Video: ತಲೆ ಮೇಲೆ ಹಾರಾಡುತ್ತಿರುವ ಬೆಲೆಬಾಳುವ ಡ್ರೋನ್ ಕ್ಯಾಮೆರಾಗೆ ಹಠಾತ್ ಹಿಡಿದು ನೀರು ಕುಡಿಸಿದ ಆಕ್ಟಿವ್ ಮರಿ ಮೊಸಳೆ…

ಸೋಶಿಯಲ್ ಮೀಡಿಯಾ ಜಗತ್ತು ನಿಜಕ್ಕೂ ಅದ್ಭುತವಾಗಿದೆ. ಇದು ಎಲ್ಲ ವಯಸ್ಸಿನವರಿಗೆ ಅವರವರ ಇಷ್ಟದ ಪ್ರಕಾರ ಕಂಟೆಂಟ್ ತಂದು ಕೊಡುತ್ತದೆ ಅಥವಾ ತೋರಿಸುತ್ತದೆ. ಸೋಶಿಯಲ್ ಮೀಡಿಯಾ ಎಂದರೆ ಸಖತ್ ಮಸಾಲೆಯ ರುಚಿಕಟ್ಟಾದ ಅಡುಗೆ ಇದ್ದ ಹಾಗೆ. ಇಲ್ಲಿ ಸರ್ಚ್ ಮಾಡಲು ಬಂದವನಿಗೆ ಆತನ ಇಷ್ಟವಾದ ಕಜ್ಜಾಯ ಏನಾದರೂ ಸಿಕ್ಕೆ ಸಿಗುತ್ತದೆ. ಬರಿಗೈಯಿಂದ ವಾಪಸ್ ಹೊಗುವದೇ ಇಲ್ಲ.

ಪ್ರತಿಯೊಬ್ಬರಿಗೂ ಆಕರ್ಷಿಸುವ ಅಷ್ಟೊಂದು ಸೂಪರ್ ಕಂಟೆಂಟ್ ಅಥವಾ ಕಜ್ಜಾಯ ತುಂಬಿದ ಹೋಟಲ್ ಈ ಸಾಮಾಜಿಕ ಜಾಲತಾಣವಾಗಿದೆ ಎನ್ನಬಹುದು. ಸದ್ಯ ಇಲ್ಲಿ ನಿಮಗಾಗಿ ಒಂದು ಚಾಣಾಕ್ಷ ಮೊಸಳೆಯ ಸೂಪರ್ ದೃಶ್ಯ ಒಂದನ್ನು ತಂದಿದ್ದೇವೆ ನೋಡಿ.

ಪ್ರಸ್ತುತ ಈ ವಿಡಿಯೋದಲ್ಲಿ ಎಲ್ಲಿ ನೋಡಿದಲ್ಲಿ ನೀರೆ ನೀರು ಕಂಡು ಬರುತ್ತಿದೆ. ಒಟ್ಟಿನಲ್ಲಿ ಸಮುದ್ರದ ಹಾಗೆ ನೀರು ವ್ಯಾಪಿಸಿದಂತೆ ಕಣ್ಣಿಗೆ ಕಂಡು ಬರುತ್ತಿದೆ. ಈ ನೀರಿನಲ್ಲಿ ಮೊಸಳೆಯ ಪುಟ್ಟ ಮರಿಯೊಂದು ತೆಲಾಡಿ ಆಡುತ್ತಿದೆ. ಇದೇ ಸಂದರ್ಭದಲ್ಲಿ ಕ್ಯಾಮೆರಾ ಹವ್ಯಾಸಿಗಳು ನೇರ ಅದರ ತಲೆಯ ಮೇಲೆಯೇ ಒಂದು ಡ್ರೋನ್ ಕ್ಯಾಮೆರಾವನ್ನು ಬಿಟ್ಟು ಅದರ ಜೊತೆಗೆ ಮೋಜು ಮಾಡುತ್ತಿದ್ದಾರೆ. ಆದರೆ ಈ ಮೋಜಿನಾಟ ಅವರಿಗೆ ತುಂಬಾ ದುಬಾರಿ ಬೀಳಲಿದೆ ಎಂಬುದು ನಂತರ ಅವರಿಗೆ ಗೊತ್ತಾಯ್ತು.

ನಿರ್ದಿಷ್ಟವಾಗಿ ಅಲ್ಲಿ ನಡೆದದ್ದೇನೆಂದರೆ, ನೀರಿನಲ್ಲಿ ಆಡುತ್ತಿರುವ ಮೊಸಳೆಯ ಮೇಲೆ ಡ್ರೋನ್ ಕ್ಯಾಮೆರಾವನ್ನು ತಿರುಗಿಸುತ್ತಿದ್ದಾರೆ. ಅದನ್ನು ಮೊಸಳೆಯು ಮೇಲಿಂದ ಮೇಲೆ ನೋಡಿ ಇದು ಏನಾದರೂ ತಿನ್ನುವ ಆಹಾರವಿರಬಹುದು ಎಂದು ಯೋಚಿಸಿ ಸರಿಯಾಗಿ ಹೊಂಚು ಹಾಕಿ ಆದರ ಹಿಂದೆಯೇ ಬಿದ್ದಿದೆ. ನಂತರ ಮೊಸಳೆ ಕೆಲವೇ ಕ್ಷಣಗಳಲ್ಲಿ ಒಮ್ಮೆಲೆ ಪುಟಿದು ಹಠಾತ್ತನೆ ಡ್ರೋನ್ ಕ್ಯಾಮೆರಾವನ್ನೇ ಬಾಯಲ್ಲಿ ಹಿಡಿದು ಅದಕ್ಕೆ ನೀರು ಕುಡಿಸಿ ಬಿಟ್ಟಿದೆ.

ನೋಡಿ ಈ ವಿಶೇಷ ವಿಡಿಯೋ…

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ “ರಹಸ್ಯ ಆಂಡ್ ನೇಚರ್” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋ 19.1 ಮಿಲಿಯನ್ ಜನರು ವೀಕ್ಷಿಸಿದ್ದು ಸುಮಾರು 7 ಲಕ್ಷ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಅದರಲ್ಲಿ ಒಬ್ಬನು “ಇದೇ ಕೊನೆಯ ವಿಡಿಯೋ” ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ “ಒ, ಒಳ್ಳೆಯದಾಯಿತು ಮೊಸಳೆಯ ಹೊಟ್ಟೆಯಲ್ಲಿಯ ದೃಶ್ಯ ನೋಡಲು ಸಿಗುತ್ತದೆ” ಎಂದಿದ್ದಾನೆ.