ಚಹಾ ಮಾಡುವ ದೇಶಿ ಜುಗಾಡ್, ತನ್ನಿಂದ ತಾನೇ ಸ್ಪೆಷಲ್ ಚಹಾ ರೆಡಿ ಮಾಡೋದು ಹೇಗೆ? ವಿಡಿಯೋ ನೋಡಿ!!!

ದೇಸಿ ಜುಗಾಡ್ ಅಥವಾ ಐಡಿಯಾಗಳನ್ನು ನಿರೂಪಿಸುವುದರಲ್ಲಿ ಜಗತ್ತಿನಲ್ಲಿಯೇ ಭಾರತದ ಕೈ ಯಾರು ಹಿಡಿಯಲು ಸಾಧ್ಯವಿಲ್ಲ. ಭಾರತೀಯರು ತಮ್ಮ ವಿದ್ಯಾಭ್ಯಾಸದಲ್ಲಂತೂ ಹೆಸರು ಮಾಡಿ ಜಗತ್ತಿನ ಅನೇಕ ಮಹತ್ವದ ಪದವಿಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ. ಜೊತೆಗೆ ‘ಕಸದಿಂದ ರಸ’ ತೆಗೆಯುವ ವಿವಿಧ ಐಡಿಯಾಗಳಲ್ಲಿಯೂ ಭಾರತದ ಜನ ತುಂಬಾ ಮುಂದೆ ಇದ್ದಾರೆ ಎಂದರೆ ತಪ್ಪಲ್ಲ.

ಭಾರತದಲ್ಲಿ ಏನೆಲ್ಲಾ ಜುಗಾಡ್ ಮಾಡುತ್ತಾರೆ ಅಂತ ಹೇಳೋಕೆ ಆಗಲ್ಲ ಏಕೆಂದರೆ ನಮ್ಮ ದೇಶಾದ್ಯಂತ ಜನರು ತಮಗೆ ಬೇಕಾದ ಕಾರ್ಯ ಸುಲಭ ಮಾಡಿಕೊಳ್ಳುವ ಸಲುವಾಗಿ ವಿಚಿತ್ರವಾದ ಜುಗಾಡ್ ಮಾಡಲು ಮುಂದಾಗುತ್ತಾರೆ. ಸದ್ಯಕ್ಕೆ ಒಂದು ವಿಚಿತ್ರವಾದ ಜುಗಾಡ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ಜುಗಾಡ್ ನೋಡಿ ನೆಟ್ಟಿಗರು ಸಹ ಆಶ್ಚರ್ಯ ಪಡುತ್ತಿದ್ದಾರೆ ಏಕೆಂದರೆ ಆ ಕಾರ್ಯವನ್ನು ಇಷ್ಟು ಸರಳವಾಗಿ ಮಾಡಲು ನಮಗೆ ಗೊತ್ತೇ ಇರಲಿಲ್ಲ
ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ನಮಗೆಲ್ಲ ಇಷ್ಟವಾದ ಪೇಯ ಎಂದರೆ ಅದು ಚಹಾ ಮಾತ್ರ ದೇಶದ ಸುಮಾರು 90 ಪ್ರತಿಶತ ಜನರು ಚಹಾ ಕುಡಿಯುತ್ತಾರೆ. ಒಬ್ಬೊಬ್ಬರಿಗಂತು ಚಹಾ ಇರದೇ ದಿನವೇ ಕಳೆಯುವದಿಲ್ಲ. ಎಷ್ಟೇ ಕಷ್ಟ ಬಂದರೂ ಸಹ ಚಹಾ ಕುಡಿಯದೆ ಇರಲಾರರು. ಚಹಾ ಮಾಡುವದೊಂದು ಕಲೆ ಇದೆ ಹೀಗಾಗಿ ಯಾರು ಚೆನ್ನಾಗಿ ಚಹಾ ಮಾಡುತ್ತಾರೆಯೋ ಅಂಥ ಚಹಾ ಕ್ಯಾಂಟೀನ್ ಅಥವಾ ಹೋಟೆಲ್ ನಲ್ಲಿ ಜನರು ಬಹಳಷ್ಟು ಬರುತ್ತಾರೆ. ಏಕೆಂದರೆ ಒಮ್ಮೆ ಚಹಾ ಸವಿದರೆ ಮತ್ತೆ ಮತ್ತೆ ಕುಡಿಯಬೇಕು ಎಂದೆನಿಸುವ ಪೇಯ ಅಂದರೆ ಚಹಾ ಮಾತ್ರ.

ಈ ವಿಡಿಯೋದಲ್ಲಿ ಸ್ಪೆಷಲ್ ಚಹಾ ಮಾಡುವ ಜುಗಾಡ್ ಮಾಡಲಾಗಿದೆ. ಚಹಾ ಮಾಡುವ ಸಲುವಾಗಿಮೊದಲು ಒಂದು ಲೋಟದಲ್ಲಿ ಚಹಾಪುಡಿ ನೀರು ಸಕ್ಕರೆ ಹಾಕಿ ಇಡಲಾಗಿದೆ. ಮತ್ತೊಂದು ಲೋಟದಲ್ಲಿ ಕೇವಲ ಹಾಲನ್ನು ಇಡಲಾಗಿದೆ. ತದನಂತರ ಕೊನೆಗೆ ಕಪ್ ಇಡಲಾಗಿದೆ. ಈ ಮೂರು ವಸ್ತುಗಳನ್ನು ಗ್ಯಾಸ್ ಮೇಲೆ ಯಾವ ರೀತಿಯಾಗಿ ಅರೇಂಜ್ ಮಾಡಿದ್ದಾರೆ ಅಂದರೆ ಒಂದರಲ್ಲಿಯ ಹೆಚ್ಚಾದ ಪದಾರ್ಥ ಮತ್ತೊಂದರಲ್ಲಿ ತನ್ನಿಂದ ತಾನೇ ಮೂವ ಆಗಬೇಕು ಈ ರೀತಿಯಾಗಿ ಅರೇಂಜ್ ಮಾಡಿದ್ದಾರೆ. ಈ ರೀತಿಯಾಗಿ ಸ್ಪೆಷಲ್ ಚಹಾ ಕೈ ಟಚ್ ಮಾಡದೆ ತಯಾರು ಮಾಡುವ ದೇಶಿ ಐಡಿಯಾ ತುಂಬಾ ಫೇಮಸ್ ಆಗುತ್ತಿದೆ. ನೀವು ಸಹ ವಿಡಿಯೋ ನೋಡಿ.

ವಿಡಿಯೋ ನೋಡಿ.