ಅತಿ ಹೆಚ್ಚು ಸಂಭಾವನೆ ಪಡೆಯುವ ಕೋಚ್ ರವಿಶಾಸ್ತ್ರಿ ಗಳಿಸುವ ಆದಾಯ ಎಷ್ಟು, ಅವರ ಸಂಪತ್ತು ಎಷ್ಟು ಗೊತ್ತಾ?

ರವಿಶಾಸ್ತ್ರಿ ಭಾರತೀಯ ಕ್ರಿಕೇಟ್ ಕ್ರೀಡಾಂಗಣದಲ್ಲಿ ಪ್ರಸಿದ್ದರಾದ ವ್ಯಕ್ತಿಗಳಲ್ಲಿ ಒಬ್ಬರು, ಅವರು ಬರೀ ಆಲ್ ರೌಂಡ್ ಆಟಗಾರರಾಗಿ ಮಾತ್ರವಲ್ಲ, ನಿರೂಪಕರಾಗಿ, ವ್ಯವಸ್ಥಾಪಕರಾಗಿ, ನಿರ್ದೇಶಕರಾಗಿ, ತರಬೇತಿದಾರರಾಗಿ ಅವರು ನಿರಂತರವಾಗಿ ಕ್ರಿಕೇಟ್ ಕ್ರಿಡಾಂಗಣದಲ್ಲಿಯೇ ಇದ್ದಾರೆ. ಇದೆಲ್ಲದಕ್ಕೆ ಅವರು ಒಡೆಯುವ ಸಂಭಾವನೆ ಕೂಡ ಭರ್ಜರಿಯಾಗಿದೆ. ಉಳಿದ ಯಾವ ಕೋಚ್ ಕೂಡ ಪಡೆಯಲಾರದಷ್ಟು ಸಂಬಳ ಅವರು ಪಡೆಯುತ್ತಿದ್ದಾರೆ.

2007 ರಲ್ಲಿ ಭಾರತೀಯ ತಂಡದ ವ್ಯವಸ್ಥಾಪಕರಾಗಿ ಸೇರುವ ಮೂಲಕ ರವಿ ಶಾಸ್ತ್ರಿ ನಿರೂಪಕ ವೃತ್ತಿಯಿಂದ ದೂರವಾದರು. ನಂತರ 2016 ರವರೆಗೆ ಅವರನ್ನು ಟೀಂ ಇಂಡಿಯಾದ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಅದಾದ ಬಳಿಕ 2017 ರಲ್ಲಿ ಅವರು ಭಾರತ ತಂಡದ ಕೋಚ್ ಆದರು.

ಇವರ ತರಬೇತಿ ಅವಧಿಯಲ್ಲಿಯೇ ಭಾರತ ತಂಡ 2019 ರ ವಿಶ್ವಕಪ್ ನಲ್ಲಿ ಸೆಮಿಫೈನಲ್ ವರೆಗೆ ಹೋಗಿತ್ತು. ಟೆಸ್ಟ್ ಸರಣಿಗಳಲ್ಲೂ ಮಿಂಚಿರುವ ತಂಡವು ಆಸ್ಟ್ರೇಲಿಯಾ ನೆಲದಲ್ಲೂ ಎರಡು ಟೆಸ್ಟ್ ಸರಣಿ ಗೆದ್ದಿದೆ. ಜೊತೆಗೆ ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಒನ್ ಡೇ ಸರಣಿ ಕೂಡ ಗೆದ್ದಿದೆ.

ಹೀಗೆ ಒಟ್ಟಾರೆ ರವಿಶಾಸ್ತ್ರಿ ಭಾರತ ತಂಡ ಸೇರಿದ ಮೇಲೆ ಸಾಕಷ್ಟು ಪ್ರಗತಿ ಕಂಡಿರುವುದು ಸುಳ್ಳಲ್ಲ. ಹೀಗಿರುವ ರವಿಶಾಸ್ತ್ರಿ ಆದಾಯ ಗಳಿಕೆಯಲ್ಲೂ ನಂಬರ್ ಒನ್ ಆಗಿದ್ದಾರೆ. ಅತಿ ಹೆಚ್ಚು ಸಂಬಳ‌ ಪಡೆಯುವ ಕೋಚ್ ಅಂತಲೇ ಅವರು ಪ್ರಸಿದ್ದರಾಗಿದ್ದಾರೆ. ಪ್ರಪಂಚದ ಬೇರಾವ ದೇಶವೂ ನೀಡದಷ್ಟು ಸಂಬಳವನ್ನು BCCI ಅವರಿಗೆ ನೀಡುತ್ತಿದೆ.

ಬಿಸಿಸಿಐ ಅವರಿಗೆ ವಾರ್ಷಿಕ 9.5 ಯಿಂದ ಹತ್ತು ಕೋಟಿ ಸಂಬಳ ನೀಡುತ್ತದೆ! ಅಂದರೆ ತಿಂಗಳಿಗೆ ಸುಮಾರು 80 ಲಕ್ಷ ಮತ್ತು ದಿನಕ್ಕೆ ಅಂದಾಜು 22 ಸಾವಿರ ಸಂಬಳವಿದೆ!! ಹತ್ತಾರು ದುಬಾರಿ ಕಾರ್ ಗಳನ್ನು ಹೊಂದಿರುವ ರವಿಶಾಸ್ತ್ರಿಯ ಸಧ್ಯದ ಘೋಷಿತ ಆಸ್ತಿ 58 ಕೋಟಿ ಮಾತ್ರ!

ಆಡಿ, ಬಿ.ಎಂ.ಡಬ್ಲು, ಫೋರ್ಡ್ ಮುಂತಾದ ಕಾಸ್ಟ್ಲಿ ಕಾರ್ ಗಳು ಅವರ ಮನೆಯ ಕಂಪೌಂಡಿನಲ್ಲಿವೆ. ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳಬೇಕೆಂದರೆ, ಅವರು 1990 ರಲ್ಲಿ ರೀತು ಸಿಂಗ್ ರವರನ್ನು ಮದುವೆಯಾಗಿದ್ದರು. ವೃತ್ತಿಯಿಂದ ವೈದ್ಯರಾಗಿದ್ದ ಅವರು ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು.

ಸೈಫ್ ಅಲಿ ಖಾನ್ ನ ಮೊದಲ ಪತ್ನಿ ಅಮೃತಾ ಸಿಂಗ್ ಜೊತೆ ಕೂಡ ರವಿ ಶಾಸ್ತ್ರಿ ಅಫೇರ್ ಇತ್ತು. ಇನ್ನೇನು ಮದುವೆಯಾಗುತ್ತಾರೆ ಅನ್ನುವಷ್ಟರಲ್ಲಿ ಅವರ ಮನಸ್ಸು ಬದಲಾಯಿತು. 1986 ರಲ್ಲಿ ಅವರ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ ಅಮೃತಾ ನಟಿಯಾಗಿ ಮುಂದುವರೆಯುವುದು ಶಾಸ್ತ್ರಿಯವರಿಗೆ ಇಷ್ಟವಿರಲಿಲ್ಲ.

ನನ್ನ ಮಡದಿಯಾಗುವವಳು ನಟಿಯಾಗಿ ಇರಬಾರದು ಎಂದು ರವಿ ಹೇಳಿದ್ದರು. ಆದರೆ ಅಮೃತಾರವರಿಗೆ ಅವರ ಭವಿಷ್ಯ ಮುಖ್ಯವಾಗಿತ್ತು, ನಾಣು ಸಧ್ಯಕ್ಕೆ ನನ್ನ ಕರಿಯರ್ ಬಗ್ಗೆ ಗಮನ ಕೊಡುತ್ತೇನೆ, ಮುಂದೆ ಯಾವತ್ತಾದರೂ ಫುಲ್ ಟೈಮ್ ತಾಯಿ ಆಗುತ್ತೇನೆ ಎಂದರು. ಅಲ್ಲಿಗೆ ಸಂಬಂಧ ಮುರಿದು ಬಿತ್ತು. 1990 ರಲ್ಲಿ ಅವರು ರೀತು ಸಿಂಗ್ ರವರನ್ನು ಮದುವೆಯಾದರು.

ಹಲವು ವಿವಾದ – ಅಫೇರ್ ಗಳ ನಡುವೆಯೇ ಅವರ ಜೊತೆ 22 ವರ್ಷ ಸಾಂಸಾರಿಕ ಜೀವನ ನಡೆಸಿದ ರವಿ ಶಾಸ್ತ್ರಿ ನಂತರ 2012 ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಅಲೇಕಾ ಶಾಸ್ತ್ರಿ ಎಂಬ 13 ವರ್ಷದ ಮಗಳು ಇದ್ದಾಳೆ. ವಿಚ್ಚೇಧನದ ನಂತರವೂ ಶಾಸ್ತ್ರಿಯವರ ಹೆಸರು ವಿವಿದ ನಟಿಯರೊಂದಿಗೆ ಕೇಳಿಬರುತ್ತಿದೆ.
-Team Infotrend