Great escape Video!ಇಲ್ಲಿಯವರೆಗಿನ ದಾಖಲೆಯ ಗ್ರೇಟ್ ಎಸ್ಕೇಪ್; ನಂತರ ಕಳ್ಳ ಬೀರಿದ ಗೆಲುವಿನ ನಗೆ ಸೂಪರ್…👌👌

ಮಕ್ಕಳ ಆಟ ಚಂದ. ಮಕ್ಕಳು ಎನೇ ಮಾಡಿದರೂ ನೋಡಲು ತುಂಬಾ ಚೆನ್ನಾಗಿರುತ್ತದೆ. ಅವರ ಆಟಗಳಂತೂ ಇನ್ನಷ್ಟು ಚೆಂದವಾಗಿರುತ್ತವೆ. ಕೆಲವು ಸಲ ದೊಡ್ಡವರು ಮಕ್ಕಳಲ್ಲಿ ಒಡಗೂಡಿ ಆಡುವಾಗ ಹೊತ್ತು ಸರಿದದ್ದೇ ಗೊತ್ತಾಗುವುದಿಲ್ಲ. ಇಂಥ ಮಕ್ಕಳು ಸ್ವಲ್ಪ ಬೆಳೆಯುತ್ತಿದ್ದಂತೆ ತಮ್ಮ ಚೂಟಿಯಾದ ಗುಣಗಳನ್ನು ತೋರಿಸಲು ಶುರು ಮಾಡುತ್ತಾರೆ. ಅಂಬೆಗಾಲಿಡಲು ಶುರು ಮಾಡಿದರೇನೆ ಆಯಿತು ಮನೆಯಿಂದ ಹೊರಗೆ ಓಡಲು ಶುರು ಮಾಡುತ್ತಾರೆ. ಯಾರೇ ಎಷ್ಟೇ ಬಂಧನ ಹಾಕಿದರೂ ಬಾಗಿಲಿನಿಂದ ಹೊರಗೆ ಹೇಗೆ ಹೋಗಲಿ ಎಂಬುದೊಂದೇ ವಿಚಾರ ಮಕ್ಕಳ ತಲೆಯಲ್ಲಿರುತ್ತೆ.

ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿ ಪುಟ್ಟ ಮಗು ಹೊರಗೆ ಹೋಗಲು ಮಾಡಿದ ಪ್ರಯತ್ನ ನಿಜಕ್ಕೂ ಅದ್ಭುತವಾಗಿದೆ ಎನ್ನಬಹುದು. ಮಕ್ಕಳಿಗೆ ಸ್ವಲ್ಪ ಕಾಲುಗಳು ಬಂದವು ಅಥವಾ ಚಲನವಲನ ಮಾಡಲು ಬಂದರೆ ಆಯಿತು ಬರೀ ಹೊರಗಡೆ ಹೋಗಲು ಹಂಬಲಿಸುತ್ತಾರೆ. ಈ ಸಮಯದಲ್ಲಿ ಪೋಷಕರು ಮಕ್ಕಳನ್ನು ಕಂಟ್ರೋಲ್ ಮಾಡಿ ಮಾಡಿ ಸಾಕಾಗುತ್ತದೆ.

ಈಗ ಇಲ್ಲಿ ನೊಡಲಿರುವ ವಿಡಿಯೋದಲ್ಲಿ ಪುಟ್ಟ ಮಗು ಹೊರಗೆ ಹೋಗಲು ಒಂದೇ ಸವನೆ ಹಂಬಲಿಸುತ್ತಿದೆ. ಈ ಪ್ರಯತ್ನದಲ್ಲಿ ಮಗು ಯಾವ ರೀತಿ ಪ್ರಯತ್ನ ಮಾಡಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಈ ವಿಡಿಯೋದಲ್ಲಿ ಮಗು ಬಾಗಿಲಿನ ಪುಟ್ಟ ಕಿಟಕಿಯಿಂದ ಹೊರಗೆ ಹೋಗಲು ದೊಡ್ಡ ರಿಸ್ಕ್ ತೆಗೆದುಕೊಂಡಿದೆ. ಮಗು ಹೊರಗೆ ಹೋಗಿದ್ದೇ ತಡ ತಾನು ಸ್ವತಂತ್ರನಾದೆ ಎನ್ನುವ ಭಾವನೆ ಮಗುವಿನ ಮುಖದ ಮೇಲೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಮಗು ತನ್ನ ಗೆಲುವಿಗೆ ಎಷ್ಟೊಂದು ಖುಷಿ ಪಟ್ಟಿದೆ ನೋಡಿ ಈ ವಿಡಿಯೋದಲ್ಲಿ…

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋ “ಮಾಯ್ ಬೆಸ್ಟಿ ದ ಚೆಸ್ಸಿ” ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದು ಸಾವಿರಾರು ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.