TATA Tiago ಕಾರು ಅಪಘಾತಕ್ಕೆ ಈಡಾದ ನಂತರ, ತನ್ನ ಪ್ರಾಣ ಉಳಿದಿದ್ದಕ್ಕೆ ಧನ್ಯವಾದ ಹೇಳಿ ಅದೇ ಬಣ್ಣದ ಮತ್ತೊಂದು Tiago ಕಾರ್ ಖರೀದಿ ಮಾಡಿದ owner!
ಗ್ಲೋಬಲ್ ಟೈಪ್ಸ್ ಒದಗಿಸಿರುವ ಸುರಕ್ಷತಾ ರೇಟಿಂಗ್ ನ ಪ್ರಕಾರ ಟಾಟಾ ಟಿಯಾಗೋ ಕಾರುಗಳು ಸುರಕ್ಷತೆಯ ದೃಷ್ಟಿಯಲ್ಲಿ ಅತ್ಯುತ್ತಮವಾದದ್ದು ಎನ್ನಲಾಗಿದೆ. ಅಲ್ಲದೇ ಈ ಕಾರುಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾದ ಸ್ಟಾರ್ ರೇಟಿಂಗ್ ಕೂಡಾ ದಕ್ಕಿದೆ. ಟಾಟಾ ಕಾರಿನ ನಿರ್ಮಾಣದ ಗುಣಮಟ್ಟದ ಕುರಿತಾಗಿ ಕಾರಿನ ಮಾಲೀಕರು ಹಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಕಾರಿನ ಗುಣಮಟ್ಟದ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಈಗ ಇಲ್ಲಿ ಒಂದು ಟಾಟಾ ಟಿಯಾಗೋ ಕಾರಿನ ಮಾಲೀಕರು ಹಾಕಿರುವ ಒಂದು ಪೋಸ್ಟ್ ನ ಕುರಿತಾದ ವಿಚಾರವನ್ನು ತಿಳಿಯೋಣ ಬನ್ನಿ. ಸತ್ಯಪ್ರಕಾಶ್ ರೆಡ್ಡಿ ಎನ್ನುವವರು ಟಾಟಾ ಟಿಯಾಗೋ ಕಾರುಗಳ ಮಾಲೀಕರ ಗುಂಪಿನಲ್ಲಿ ತನ್ನ ಅನುಭವದ ಕಥೆಯನ್ನು ಹಂಚಿಕೊಂಡಿದ್ದಾರೆ. ಸತ್ಯಪ್ರಕಾಶ್ ರೆಡ್ಡಿ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಹೊಸ ಟಾಟಾ ಟಿಯಾಗೋ ಕಾರನ್ನು ಖರೀದಿ ಮಾಡಿದ್ದರು. ಹೊಸ ಕಾರು ಖರೀದಿ ಅವರಿಗೆ ಖುಷಿಯನ್ನು ನೀಡಿತ್ತು.
ಕಾರನ್ನು ಖರೀದಿ ಮಾಡಿದ ಕೆಲವು ದಿನಗಳ ನಂತರ ಅವರು ತಮ್ಮ ಸ್ನೇಹಿತರ ಜೊತೆಗೆ ಅಹಮದಾಬಾದ್ ನಿಂದ ಹೈದರಾಬಾದ್ ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆಯಲ್ಲಿ ತನ್ನ ದೃಷ್ಟಿಯನ್ನು ರಸ್ತೆಯ ಕಡೆಗೆ ಹೆಚ್ಚು ಕೇಂದ್ರಿಕರಿಸದೆ ಕಾರನ್ನು ಚಾಲನೆ ಮಾಡುತ್ತಿದ್ದದ್ದು ತನ್ನ ತಪ್ಪು ಎಂದು ಕೂಡ ಅವರು ಹೇಳುತ್ತಾ, ಹಾಗೆ ಕಾರನ್ನು ಚಲಾಯಿಸುವಾಗ ರಸ್ತೆಯಲ್ಲಿ ಒಂದು ದೊಡ್ಡ ಹಳ್ಳ ಕಾಣಿಸಿತ್ತು, ಆಗ ಸಂಭವಿಸಲಿರುವ ಅಪಾಯವನ್ನು ತಪ್ಪಿಸಲು ಸ್ಟಿಯರಿಂಗ್ ಅನ್ನು ವೇಗವಾಗಿ ಪಕ್ಕಕ್ಕೆ ತಿರುಗಿಸಿದ್ದು, ವಾಹನ ಆಗ ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದ ಕಾರಣ ಕಾರು ಚಾಲಕನ ನಿಯಂತ್ರಣವನ್ನು ಕಳೆದುಕೊಂಡಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯಿಂದ ಬಹಳ ದೂರ ಸಾಗಿ ಹೋಗಿದೆ. ವಾಹನದ ವೇಗ ವಿಪರೀತವಾಗಿದ್ದು ಕಾರಣ ಕಾರು 4 ರೋಲ್ ಓವರ್ ಗಳನ್ನು ಮಾಡಿದೆ. ಕಾರಿನ ಮಾಲೀಕರು ಕಾರಿನ ಫೋಟೋಗಳನ್ನು ಹಂಚಿಕೊಂಡಿದ್ದು, ಅದನ್ನು ನೋಡಿದಾಗಲೇ ಅಂದು ಯಾವ ಮಟ್ಟದಲ್ಲಿ ಅ ಪ ಘಾ ತ ವು ಸಂಭವಿಸುತ್ತು ಎನ್ನುವುದು ಗೊತ್ತಾಗುತ್ತದೆ. ಕಾರು ಚಾಲಕನಿದ್ದ ಬದಿಯಲ್ಲಿ ಸಂಪೂರ್ಣವಾಗಿ ಹಾಳಾಗಿದ್ದು ಮಾತ್ರವಲ್ಲದೆ, ರೋಲ್ ಓವರ್ ಗಳ ಕಾರಣದಿಂದ ಕಾರಿನ ಛಾವಣಿ ನಜ್ಜುಗುಜ್ಜಾಗಿದೆ. ಕಾರಿನ ಅಪಘಾತ ವಿಷಯ ತಿಳಿದ ಕೂಡಲೇ ಸ್ಥಳೀಯ ಜನರು ಅವರ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ಅವರಿಗೆ ಪ್ರಜ್ಞೆ ಇರಲಿಲ್ಲ ಎನ್ನಲಾಗಿದ್ದು, ಅವರ ಕೈ ಕಾರಿನ ಬಾಗಿಲು ಮತ್ತು ಛಾವಣಿಯ ನಡುವೆ ಸಿಲುಕಿಕೊಂಡಿದ್ದು ಎನ್ನಲಾಗಿದೆ. ಅಲ್ಲದೇ ಗಾಯ ಕೂಡ ಆಗಿತ್ತು ಎನ್ನಲಾಗಿದ್ದು, ಆದರೆ ಅದೃಷ್ಟ ಹಾಗೂ ಕಾರಿನ ವಿಶಿಷ್ಟ ಸುರಕ್ಷತೆಯ ವೈಶಿಷ್ಟ್ಯಗಳಿಂದಾಗಿ ಅವರ ಸ್ನೇಹಿತರಿಗೆ ಮಾತ್ರ ಒಂದಷ್ಟು ತರಚಿದ ಗಾಯಗಳು ಬಿಟ್ಟರೆ ಯಾವುದೇ ರೀತಿಯ ಅ ಪಾ ಯ ಕಾರಿ ಪೆಟ್ಟುಗಳು ಆಗಿರಲಿಲ್ಲ.
ಕಾರಿನ ಮಾಲೀಕರಾದ ಸತ್ಯ ಪ್ರಕಾಶ್ ರೆಡ್ಡಿಯವರು ಅ ಪ ಘಾತದ ನಂತರ ಗುಣಮುಖರಾದ ಮೇಲೆ ಮೊದಲು ಮಾಡಿದ ಕೆಲಸ ಏನೆಂದರೆ ಅವರು ಮತ್ತೊಂದು ಟಾಟಾ ಟಿಯಾಗೋ ಕಾರನ್ನು ಖರೀದಿಸಲು ಹೋಗಿದ್ದು. ಅವರು ಮಾತನಾಡುತ್ತಾ ಬೇರೆ ಯಾವುದಾದರೂ ಕಾರ್ ಆಗಿದ್ದರೆ ಅ ಪ ಘಾ ತ ದಲ್ಲಿ ಖಂಡಿತ ಪ್ರಾಣದ ಹೋಗಿರುತ್ತಿತ್ತು. ಆದರೆ ಟಾಟಾ ಟಿಯಾಗೋ ಬಹಳ ಸುರಕ್ಷಿತ ಎಂದು ನನಗೆ ತಿಳಿಯಿತು ಎನ್ನುತ್ತಾರೆ. ಅವರು ನವೆಂಬರ್ 17, 2020 ರಂದು ಮತ್ತೊಂದು ಹೊಸ ಟಾಟಾ ಟಿಯಾಗೋ ಕಾರನ್ನು ಖರೀದಿ ಮಾಡಿದ್ದಾರೆ.
ಎನ್ ಸಿ ಎ ಪಿ ಪ್ರಕಾರ ಭಾರತದಲ್ಲಿ ಟಾಟಾ ಟಿಯಾಗೋ ನಂತರ ಟಾಟಾ ಆಲ್ಟ್ರೊಜ್ ಸುರಕ್ಷತೆಯ ದೃಷ್ಟಿಯಲ್ಲಿ ಅತ್ಯುತ್ತಮವಾದ ಕಾರು ಎನಿಸಿಕೊಂಡಿದೆ.

ಇದು ನಾಲ್ಕು-ಸ್ಟಾರ್ ರೇಟೆಡ್ ಕಾರು ಮತ್ತು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇತರ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಹಿಂದೆಯೂ ಅನೇಕ ಟಾಟಾ ಕಾರುಗಳ ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬೇರೆ ಬೇರೆ ವೇದಿಕೆಗಳಲ್ಲಿ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಮಾಲೀಕರು ತಮ್ಮ ಜೀವವನ್ನು ಉಳಿಸಿದ ವಾಹನದ ನಿರ್ಮಾಣದ ಗುಣಮಟ್ಟಕ್ಕೆ ಕೃತಜ್ಞತೆ ಅರ್ಪಿಸಿರುವುದು ಸಹಾ ವಿಶೇಷವಾಗಿದೆ. ಭಾರತ ಸರ್ಕಾರವು ಕಾರು ನಿರ್ಮಾಣ ಕಂಪನಿಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಕಾರುಗಳು ನಿರ್ಮಾಪಕರು ರಸ್ತೆಯಲ್ಲಿ ನಡೆದುಕೊಂಡು ಓಡಾಡುವ ಜನರ ಸುರಕ್ಷತೆಯ ಬಗ್ಗೆ ಕೂಡಾ ಗಮನಿಸಬೇಕು ಎನ್ನುವ ನಿರ್ದೇಶನವನ್ನು ನೀಡಿದೆ.