Tata Nexon ಗೆ ಟಕ್ಕರ್ ಕೊಡಲು ಮಾರುಕಟ್ಟೆಗೆ ಬರುತ್ತಿದೆ ಮಹಿಂದ್ರ ಎಲೆಕ್ಟ್ರಿಕ್ ಕಾರು; 375 ಕೀಮೀ ರೇಂಜ್
ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಹಾಗೂ ಡೀಸಲ್ ಬೆಲೆಗಳು ಮಾತ್ರವೇ ಅಲ್ಲದೆ ಮನೆಯ ಅವಶ್ಯಕತೆಗೆ ಅನಿವಾರ್ಯ ಎನಿಸಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಯೂ ಕೂಡ ಗಗನಕ್ಕೇರುತ್ತಿದ್ದು ಸಾಮಾನ್ಯ ಜನರು ಮುಂದಿನ ದಿನಗಳ ಬಗ್ಗೆ ಪರಿಸ್ಥಿತಿಯು ಚಿಂತಾಕ್ರಾಂತರಾಗುವಂತೆ ಮಾಡಿದೆ. ಇಂಧನ ಬೆಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗಳ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಸಹಜವಾಗಿಯೇ ಎಲ್ಲರ ಗಮನವೂ ಹರಿಯುತ್ತಿದೆ. ಆದರೆ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕುರಿತಾಗಿ ಇನ್ನೂ ಕೂಡಾ ಸಾಕಷ್ಟು ಜಾಗೃತಿ ಹಾಗೂ ಅವಗಾಹನೆಯನ್ನು ಮೂಡಿಸಬೇಕಾದ ಅಗತ್ಯವಿದೆ. ಏಕೆಂದರೆ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕುರಿತಾಗಿ ಜನಗಳಿಗೆ ಅಷ್ಟಾಗಿ ತಿಳಿದಿಲ್ಲ ಹಾಗೂ ಅವುಗಳ ವಿಚಾರವಾಗಿ ಸ್ಪಷ್ಟವಾದ ಮಾಹಿತಿಗಳು ಕೂಡಾ ಇಲ್ಲ ಎನ್ನುವುದು ವಾಸ್ತವ.
ಆದರೆ ವಿದೇಶಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಸಾಕಷ್ಟು ಮಂಚೂಣಿಯಲ್ಲಿದೆ. ಅಲ್ಲಿ ಅದಕ್ಕೆ ಬೇಕಾಗಿರುವಂತಹ ಸೌಲಭ್ಯಗಳನ್ನು ಕೂಡಾ ಒದಗಿಸಲಾಗಿದೆ. ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ದರ ಕೂಡ ಸ್ವಲ್ಪ ದುಬಾರಿಯಾಗಿರುವುದು ಮಾತ್ರವಲ್ಲದೇ, ದೂರ ಪ್ರಯಾಣಗಳಿಗೆ ಈ ವಾಹನಗಳು ಸೂಕ್ತವಲ್ಲ ಎನ್ನುವ ಅಭಿಪ್ರಾಯ ಕೂಡ ದೊಡ್ಡ ಮಟ್ಟದಲ್ಲಿ ಇದೆ. ಆದರೆ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಭಾರತದ ಕಾರು ಉತ್ಪಾದಕ ಸಂಸ್ಥೆಗಳು ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಆರಂಭಿಸಿದೆ. ಅದರಲ್ಲಿ ಟಾಟಾ ಮತ್ತು ಮಹಿಂದ್ರ ಕಂಪನಿಗಳು ಕೂಡಾ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಚಾರದಲ್ಲಿ ಈ ಎರಡೂ ದಿಗ್ಗಜ ಕಂಪನಿಗಳು ಸ್ಪರ್ಧೆಗೆ ಇಳಿಯುವಂತಹ ಬೆಳವಣಿಗೆಗಳು ಕಂಡುಬರುತ್ತಿದೆ.

ಮಹೀಂದ್ರ ಎಲೆಕ್ಟ್ರಿಕಲ್, ಆಟೋ ಎಕ್ಸ್ ಪೋ- 2020 ಯಲ್ಲಿ ತನ್ನ ಇಎಕ್ಸ್ಯುವಿ 300 ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಪರಿಚಯ ಮಾಡಿದೆ. ಭಾರತದಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಕಂಪನಿಯ ಈ ವರ್ಷದ ಅಂತ್ಯದ ವೇಳೆಗೆ ತನ್ನ ಈ ಹೊಸ ಕಾರಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಬಹುದು ಎನ್ನಲಾಗುತ್ತಿದೆ. ಈ ಕಾರಿನ ಲಾಂಚ್ ಗೂ ಮುನ್ನವೇ ಇದರ ಕುರಿತಾದ ಕೆಲವು ಆಸಕ್ತಿಕರ ಮಾಹಿತಿಗಳು ಹೊರಬಂದಿದೆ. ಈ ಹೊಸ ಕಾರಿನ ಬಗ್ಗೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಇದು 375 ಕಿಲೋಮೀಟರ್ ಗಳ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೇ ಕಂಪನಿಯು ಎರಡು ವಿಭಿನ್ನ ಮಾದರಿಗಳಲ್ಲಿ ಈ ಕಾರನ್ನು ಮಾರುಕಟ್ಟೆಗೆ ತರಲು ಸಿದ್ಧತೆಯನ್ನು ನಡೆಸುತ್ತಿದೆ ಎನ್ನಲಾಗಿದೆ.
ಇವುಗಳಲ್ಲಿ ಸ್ಟ್ಯಾಂಡರ್ಡ್ ವೇರಿಯಂಟ್ ರೇಂಜ್ ಇನ್ನೂರು ಕಿಲೋಮೀಟರುಗಳಷ್ಟು ಇರಲಿದೆ ಎನ್ನಲಾಗಿದೆ. ಈ ಕಾರನ್ನು ಲಾಂಚ್ ಮಾಡುವ ಬಗ್ಗೆ ಸ್ಪಷ್ಟವಾದ ದಿನಾಂಕವನ್ನು ಕಂಪನಿಯು ಇನ್ನೂ ನಿರ್ಧಾರವಾಗಲೀ ಅಥವಾ ಘೋಷಣೆಯನ್ನಾಗಲೀ ಮಾಡಿಲ್ಲ. ಆದರೆ ವರದಿಗಳ ಪ್ರಕಾರ ಕಂಪನಿಯು ತನ್ನ ಈ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಈ ವರ್ಷದ ಅಂದರೆ 2021 ಯ ಕೊನೆಯ ವೇಳೆಗೆ ಅಥವಾ ಬರುವ ವರ್ಷದ ಅಂದರೆ 2022 ಆರಂಭದಲ್ಲಿ ಖಚಿತವಾಗಿ ಲಾಂಚ್ ಮಾಡಲು ತನ್ನ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಅಲ್ಲದೇ ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಹಿಂದೆ ಒಂದು ನಿರ್ಧಿಷ್ಟ ಕಾರಣವನ್ನು ಕೂಡಾ ಮಹೀಂದ್ರಾ ಎಲೆಕ್ಟ್ರಿಕ್ ಹೊಂದಿದೆ ಎನ್ನಬಹುದಾಗಿದೆ.
ಹೌದು ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಮೂಲಕ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಕೂಡಾ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಮಹಿಂದ್ರ ಕಂಪನಿಯ ಈ ಹೊಸ ಕಾರು ಟಾಟಾ ಕಂಪನಿಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ನೊಂದಿಗೆ ನೇರ ಸ್ಪರ್ಧೆಗೆ ಇಳಿಯಲಿದೆ ಎನ್ನಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಬಹಳ ಸಫಲ ಹಾಗೂ ಜನಪ್ರಿಯತೆಯನ್ನು ಪಡೆದಿರುವ ಕಾರ್ ಎನಿಸಿಕೊಂಡಿದೆ. ಅದು ಈಗ ಮಹೀಂದ್ರಾ ಇಎಕ್ಸ್ಯುವಿ 300 ನೊಂದಿಗೆ ನೇರ ಸ್ಪರ್ಧೆಯನ್ನು ಎದುರುಗೊಳಲ್ಲಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸುಮಾರು 312 ಕಿಲೋಮೀಟರ್ ಗಳ ರೇಂಜ್ ಅನ್ನು ಆಫರ್ ಮಾಡುತ್ತದೆ.