T20 ವರ್ಲ್ಡ್ ಕಪ್ ನಲ್ಲಿ ಹೊಸ ವಿವಾದ, ದಕ್ಷಿಣ ಆಫ್ರಿಕಾದ ಡಿಕಾಕ್ ಕೊನೆ ಕ್ಷಣದಲ್ಲಿ ಪಂದ್ಯದಿಂದ ಹಿಂದೆ ಸರಿದರು, ಕಾರಣ ತುಂಬಾ ಆಘಾತಕಾರಿ…
ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ t20 ವರ್ಲ್ಡ್ ಕಪ್ ನಲ್ಲಿ ಹೊಸ ವಿವಾದವೊಂದು ಹುಟ್ಟು ಹಾಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹಿಂದೆ ಸರಿದರು. ಇದಕ್ಕಾಗಿ ಅವರು ತಮ್ಮ ವೈಯಕ್ತಿಕ ಕಾರಣವನ್ನು ನೀಡಿದರೂ ಸಹ ಪ್ರಸ್ತುತ ಪ್ರಕರಣಕ್ಕೆ ಈಗ ಬೇರೆಯೇ ತಿರುವು ಸಿಕ್ಕಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ಪ್ರತಿಯೊಂದು ಪಂದ್ಯಕ್ಕೂ ಮುನ್ನ ಮೊಳಕಾಲಿನ ಮೇಲೆ ಕುಳಿತು ಬ್ಲಾಕ್ ಲೈವ್ಸ್ ಮ್ಯಾಟರ್ (Black Lives Matter) ಈ ಅಭಿಯಾನಕ್ಕೆ ಸಪೋರ್ಟ್ ಮಾಡಬೇಕೆಂದು ಆದೇಶಿಸಿದೆ. ಕ್ವಿಂಟನ್ ಡಿಕಾಕ್ ಮಾತ್ರ ಈ ಆದೇಶದ ಪಾಲನೆಯನ್ನು ಮಾಡಲು ಸಾಧ್ಯವಿಲ್ಲವೆಂದು ಪದ್ಯದಿಂದಲೇ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಕ್ವಿಂಟನ್ ಡಿಕಾಕ್ t20 ವರ್ಲ್ಡ್ ಕಪ್ ನಲ್ಲಿ ಆಡದಿರುವುದು ಸ್ಪಷ್ಟವಾಗಿದೆ.
ವರ್ಣದ್ವೇಷದ ವಿರೋಧದಲ್ಲಿ ಪ್ರತಿಯೊಂದು ತಂಡದ ಆಟಗಾರರು ಪಂದ್ಯಕ್ಕೂ ಮುನ್ನ ಮೊಳಕಾಲಿನ ಮೇಲೆ ಕುಳಿತು ಅಥವಾ ಕೈಗಳನ್ನು ಮೇಲೆ ಮಾಡಿ ಅಥವಾ ಕೈಯನ್ನು ಎದೆಯ ಮೇಲೆ ಇಟ್ಟು ಈ ಅಭಿಯಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ಸಹ ಮೊಳಕಾಲಿನ ಮೇಲೆ ಕುಳಿತು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಅದೇ ರೀತಿ ಪಾಕಿಸ್ತಾನದ ಆಟಗಾರರು ಸಹ ಎದೆಯ ಮೇಲೆ ಕೈಯನ್ನು ಇಟ್ಟು ವರ್ಣ ದ್ವೇಷಕ್ಕೆ ನಮ್ಮ ವಿರೋಧವಿದೆ ಎಂದು ಸಂದೇಶವನ್ನು ನೀಡಿದ್ದರು.

ದಕ್ಷಿಣ ಆಫ್ರಿಕಾದ ಮೊದಲ ಪಂದ್ಯದಲ್ಲಿಯೂ ಕ್ಲಿಂಟನ್ ಡಿಕಾಕ್ ಈ ಒಬ್ಬನೇ ಆಟಗಾರ ಮೊಣಕಾಲಿನ ಮೇಲೆ ಕುಳಿತಿರಲಿಲ್ಲ ಅಥವಾ ಈ ಅಭಿಯಾನಕ್ಕೆ ಬೆಂಬಲವನ್ನೂ ಸಹ ಸೂಚಿಸುವ ಸಲುವಾಗಿ ಎದೆಯ ಮೇಲೂ ಕೈ ಇಟ್ಟಿರಲಿಲ್ಲ. ಈ ಘಟನೆಯ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಟೀಮ್ ನಲ್ಲಿ ಐಕ್ಯತೆ ಇಲ್ಲದಿರುವುದು ಹಾಗೂ ಈ ಅಭಿಯಾನಕ್ಕೆ ಬೆಂಬಲ ಇಲ್ಲದಿರುವುದರ ಬಗ್ಗೆ ತಿಳಿದುಬರುತ್ತದೆ. ದಕ್ಷಿಣ ಆಫ್ರಿಕಾಕ್ಕೆ ಮೊದಲೇ ವರ್ಣದ್ವೇಷ ದಲ್ಲಿ ಬೆಂದ ಇತಿಹಾಸವಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ತನ್ನ ಆಟಗಾರರಿಗೆ ಪಂದ್ಯಕ್ಕೂ ಮುನ್ನ ಮೊಣಕಾಲಿನ ಮೇಲೆ ಕುಳಿತುಕೊಳ್ಳಲು ಈ ಅಭಿಯಾನಕ್ಕೆ ಬೆಂಬಲ ನೀಡಲು ಆದೇಶ ನೀಡಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದ ಈ ಆದೇಶದ ನಂತರ ಕ್ವಿಂಟನ್ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ವಯಕ್ತಿಕ ಕಾರಣವನ್ನು ನೀಡಿ ಹಿಂದೆ ಸರಿದರು. ಆ ಪಂದ್ಯಕ್ಕೆ ಕ್ವಿಂಟನ್ ಡಿಕಾಕ್ ಬದಲಾಗಿ ರೀಜಾ ಹೆಡ್ರಿಕ್ಸ್ ಗೆ ತಂಡದಲ್ಲಿ ಶಾಮೀಲು ಮಾಡಿದರು.
ಕ್ವಿಂಟನ್ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ಧ 50.33 ನ ಸರಾಸರಿ ಇಂದ ಹಾಗೂ 133.63 ರ ಸ್ಟ್ರೈಕ್ ರೇಟ್ ನಿಂದ 302 ರನ್ಗಳನ್ನು ಕಲೆ ಹಾಕಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಕ್ವಿಂಟನ್ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ಧ ಅತ್ಯಧಿಕ ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಆಟಗಾರರಾಗಿದ್ದಾರೆ.