VIDEO : ಆ ಊರಲ್ಲೀಗ ಜನಾನೇ ಇಲ್ಲ, ಯಾಕ್ ಗೊತ್ತಾ..?

ಧನುಷ್ಕೋಡಿ : 1964 ರವರೆಗೆ ಇದು ಒಂದು ಪ್ರಸಿದ್ಧ ಪ್ರವಾಸಿ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಅಲ್ಲಿಗೆ ಬರುವ ಭಕ್ತರಿಗೆ ಮತ್ತು ಯಾತ್ರಿಕರಿಗೆ ಅಲ್ಲಿ ಹೊಟೆಲ್, ಧರ್ಮಶಾಲೆ, ಬಟ್ಟೆ ಅಂಗಡಿ, ಆಸ್ಪತ್ರೆ, ಅಂಚೆ ಕಛೇರಿ, ಹಡಗು ನಿರ್ಮಾಣ ಕೇಂದ್ರ, ರೆಲ್ವೆ ನಿಲ್ದಾಣ, ಮೀನು ಸಾಕಾಣಿಕಾ ಕೇಂದ್ರ ಮುಂತಾದವುಗಳಿದ್ದವು. ಈಗ ಅಲ್ಲಿ ಏನೂ ಇಲ್ಲ, ಎಲ್ಲ ಕಡೆ ಸ್ಮಶಾನ ಮೌನ ಆವರಿಸಿದೆ.

ಚೆನೈ ಮತ್ತು ಧನಷ್ಕೋಡಿಯ ನಡುವೆ ಬೋಟ್ ಮೇಲ್ ಎಂಬ ರೈಲು ಓಡಾಡುತ್ತಿತ್ತು. 1964 ರ ಆ ಚಂಡಮಾರುತ ಎಲ್ಲವನ್ನೂ ಚಿತ್ರಾನ್ನ ಮಾಡಿ ಹಾಕಿತು. ಹೊಟೆಲ್, ಆಸ್ಪತ್ರೆ, ಅಂಚೆ ಕಛೇರಿ ಸೇರಿದಂತೆ ಹತ್ತಾರು ಸರ್ಕಾರಿ ಆಫೀಸ್ ಗಳು ಸೇರಿದಂತೆ ಅಲ್ಲಿಗೆ ಹೋಗಿದ್ದ ರೈಲು ಕೂಡ ಕೊಚ್ಚಿ ಹೋದವು.

ರಾಮಸೇತುವಿನ ಉಗಮ ಸ್ಥಳವಾಗಿರುವ ಇದು ಕಳೆದ ಐದು ದಶಕಗಳಿಂದ ದ್ವಂಸಗೊಂಡ ಸ್ಥಿತಿಯಲ್ಲೇ ಇದೆ. 22 ಡಿಸೆಂಬರ್ 1964 ರಂದು ಅಪ್ಪಳಿಸಿದ ಚಂಡಮಾರುತ ಈ ಪ್ರದೇಶವನ್ನು ಇನ್ನಿಲ್ಲದ ಹಾಗೆ ದ್ವಂಸ ಮಾಡಿತು. ಆ ನಂತರ ಈ ಊರು ಎದ್ದೇಳಲೇ ಇಲ್ಲ. ಯಾರೂ ಆ ನಗರವನ್ನು ಅಥವಾ ಆ ಕ್ಷೇತ್ರವನ್ನು ಮರುನಿರ್ಮಿಸುವ ಬಗ್ಗೆ ಯೋಚಿಸಲೇ ಇಲ್ಲ.

ವಾಸ್ತವದಲ್ಲಿ ಇಂಥದೊಂದು ದುರಂತ ನಡೆದಿರುವುದು ಕೂಡ ತಮಿಳುನಾಡು ಆಡಳಿತಕ್ಕೆ 3-4 ದಿನದ ನಂತರ ಗೊತ್ತಾಯಿತು. ಅದೂ ಕೂಡ ಅಲ್ಲಿಗೆ ಹೋಗಿದ್ದ ರೈಲು ವಾಪಸ್ ಬರದೇ ಇದ್ದುದಕ್ಕೆ ಆ ದುರಂತದ ಬಗ್ಗೆ ಹೊರಜಗತ್ತಿಗೆ ತಿಳಿಯಿತು. ಆ್ಯಕ್ಚುಲಿ ಅಲ್ಲಿ ಇಡೀ ಟ್ರೈನ್ ಹಾಗೂ ಇಡಿ ಗ್ರಾಮ ಕೊಚ್ವಿಕೊಂಡು ಹೋಗಿದ್ದವು. ಆ ರೈಲಿನಲ್ಲಿದ್ದ ಒಬ್ಬೇ ಒಬ್ಬ ಪ್ರಯಾಣಿಕ ಕೂಡ ಬದುಕಿ ಬರಲಿಲ್ಲ.

ಈ ಕ್ಷೇತ್ರದ ಬಗ್ಗೆ ಪರಿಚಯ ಹೇಳಬೇಕೆಂದರೆ, ಇದು ತಮಿಳುನಾಡಿನ ಪೂರ್ವದಲ್ಲಿ ಇದೆ. ರಾಮೇಶ್ವರಂ ನಿಂದ ದಕ್ಷಿಣಕ್ಕೆ 11 ಕಿ.ಮೀ ದೂರದಲ್ಲಿ ಧನುಷ್ಕೋಡಿ ನಗರವಿದೆ. ಅಚ್ಚರಿಯೆಂದರೆ ಶ್ರೀಲಂಕಾ ಇಲ್ಲಿಂದ ಕೇವಲ 30 ಕಿ.ಮೀ ದೂರದಲ್ಲಿದೆ! ಉತ್ತರ ಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ ಹಾಗೆಯೇ ದಕ್ಷಿಣ ಭಾರತದಲ್ಲಿ ರಾಮೇಶ್ವರಂ ಗೆ ಅದರದೇ ಆದ ವಿಶಿಷ್ಟ ಸ್ಥಾನಮಾನವಿದೆ.

ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಂ ಕೂಡ ಒಂದು. ಇಷ್ಟೆಲ್ಲ ಮಹತ್ವವಿರುವ ಈ ಕ್ಷೇತ್ರವನ್ನು ಅಲ್ಲಿನ ಆಡಳಿತ ಮರುನಿರ್ಮಿಸುವ ಅಥವಾ ಅದಕ್ಕೊಂದು ಶ್ರೀ ಕ್ಷೇತ್ರದ ರೂಪ ಕೊಟ್ಟು ಪ್ರವಾಸೋದ್ಯಮ ಬೆಳೆಸುವುದು ಬಿಟ್ಟು ಅದನ್ನು ಭೂತಗಳ ನಗರ ಎಂದು ಘೋಷಿಸಿ ಕೈ ತೊಳೆದುಕೊಂಡಿತು.

ಈ ಧನುಷ್ಕೋಡಿ ನಗರದಲ್ಲೇ ರಾವಣನ ತಮ್ಮ ವಿಭೀಷಣ ಶ್ರೀರಾಮನಿಗೆ ಶರಣಾಗಿ ಸೀತಾ ಮಾತೆಯನ್ನು ಬಿಡಿಸಿ ನೆರವಾಗುವುದಾಗಿ ವಾಗ್ದಾನ ಮಾಡುತ್ತಾನೆ.  ರಾವಣನೊಂದಿಗಿನ ಯುದ್ಧ ಮುಗಿದ ಬಳಿಕ ವಿಭೀಷಣನನ್ನು ಶ್ರೀರಾಮ ಲಂಕಾದ ರಾಜನನ್ನಾಗಿಸಿದ. ನಂತರ ರಾಮಸೇತುವಿನ ಮೂಲಕ ಮತ್ಯಾರು ಲಂಕಾ ಮೇಲೆ ದಾಳಿ ಮಾಡಬಾರದು ಎಂದು ರಾಮಸೇತುವಿನ ಮೇಲೆ ಬಾಣ ಹೊಡೆದು ಕೆಳಗೆ ಕಳಿಸಿದನು. ಇಂದಿಗೂ ಆ ರಾಮಸೇತು 2-3 ಅಡಿ ಕೆಳಗೆ ಇದ್ದು ಯಾರಾದರೂ ನಿಂತರೆ ಸೊಂಟದವರೆಗೆ ನೀರಿದೆ.

ಡಿಸೆಂಬರ್ 22 ರಂದು ರಾತ್ರಿ 11: 55 ಕ್ಕೆ ಇಲ್ಲಿಗೆ ಆಗಮಿಸಿದ 653 ನಂಬರಿನ ಆ ಟ್ರೇನ್ ನಲ್ಲಿ ಸಿಬ್ಬಂದಿ ಸಮೇತ 115 ಜನ ಪ್ರಯಾಣಿಕರು ಇದ್ದರು. ಚಂಡಮಾರುತದಿಂದ ಉಂಟಾದ ಬೃಹತ್ ತೆರೆಗಳು ಆ ರೈಲನ್ನು ತಮ್ಮ ಜೊತೆಗೆ ಸೆಳೆದುಕೊಂಡು ಹೋಗಿಬಿಟ್ಟವು! ಯಾರೊಬ್ಬರೂ ಬದುಕುಳಿಯಲಿಲ್ಲ. ಅಲ್ಲಿಂದ ಆ ಕ್ಷೇತ್ರಕ್ಕೆ ದುರ್ದೆಸೆ ಆರಂಭವಾಯಿತು.

ಆ ಭೀಕರ ಚಂಡಮಾರುತದಲ್ಲಿ ಆ ಇಡೀ ನಗರ ಹಾಗೂ ಟ್ರೈನ್ ದುರಂತ ಸಂಭವಿಸಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಎಲ್ಲರೂ ಮೃತರಾದರು, ಆದರೆ ಒಬ್ಬ ಮಾತ್ರ ಬದುಕುಳಿದಿದ್ದ. ಇಡೀ ಊರಿಗೆ ಉಳಿದವನು ಕಾಲಿಯಾಮನ ಎಂಬ ಆತನೊಬ್ಬನೇ. ಆತ ಈಜಿ ಈಜಿ ಜೀವ ಉಳಿಸಿಕೊಂಡಿದ್ದ. ಹೀಗಾಗಿ ಧನುಷ್ಕೋಡಿಯ ಪಕ್ಕದ ಊರಿಗೆ ಸರ್ಕಾರ ಆ ವ್ಯಕ್ತಿಯ ಹೆಸರನ್ನು ಇಟ್ಟಿತು.

ಸರ್ಕಾರಗಳು ಮನಸ್ಸು ಮಾಡಿದ್ದರೆ ಆ ನಗರವನ್ನು ಸುರಕ್ಷಿತ ಸ್ಥಳದಲ್ಲಿ ಮರುನಿರ್ಮಾಣ ಮಾಡಿ ಆ ತೀರ್ಥ ಕ್ಷೇತ್ರವನ್ನು ಒಂದೊಳ್ಳೆ ತಾಣವನ್ನಾಗಿ ಮಾಡಬಹುದಿತ್ತು, ಜನರ ಮನಸ್ಸಿನಲ್ಲಿದ್ದ ಭೂತದ ಭಯವನ್ನು ಹೋಗಲಾಡಿಸಬಹುದಿತ್ತು. ಆದರೆ ಅಂಥ ಪ್ರಯತ್ನಗಳು ನಡೆಯಲೇ ಇಲ್ಲ. ಈ ಬಗ್ಗೆ ರೋಚನ ಮಾಹಿತಿ ಮೇಲಿರುವ ವಿಡಿಯೊದಲ್ಲಿದೆ‌.ಆಸಕ್ತರು ನೋಡಿ.

-Team Infotrend