Vairal dance; ಫೇಮಸ್ ಹಾಡಿಗೆ ಸೊಂಟ ಬಳುಕಿಸಿದ ಟೀಚರ್; ಮಕ್ಕಳು ಕೊಟ್ಟ ರಿಯಾಕ್ಷನ್ ಒಮ್ಮೆ ನೋಡಿ…!

ಇತ್ತೀಚೆಗೆ ಶಾಲೆಯಲ್ಲಿ ಗುರುಗಳ ಮತ್ತು ಶಿಷ್ಯರ ಸಂಬಂಧ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ. ಮೊದಲಿನ ಗುರು ಶಿಷ್ಯರ ಸಂಬಂಧ ಮತ್ತು ಈಗಿನ ಗುರು ಶಿಷ್ಯರ ಸಂಬಂಧದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸದ್ಯಕ್ಕೆ ಗುರುಗಳು ಮಕ್ಕಳ ಜೊತೆಗೆ ಹೆಚ್ಚಾಗಿ ಫ್ರೆಂಡ್ಲಿ ಇರಲು ಬಯಸುತ್ತಾರೆ. ಮಕ್ಕಳೂ ಸಹ ಇದೇ ರೀತಿಯ ಟೀಚರ್ ಇಷ್ಟಪಡುತ್ತಾರೆ. ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿಯೂ ಇದೇ ಕಂಡು ಬರುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಟೀಚರ್ ಶಾಲೆಯಲ್ಲಿ ಕಲಿಸುತ್ತಿರುವಾಗ ಸ್ವಲ್ಪ ಬ್ರೇಕ್ ತೆಗೆದುಕೊಂಡು ಬಾಲಿವುಡ್ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಕ್ಕಳೂ ಸಹ ಅಷ್ಟೇ ಜೋಶ್ ನಿಂದ ಟೀಚರ್ ಗೆ ಸಪೋರ್ಟ್ ಮಾಡುತ್ತಿರುವದನ್ನು ಇಲ್ಲಿ ನೋಡಬಹುದು. ಮಕ್ಕಳು ಕೆಂಪು ಡ್ರೆಸ್ ತೊಟ್ಟುಕೊಂಡು ಈ ಕ್ರಿಸ್ಮಸ್ ಸೆಲೆಬ್ರೇಶನ್ ಜೋರಾಗಿ ಮಾಡುತ್ತಿದ್ದಾರೆ. ಬಾಲಿವುಡ್ ನ ಫೇಮಸ್ ಸಾಂಗ್ ಆದ “ಪತಲಿ ಕಮರಿಯ ಬೋಲೇ, ಹಾಯ್ ಹಾಯ್, ತಿರುಚಿ ನಜರಿಯ ಬೋಲೇ ಹಾಯ್ ಹಾಯ್” ಹಾಡಿಗೆ ಟೀಚರ್ ತುಂಬಾ ಜೋಶ್ ನಿಂದ ನಿಂತಲ್ಲಿಯೇ ಕುಣಿದು ಕುಪ್ಪಳಿಸಿ ಮಕ್ಕಳ ಎನರ್ಜಿ, ಖುಷಿಯನ್ನು ಹೆಚ್ಚಿಸಿದ್ದಾರೆ.

ವೀಡಿಯೋ ನೋಡಿ

 

View this post on Instagram

 

A post shared by Alisha (@alisha_catherine_24)

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಲಿಶಾ ಕ್ಯಾಥ್ರೀನ್ 24 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಸದ್ಯಕ್ಕೆ 17 ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದ್ದರಿಂದ ಸುಮಾರು 8 ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ನೀಡಿದ್ದಾರೆ.