T20 World Cup! ಟೀಮ್ ಇಂಡಿಯಾ ಮೆಂಟರ್ ಧೋನಿ ತೆಗೆದುಕೊಳ್ಳುವ ಗೌರವಧನ ಎಷ್ಟು ಗೊತ್ತಾ? BCCI ದ ಜಯ್ ಶಹಾ ಹೇಳುತ್ತಾರೆ.

T20 ವರ್ಲ್ಡ್ ಕಪ್ ಸ್ಪರ್ಧೆಗೆ ಇನ್ನು ಕೆಲವೇ ದಿವಸಗಳು ಬಾಕಿ ಇವೆ. ಅಕ್ಟೋಬರ್ 17 ರಿಂದ ಈ ಸ್ಪರ್ಧೆ ಪ್ರಾರಂಭವಾಗಲಿವೆ. ಈ ಸ್ಪರ್ಧೆಗೆ ಬಿಸಿಸಿಐ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಮಾರ್ಗದರ್ಶಕರನ್ನಾಗಿ ನೇಮಕಮಾಡಿದೆ. ಅಕ್ಟೋಬರ್ 24 ರಂದು ಭಾರತ ತನ್ನ ಮೊದಲ ಪಂದ್ಯ ಪಾಕಿಸ್ತಾನದ ಜೊತೆಗೆ ಆಡಲಿದೆ. ಏತನ್ಮದ್ಯೆ ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಹಾ ಅವರು ಧೋನಿ ಮಾರ್ಗದರ್ಶಕರಾಗಲು ಎಷ್ಟೊಂದು ಗೌರವಧನ ತೆಗೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು t20 ವರ್ಲ್ಡ್ ಕಪ್ ಗಾಗಿ ತಮ್ಮ ಮಾರ್ಗದರ್ಶನವನ್ನು ನೀಡಲಿಕ್ಕೆ ಯಾವುದೇ ರೀತಿಯ ಹಣವನ್ನು ತೆಗೆದುಕೊಂಡಿಲ್ಲ ಎಂದು ಜಯ್ ಶಹಾ ಅವರು ಹೇಳಿದ್ದಾರೆ. ಭಾರತ 2007 ರಲ್ಲಿ ನಡೆದ ಮೊದಲ ಟಿ-ಟ್ವೆಂಟಿ ಸ್ಪರ್ಧೆಯನ್ನು ಮಾಹಿ ಅವರ ನೇತೃತ್ವದಲ್ಲಿಯೇ ಗೆದ್ದು ಬೀಗಿತ್ತು. ಅದಾದ ನಂತರ 2011 ರಲ್ಲಿ ಇವರದೇ ನೇತೃತ್ವದಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯನ್ನು ಸಹಿತ ಗೆದ್ದಿತ್ತು. ಆಮೇಲೆ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಸಹಿತ ತನ್ನ ಮುಡಿಗೇರಿಸಿತ್ತು. ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಅವರ ಕೊನೆಯ ಸ್ಪರ್ಧೆ ಇದಾಗಿದೆ. ಅವರು ಐಪಿಎಲ್ ನಲ್ಲಿಂದ ಆರ್ಸಿಬಿ ತಂಡದ ನಾಯಕತ್ವವನ್ನು ಸಹ ಇದೀಗ ಬಿಟ್ಟಿದ್ದಾರೆ.