊಳ್ಳಲು ಎಲ್ಲರೂ ಮುಗಿಬೀಳುವುದು ಸಾಮಾನ್ಯ. ಆದರೆ ಅದರ ಬೆಲೆ ಹಾಗೂ ತೆಗೆದುಕೊಂಡು ಬಂದು ಮನೆಯಲ್ಲಿ ಫಿಟ್ ಮಾಡಿದ ಮೇಲೆ ಪ್ರತಿ ತಿಂಗಳು ಇದು ಖರ್ಚು ಮಾಡುವ ವಿದ್ಯುತ್ ಬಿಲ್ ನೋಡಿ ಬಡ ಹಾಗೂ ಮಧ್ಯಮ ವರ್ಗದವರು ದಂಗಾಗುವುದು ಗ್ಯಾರಂಟಿ..! ಅದೊಂಥರ ಶ್ರೀಮಂತರ ಬ್ರಾಂಡಾಗಿ ಹೋಗಿದೆ.

ಮಧ್ಯಮವರ್ಗದವರು ಬೇಕಿದ್ದರೆ ಕೂಲರ್ ತಂದು ಇಟ್ಟುಕೊಳ್ಳಬಹುದು, ವಿದ್ಯುತ್ ಬಿಲ್ ಕೂಡ ಉಳಿಸಬಹುದು. ಆದರೆ ಅದಕ್ಕೆ ಪ್ರೆಸ್ಟೀಜ್ ಅಡ್ಡಿ ಮಾಡುತ್ತದೆ. ಆದರೆ ಈಗ ಇದೆಲ್ಲದಕ್ಕೂ ಒಂದು ಪರಿಹಾರ ದೊರೆತಂತೆ ಮಾರುಕಟ್ಟೆಯಲ್ಲಿ ಒಂದು ಹೊಸ ಮಾಡೆಲ್ ಕೂಲರ್ ಬಂದಿದೆ, ಅದರ ಬಗ್ಗೆ ಒಂದು ವರದಿ ಇಲ್ಲಿದೆ…

ಈ ಕೂಲರ್ ನೋಡಲು ಥೇಟ್ AC ಯಂತೆಯೇ ಇದ್ದು, ಇದನ್ನು ಕೂಡ ಗೋಡೆಯಲ್ಲಿ ಫಿಟ್ ಮಾಡಬಹುದಾಗಿದೆ ಹಾಗೂ ಇದರಲ್ಲಿನ ವಿಶೇಷತೆಗಳು ಸಹ AC ಯಂತೆಯೇ ಇದ್ದು, ಇದನ್ನು ಮನೆಯಲ್ಲಿ ಫಿಟ್ ಮಾಡುವದರಿಂದ ಒಂದಲ್ಲ ಎರಡು ಲಾಭಗಳಿವೆ. ಅವುಗಳೆಂದರೆ ಇದು ನೋಡಲು AC ಯಂತೆಯೇ ಕಾಣುವುದರಿಂದ ಮನೆಗೆ ನೋಡಲು ಸುಂದರವಾಗಿ ಕಾಣಿಸುತ್ತದೆ ಅದರಂತೆಯೇ ವಿದ್ಯುತ್ ಬಿಲ್ ಕೂಡ ಕಡಿಮೆ ಬರುವದರಿಂದ ಹಣವೂ ಉಳಿತಾಯವಾಗುತ್ತದೆ.

ನಾವು ಸದ್ಯ ಮಾತನಾಡುತ್ತಿರುವ ಕೂಲರ್ ನ ಹೆಸರು Symphony Cloud 15 Air Cooler. ಇದರ ಕೆಪ್ಯಾಸಿಟಿ 15 ಲೀಟರ್ ಆಗಿದ್ದು, ಇದರೊಂದಿಗೆ AC ಯಂತೆಯೇ ರಿಮೋಟ್ ಕೂಡ ಇದೆ. ಇದಷ್ಟೇ ಅಲ್ಲದೇ ಇದನ್ನು ತಯಾರಿಸಿದ ಕಂಪನಿ ಎಷ್ಟೊಂದು ಚಾಲಾಕಿಯಾಗಿದೆ ಎಂದರೆ ಇದನ್ನು ಥೇಟ್ AC ಯಂತೆಯೇ ಗೋಡೆಯಲ್ಲಿ ಹಾಕಬಹುದು ಹಾಗೂ ಇದನ್ನು ನೋಡಿದ ಯಾರು ಕೂಡ ಇದನ್ನು ಇದು ಕೂಲರ್ ಎಂದು ಕಂಡು ಹಿಡಿಯಲಾರರು..!

ಇಷ್ಟೇ ಅಲ್ಲದೇ ಇದರ ಬೆಲೆ ಕೂಡ ಬಹಳಷ್ಟು ಕಡಿಮೆ ಇದ್ದು, ಇದರೊಂದಿಗೆ ಆಫರ್ ಗಳನ್ನು ಕೂಡ ಇಟ್ಟಿರುವದರಿಂದ ಇದನ್ನು ಯಾರು ಬೇಕಾದರೂ ಕೊಂಡುಕೊಳ್ಳಬಹುದಾಗಿದೆ. ಇತರ ವಿಶೇಷತೆಗಳು…

15 ಲೀಟರ್ ನ ವಾಟರ್ ಟ್ಯಾಂಕ್ :
ಎಲ್ಲಾ ಕೂಲರ್ ಗಳಿಗಿಂತ ಭಿನ್ನಾವಾಗಿರುವ ಈ ಕೂಲರ್ ಬರೋಬ್ಬರಿ 15 ಲೀಟರ್ ನೀರು ಹಿಡಿಯುವ ವಾಟರ್ ಟ್ಯಾಂಕ್ ಫೆಸಿಲಿಟಿ ಹೊಂದಿರುವದರಿಂದ AC ಯಂತೆಯೇ ಬಹಳಷ್ಟು ವೇಗವಾಗಿ ಕೋಣೆಯನ್ನು ತಂಪು ಮಾಡಬಲ್ಲದು. 57 ಚದುರ ಮೀಟರ್ ನಷ್ಟು ದೊಡ್ಡ ರೂಮ್ ನವರೆಗೆ ಇದು ಕೂಲ್ ಮಾಡಬಲ್ಲದು.

ಇದರೊಂದಿಗೆ ಈ ಕೂಲರ್ ಗೆ ಮೂರು ಸೈಡ್ ಕೂಲಿಂಗ್ ಪ್ಯಾಡ್ ಸಿಸ್ಟಮ್ ನೀಡಲಾಗಿದೆ. ಇದು ಕೂಡ ಬೇಗನೆ ಕೂಲ್ ಮಾಡಲು ಸಹಕಾರಿಯಾಗಿದೆ. ಇನ್ನೊಂದು ವಿಶೇಷತೆ ಎಂದರೆ ಇದರಲ್ಲಿ Dehumidifying ಫೆಸಿಲಿಟಿ ಇರುವದರಿಂದ ತೇವಾಂಶ ತೆಗೆದು ಹಾಕಿ ಕೇವಲ ತಂಪಾದ ಗಾಳಿಯನ್ನು ನೀಡುತ್ತದೆ.

ರಿಮೋಟ್ : Symphony Cloud air cooler ಜೊತೆಗೆ ಬರುವ ಒಂದು ರಿಮೋಟ್ ಕೇವಲ ನಿಮಗೆ ಬೇಕಾದಷ್ಟು ತಂಪು ಗಾಳಿ ಸೆಟ್ ಮಾಡಿಕೊಳ್ಳುವುದಲ್ಲದೆ, ಇದರಲ್ಲಿ 10 ತಾಸಿನವರೆಗೂ ಟೈಮ್ ಸೆಟ್ ಮಾಡಿಟ್ಟು ಕೂಲರ್ ಆನ್ ಇಡಬಹುದು. ಇದರಿಂದ ವಿದ್ಯುತ್ ಬಿಲ್ ಸಹ ಕಡಿಮೆಯಾಗುತ್ತದೆ.

ಟೆಕ್ನಾಲಜಿ : ಈ ಕೂಲರ್ ನಿಮಗೆ ಕೇವಲ ತಂಪು ಗಾಳಿಯನ್ನಷ್ಟೇ ನೀಡುವುದಿಲ್ಲ ಬದಲಾಗಿ ಸ್ವಚ್ಛ ಹಾಗೂ ಸೂಕ್ಷ್ಮ ಜೀವಿ ರಹಿತ ಗಾಳಿ ನೀಡುತ್ತದೆ, ಏಕೆಂದರೆ ಇದು ಗಾಳಿಯನ್ನು ಒಳಗೆ ಬಿಡುವಾಗ ಫಿಲ್ಟರ್ ಮಾಡಿಯೇ ಬಿಡುತ್ತದೆ!

ಅಲರ್ಟ್ ಸಿಸ್ಟಮ್ : ಈ ಸಿಸ್ಟಮ್ ಮೂಲಕ ಕೂಲರ್ ನಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಒಂದು ಅಲಾರಾಂ ಸದ್ದು ಮಾಡುವಂತೆಯೂ ಸೆಟ್ಟಿಂಗ್ ಮಾಡಬಹುದು. ಇದರಿಂದಾಗಿ ನೀರು ಇದೆಯಾ ಕಡಿಮೆಯಾಗಿದೆಯಾ ಎಂದು ನೋಡುವ ಪ್ರಮೇಯ ಬರುವುದಿಲ್ಲ.

SMPS ಟೆಕ್ನಾಲಜಿ : ಈ ಟೆಕ್ನಾಲಜಿಯ ಸಹಾಯದಿಂದ ವಿದ್ಯುತ್ ಏರಿಳಿತಗಳು ಅಂದರೆ ವೋಲ್ಟೇಜ್ ಹೆಚ್ಚು ಕಡಿಮೆಯಾಗುವುದರಿಂದ ಕೂಲರ್ ಗೆ ಸಂಭವಿಸಬಹುದಾದ ಹಾನಿಯು ಈ ಟೆಕ್ನಾಲಜಿಯ ಸಹಾಯದಿಂದ ತಪ್ಪುತ್ತದೆ.

ಆಟೋ ಕ್ಲೀನ್ ಫಂಕ್ಷನ್ ಹಾಗೂ ಇನ್ವರ್ಟರ್ ನಿಂದಲೂ ನಡೆಯುತ್ತದೆ : ಕೂಲರ್ ನ ಸಂದುಗಳಲ್ಲಿ ಉಳಿಯುವ ನೀರು ಕೆಟ್ಟು ಹೋಗುವುದು ಸಹಜ ಆದರೆ ಈ ಕೂಲರ್ ತನ್ನಷ್ಟಕ್ಕೆ ತಾನೇ ಸ್ವಚ್ಛಗೊಳಿಸಿಕೊಳ್ಳುವದರಿಂದ ಆ ಕೆಲಸವೂ ಇರುವುದಿಲ್ಲ, ಇಷ್ಟೇ ಅಲ್ಲದೇ ಇದು ವಿದ್ಯುತ್ ಕಡಿತದ ಸಮಯದಲ್ಲಿ ಇನ್ವರ್ಟರ್ ಸಹಾಯದಿಂದಲೂ ಕೂಡ ನಡೆಯುತ್ತದೆ.

ಬೆಲೆ ಎಷ್ಟಿದೆ :
ಕಂಪನಿಯ ವೆಬ್ಸೈಟ್ ನಲ್ಲಿ ಇದರ ಬೆಲೆಯನ್ನು 14,999 ರೂಪಾಯಿಗಳು ಎಂದು ನಮೂದಿಸಲಾಗಿದೆ, ಆದರೆ ಇದರ ಮೇಲೆ ಕಂಪನಿ 33% ಡಿಸ್ಕೌಂಟ್ ಆಫರ್ ನೀಡಿರುವದರಿಂದ ಇದನ್ನು ನೀವು 9,999 ರೂಪಾಯಿ ನೀಡಿ ಖರೀದಿಸಬಹುದಾಗಿದೆ. ಇದಕ್ಕೆ ಒಂದು ವರ್ಷ ವಾರಂಟಿ ಹಾಗೂ ಫ್ರೀ ಹೋಮ್ ಡೆಲಿವರಿ ವ್ಯವಸ್ಥೆ ಕೂಡ ಕಂಪನಿ ವತಿಯಿಂದಲೇ ಸಿಗುತ್ತದೆ..!
-ಮಂಜುನಾಥ್