ಬಾಲಿವುಡ್ ನ ಈ ಸೆಲೆಬ್ರಿಟಿಗಳೆಲ್ಲ ಸಿಂಗಲ್ ಫಾದರ್ಸ್! : ಫಾದರ್ಸ್ ಡೇ ಸ್ಪೇಶಲ್
ಸಿಂಗಲ್ ಫಾದರ್ ಈ ಶಬ್ದ ಕೇಳಿದರೆ ಮೊದ ಮೊದಲು ಜನರಿಗೆ ಅಚ್ಚರಿ ಎನಿಸುತ್ತಿತ್ತು, ಏಕೆಂದರೆ ಒಂದು ಮಗು ಹೇರುವುದಕ್ಕೆ ತಾಯಿ ಅವಶ್ಯವಾಗಿ ಬೇಕೇ ಬೇಕು, ಇಂದಿನ ಮುಂದುವರೆದ ದಿನಗಳಲ್ಲಿ ಸಂಸಾರದ ಜಂಜಡ ಬೇಡ ಆದರೆ ಮಕ್ಕಳು ಬೇಕು ಎನ್ನುವವರ ಸಂಖ್ಯೆ ಏರುತ್ತಲಿದೆ. ಹೀಗಾಗಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದು ಅಥವಾ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಪಾಲನೆ ಪೋಷಣೆ ಮಾಡುವವರು ಹೆಚ್ಚಾಗುತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳೂ ಇದಕ್ಕೆ ಹೊರತಲ್ಲ, ಯಾವಾಗಲೂ ಬ್ಯುಸಿಯಾಗಿರುವ ಈ ಸೆಲೆಬ್ರಿಟಿಗಳು ಕೂಡ ಸಿಂಗಲ್ ಫಾದರ್ಸ್ ಆಗಿರೋದು ವಿಶೇಷ ಮತ್ತು ಆಶ್ಚರ್ಯವನ್ನುಂಟು ಮಾಡುತ್ತಿದೆ..! ಬನ್ನಿ ಯಾವೆಲ್ಲ ಸೆಲೆಬ್ರಿಟಿಗಳು ಸಿಂಗಲ್ ಫಾದರ್ಸ್ ಆಗಿದ್ದಾರೆ ಎಂದು ನೋಡೋಣ…
ಹೃತಿಕ್ ರೋಷನ್ :
ಏಷಿಯಾದ ಅತ್ಯಂತ ಆಕರ್ಷಕ ವ್ಯಕ್ತಿ ಹಾಗೂ ಬಾಲಿವುಡ್ ಹಂಕ್ ಎಂದೇ ಪ್ರಸಿದ್ಧಿ ಪಡೆದಿರುವ ಇವರು ಇತ್ತೀಚಿಗಷ್ಟೇ ತಮ್ಮ ಪತ್ನಿ ಸುಸ್ಸೇನ್ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದು, ಸದ್ಯ ಸಿಂಗಲ್ ಆಗಿದ್ದಾರೆ. ಆದರೆ ಈ ದಂಪತಿಗೆ ಇರುವ ಎರಡು ಮಕ್ಕಳಾದ ಹೃಹಾನ್ ಹಾಗೂ ಹೃದಾನ್ ಅವರು ಹೃತಿಕ್ ಅವರ ಪಾಲನೆಯಲ್ಲಿಯೇ ಇದ್ದು, ಈ ಎರಡು ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯನ್ನು ಇವರೇ ಕೊಡುತ್ತಿದ್ದಾರೆ.

ಕರಣ್ ಜೋಹರ್ :
ಬಾಡಿಗೆ ತಾಯಿಯ ಮೂಲಕ ಒಂದು ಗಂಡು ಇನ್ನೊಂದು ಹೆಣ್ಣು ಒಟ್ಟು ಎರಡು ಮಕ್ಕಳನ್ನು ಪಡೆದಿರುವ ಬಾಲಿವುಡ್ ನ ಅತ್ಯಂತ ಯಶಸ್ವಿ ನಿರ್ದೇಶಕ ಕರಣ್ ಜೋಹರ್ ಅವರಿಗೆ ಆ ಎರಡು ಮಕ್ಕಳೇ ಪ್ರಪಂಚ. ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯನ್ನು ಸಹ ಇವರೇ ನೀಡುತ್ತಿದ್ದಾರೆ. ಅವರಿಗೆ ತಮ್ಮ ತಂದೆ ತಾಯಿಯ ಹೆಸರುಗಳಾದ ಯಶ್ ಮತ್ತು ರೂಹಿ ಎಂದು ಇಟ್ಟು ಅವರ ಸ್ಥಾನವನ್ನು ನೀಡಿದಂತಿದೆ.
ತುಷಾರ್ ಕಪೂರ್ :
ಬಾಲಿವುಡ್ ನ ಡಾನ್ಸ್ ಕಿಂಗ್ ಜಿತೇಂದ್ರರವರ ಪುತ್ರ ತುಷಾರ್ ಕಪೂರ್ ಅವರ ಬಗ್ಗೆ ಒಂದು ವಿಶೇಷ ಇದೆ, ಅದೇನೆಂದರೆ ಮೊದಲು ಸಿಂಗಲ್ ಫಾದರ್ ಎಂಬ ಟ್ರೆಂಡ್ ಶುರು ಮಾಡಿದ್ದು ಇವರೇ. ಒಬ್ಬ ಮಗನನ್ನು ಬಾಡಿಗೆ ತಾಯಿಯಿಂದ ಪಡೆದ ತುಷಾರ್ ಅವರು ಮಗನಿಗೆ ತಂದೆ ಮತ್ತು ತಾಯಿ ಎರಡು ಪ್ರೀತಿಯನ್ನು ನೀಡಿ ಬೆಳೆಸಿದ್ದಾರೆ, ಸದ್ಯ ಟೀನ್ ಏಜ್ ಗೆ ಬಂದಿರುವ ಮಗನ ಹೆಸರು ಲಕ್ಷ ಕಪೂರ್.
ರಾಹುಲ್ ಬೋಸ್ :
ಬಾಲಿವುಡ್ ನಟ ರಾಹುಲ್ ಅವರು ಅತೀ ಹೆಚ್ಚಾಗಿ ಪ್ರಸಿದ್ಧವಾಗಿದ್ದು ಅವರ ಸಮಾಜಮುಖಿ ಕೆಲಸಗಳಿಂದಲೇ ಎಂಬುದು ವಿಶೇಷ, ಏಕೆಂದರೆ ಇವರು ತಮ್ಮ ಕೆಲಸಗಳಿಂದಲೇ ಸಾಕಷ್ಟು ಸಾಮಾಜಿಕ ಸಂದೇಶಗಳನ್ನು ನೀಡುತ್ತಿರುತ್ತಾರೆ. ಇಷ್ಟೇ ಅಲ್ಲದೇ ಇವರು ಕೂಡ ಸಿಂಗಲ್ ಫಾದರ್ ಆಗಿದ್ದು, ವಿಶೇಷ ಎಂದರೆ ಇವರು ಒಂದಲ್ಲ ಎರಡಲ್ಲ ಬರೋಬ್ಬರಿ 6 ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಆ ಮಕ್ಕಳು ಅಂಡಮಾನ್ ನಿಕೋಬಾರ್ ದ್ವೀಪಗಳಿಂದಲೇ ಎನ್ನುವುದು ವಿಶೇಷ.

ನಟ ರಾಹುಲ್ ದೇವ್ :
ಅತೀ ಹೆಚ್ಚು ಖಳ ನಟನ ಪಾತ್ರದಲ್ಲಿಯೇ ನಟಿಸುವ ರಾಹುಲ್ ದೇವ್ ಅವರು ತಮ್ಮ ಮಗ ಸಿದ್ದಾಂತ್ ಅವರ ಪಾಲಿನ ರಿಯಲ್ ಹೀರೋ. ಏಕೆಂದರೆ ಸಿದ್ದಾಂತ್ 10 ವರ್ಷ ವಯಸ್ಸಿನವರಿದ್ದಾಗ ಅವರ ತಾಯಿ ರೀನಾ ಅವರು 2009 ನೇ ಇಸ್ವಿಯಲ್ಲಿ ಕ್ಯಾನ್ಸರ್ ನಿಂದ ತೀರಿಕೊಂಡರು.
ಆಗ ರಾಹುಲ್ ದೇವ್ ಅವರು ಮತ್ತೊಂದು ಮದುವೆಯ ವಿಚಾರವನ್ನು ಕೈ ಬಿಟ್ಟು ಮಗನಿಗೆ ತಂದೆ ಮತ್ತು ತಾಯಿ ಎರಡು ಪ್ರೀತಿ ನೀಡಿ ಬೆಳೆಸಿದ್ದಾರೆ. ಸದ್ಯ 22 ವರ್ಷ ವಯಸ್ಸಿನವರಾಗಿರುವ ಸಿದ್ದಾಂತ್ ಹಾಗೂ ತಂದೆ ರಾಹುಲ್ ದೇವ್ ಅವರ ಒಂದು ಫೋಟೋ ಟ್ವಿಟ್ಟರ್ ಖಾತೆಯಲ್ಲಿ ಇದೆ, ಅದು ಹೇಗಿದೆ ಎಂದರೆ ಇಬ್ಬರೂ ಸ್ನೇಹಿತರು ಎಂಬಂತೆ ಭಾಸವಾಗುತ್ತದೆ.
ನೋಡಿದ್ರಲ್ಲ ಅಷ್ಟೊಂದು ದುಡ್ಡು ಆಸ್ತಿ ಎಲ್ಲವೂ ಇದ್ದರೂ ಹೆಂಡತಿ ಸಂಸಾರ ಎಂದು ತಲೆ ಕೆಡಿಸಿಕೊಳ್ಳದೇ ಬಾಡಿಗೆ ತಾಯಿ ಅಥವಾ ಅನಾಥ್ ಮಕ್ಕಳ ಪಾಲಿಗೆ ಬೆಳಕಾಗಿದ್ದಾರಿವರು, ಹ್ಯಾಪಿ ಫಾದರ್ಸ್ ಡೇ ಟೂ ಆಲ್.