ಕಾನೂನು ಮಾಹಿತಿ: ತಾಯಿಯ ತವರು ಮನೆಯ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಇದೆಯಾ?
ಒಬ್ಬ ಸ್ತ್ರೀಯ ತನ್ನ ತಂದೆಯ ಆಸ್ತಿಯ ಭಾಗದಿಂದ ಪಡೆದುಕೊಳ್ಳುವ ಆಸ್ತಿ ಅಥವಾ ತಂದೆಯು ಮಗಳಿಗೆ ದಾನ ಕೊಟ್ಟ ಆಸ್ತಿ ಅಥವಾ ಭಕ್ಸೀಸ್ ಯಿಂದ ಪಡೆದುಕೊಂಡ ಆಸ್ತಿಯನ್ನು ಸ್ತ್ರೀ ಧನ ಆಸ್ತಿ ಎನ್ನುತ್ತಾರೆ. ಮದುವೆಯಾಗಿ ಹೋದ ಒಬ್ಬ ಸ್ತ್ರೀ ಯು ತನ್ನ ತಂದೆಯ ಮನೆಯಿಂದ ಉಡುಗೊರೆ ಆಗಿ ತರುವ ಯಾವುದೇ ಆಸ್ತಿಯನ್ನು ಸ್ತ್ರೀ ಧನ ಆಸ್ತಿ ಎಂದು ಕರೆಯುತ್ತಾರೆ. ಈ ರೀತಿ ಸ್ತ್ರೀಯು ತನ್ನ ತಂದೆಯಿಂದ ಪಡೆದುಕೊಂಡ ಆಸ್ತಿಯು ಅವಳ ಆಸ್ತಿ ಆಗುತ್ತದೆ. ಆ ಆಸ್ತಿಗೆ ಅವರೇ ಮಾಲೀಕರಾಗಿರುತ್ತಾರೆ. ಅದರ ಸುಪ್ರೀಂ ಪವರ್ ಅವರೇ ಹೊಂದಿರುತ್ತಾರೆ. ತನ್ನ ಜೀವಿತಾವಧಿಯಲ್ಲಿ ಆ ಆಸ್ತಿಯನ್ನು ಅನುಭವಿಸಲು ಅವರು ಹಕ್ಕು ಹೊಂದಿರುತ್ತಾರೆ. ಇದರ ಜೊತೆಗೆ ಇನ್ನು ಕೆಲವು ಹಕ್ಕುಗಳನ್ನು ಅವರು ಹೊಂದಿರುತ್ತಾರೆ.
ಅದೇನೆಂದರೆ ಸದರಿ ಆಸ್ತಿಯನ್ನು ಆಕೆ ತನಗೆ ಇಷ್ಟ ಬಂದವರಿಗೆ ದಾನವಾಗಿ ಅಥವಾ ಮಾರಾಟದ ಮೂಲಕ ಅಥವಾ ಬಕ್ಸೀಸ್ ಮೂಲಕ ಯಾರಿಗೆ ಬೇಕಾದರೂ ಕೊಡಬಹುದು. ಅದನ್ನು ಮಾರುವ ಅಧಿಕಾರ ಅವರ ಗಂಡನಿಗೆ ಆಗಲಿ, ಹೆಣ್ಣು ಮಕ್ಕಳಿಗಾಗಿ, ಗಂಡು ಮಕ್ಕಳಿಗಾಗಲಿ ಸೊಸೆಗಾಗಿ ಅಥವಾ ಮೊಮ್ಮಕ್ಕಳಿಗಾಗಲೇ ಕಾನೂನಿನ ಅಡಿಯಲ್ಲಿ ಇರುವುದಿಲ್ಲ. ಒಂದು ವೇಳೆ ಆ ಸ್ತ್ರೀ ಸದರಿ ಆಸ್ತಿಯನ್ನು ಯಾರಿಗೂ ದಾನವಾಗಿ ಕೊಡದೆ ಮಾರಾಟ ಮಾಡದೆ ಬಕ್ಷೀಸು ಮೂಲಕವೂ ಕೊಡದೆ ಮೃತ ಹೊಂದಿದ್ದಲ್ಲಿ ಅವಳ ನಂತರದ ಅವರ ನೇರ ವಾರಸ್ದಾರರರಾದ ಇತರರು ಅವರ ಮರಣ ಉದಾರೆಯನ್ನು ತೆಗೆಸಿಕೊಳ್ಳುವ ಮೂಲಕ ಹಕ್ಕು ಪಡೆದುಕೊಳ್ಳಬಹುದು. ಆ ಉದಾರೆಯಲ್ಲಿ ಆಕೆಯ ಪತಿ, ಹೆಣ್ಣು ಮಕ್ಕಳು ,ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಸಹ ಸಮಾನ ಭಾಗವನ್ನು ಪಡೆಯಬಹುದಾಗಿದೆ,ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎನ್ನುವುದನ್ನು ತಿಳಿಸುತ್ತದೆ ಕಾನೂನು.
ಈ ರೀತಿ ತಂದೆಯಿಂದ ಸ್ತ್ರೀ ಧನ ಆಸ್ತಿಯನ್ನು ಹೊಂದಿರುವ ಮಹಿಳೆಗೆ ಸೊಸೆ ಇದ್ದಾಗ ಆ ಸೊಸೆಯು ಅತ್ತೆಯನ್ನು ಅವರ ಜೀವಿತಾವಧಿಯಲ್ಲಿ ಚೆನ್ನಾಗಿ ನೋಡಿಕೊಂಡರೆ ಅತ್ತೆಯು ತನ್ನ ತವರು ಮನೆಯಿಂದ ತಂದಿರುವ ಉಡುಗೊರೆ ಆದ ಆಸ್ತಿಯನ್ನು ಪ್ರೀತಿ ಹಾಗೂ ಸಹಾನುಭೂತಿಯಿಂದ ಸೊಸೆಯು ಹೊಂದಬಹುದಾಗಿದೆ. ಒಂದು ವೇಳೆ ಇದಕ್ಕೆ ವಿರುದ್ಧವಾಗಿ ಈ ರೀತಿ ಸ್ತ್ರೀ ಧನ ಅಸ್ತಿ ಹೊಂದಿರುವ ತವರು ಮನೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ತಂದಿರುವ ಅತ್ತೆಯ ಆಸ್ತಿಯನ್ನು ಸೊಸೆಯು ಕಬಳಿಸುವ ಯತ್ನ ಮಾಡಿದ್ದಲ್ಲಿ ಅಥವಾ ಆಕೆಗೆ ತೊಂದರೆ ಕೊಟ್ಟಿದ್ದಲ್ಲಿ, ಆಕೆಯ ಜೀವಿತಾವಧಿಯಲ್ಲಿ ಆರೈಕೆ ಮಾಡದೆ ಹೋದಲ್ಲಿ ಆಸ್ತಿ ಸೊಸೆ ಕೈ ತಪ್ಪಿ ಹೋಗುತ್ತದೆ. ಈ ಎಲ್ಲ ವಿಷಯಗಳನ್ನು ಮನದಲ್ಲಿ ಇಟ್ಟುಕೊಂಡು ಅದಕ್ಕಿಂತ ಹೆಚ್ಚಾಗಿ ಹಿರಿಯ ಜೀವಿಗಳನ್ನು ಆರೈಕೆ ಮಾಡುವುದು ಕರ್ತವ್ಯ ಎಂದು ಭಾವಿಸಿ ಸೊಸೆಯಂದಿರು ಅತ್ತಿಗೆಯನ್ನು ಜೋಪಾನ ಮಾಡಬೇಕಾಗಿದೆ.
ಇದಿಷ್ಟು ಸ್ತ್ರೀ ಧನ ಆಸ್ತಿಯ ಕುರಿತು ಇರುವ ಮಾಹಿತಿ ಆಗಿದ್ದು, ಇನ್ನು ಹೆಚ್ಚಿನ ಜನರಿಗೆ ಇಷ್ಟೇ ಈ ಆಸ್ತಿಯ ಕುರಿತು ಮಾಹಿತಿ ತಿಳಿದಿಲ್ಲ ಅವರಿಗೆ ಈ ವಿಷಯವನ್ನು ಹಂಚುವ ಮೂಲಕ ತಿಳಿಸಿ ಮತ್ತು ಈ ಸ್ತ್ರೀ ಧನ ಆಸ್ತಿಯ ಹಂಚಿಕೆ ಬಗ್ಗೆ ಅಥವಾ ಹಕ್ಕುಗಳ ಬಗ್ಗೆ ಇನ್ನೂ ಹೆಚ್ಚಿನ ಅನುಮಾನಗಳು ಇದ್ದಲ್ಲಿ ಈ ಕೆಳಗಿನ ವಿಡಿಯೋ ಪೂರ್ತಿ ನೋಡಿ ನಿಮಗೆ ಇರುವ ಎಲ್ಲಾ ಅನುಮಾನಗಳನ್ನು ಬಗೆಹರಿಸಿಕೊಳ್ಳಿ. ಈ ಅಗತ್ಯ ಮಾಹಿತಿ ಇನ್ನು ಹೆಚ್ಚು ಜನಕ್ಕೆ ಸಹಾಯಕವಾಗಲು ಶೇರ್ ಮಾಡಿ.