ಟೀವಿಯಲ್ಲಿ ಸಿನಿಮಾ ನೋಡುತ್ತಿರುವಾಗ ಒಮ್ಮೆಲೇ ಹೆದರಿ ಈ ನಾಯಿ ಮಾಡಿದ್ದೇನು? ವೀಡಿಯೋ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ತಮಾಷೆಯ ವಿಡಿಯೋಗಳು ನೆಟ್ಟಿಗರಿಗೆ ಕೆಲವೊಮ್ಮೆ ನಕ್ಕು ನಕ್ಕು ಸಾಕಾಗಿಸುತ್ತವೆ. ಇಂಥ ವಿಡಿಯೋಗಳು ಅನೇಕ ಸಲ ನೈಸರ್ಗಿಕವಾಗಿಯೇ ಸಿಸಿಟಿವಿಯಲ್ಲಿ ಶೂಟ್ ಆಗಿರುತ್ತವೆ, ಇನ್ನು ಕೆಲವು ವಿಡಿಯೋಗಳು ಆಕ್ಟ್ ಮಾಡಿ ಶೂಟ್ ಮಾಡಿಕೊಂಡಿರುತ್ತಾರೆ.
ಇಂಥ ವಿಡಿಯೋಗಳನ್ನು ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ವಿಡಿಯೋ ಮಾಡುವವರ ಐಡಿಯಾಗಳ ಬಗ್ಗೆ ವಿಚಾರ ಮಾಡಿದಾಗ ನಿಜಕ್ಕೂ ಇವರ ಮೈಂಡ್ ಎಷ್ಟೊಂದು ವಿಭಿನ್ನವಾಗಿ ಓಡುತ್ತದೆ ಎಂಬ ವಿಚಾರ ತಲೆಯಲ್ಲಿ ಬರದೇ ಇರದು.
ಸದ್ಯ ಈ ವಿಡಿಯೋದಲ್ಲಿ ಒಂದು ವಿಶೇಷ ದೃಶ್ಯ ನೋಡಲಿದ್ದೀರಿ. ಇದನ್ನು ನೋಡಿದರೆ ನಿಜಕ್ಕೂ ಇದು ಆಕ್ಟ್ ನಾ ಅಥವಾ ಅವತಾರವೋ ಎಂಬ ಪ್ರಶ್ನೆ ಉದ್ಭವ ವಾಗುತ್ತದೆ. ಏಕೆಂದರೆ ಬೆ ವೀಡಿಯೋದಲ್ಲಿ ನಡೆದ ಘಟನೆ ಆಕಸ್ಮಿಕವಾಗಿ ನಡೆದಿದೆ. ಇದೇನು ರೀಲ್ಸ್ ಮಾಡಬೇಕು ಅಂತ ಮಾಡಿದ್ದಲ್ಲ. ನಿಜವಾಗಿಯೂ ನಡೆದ ಘಟನೆ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಒಂದು ನಾಯಿಯನ್ನು ಟಿವಿಯ ಮುಂದಕ್ಕೆ ಕೂಡಿಸಿ ಒಂದು ಸಿನಿಮಾವನ್ನು ಹಚ್ಚಲಾಗುತ್ತದೆ. ನಾಯಿ ಸಹ ಮನುಷ್ಯರಂತೆ ಆರಾಮವಾಗಿ ಕುಳಿತುಕೊಂಡು ನೋಡುತ್ತಿರುತ್ತದೆ. ಆದರೆ ಆ ಟಿವಿಯಲ್ಲಿ ಹತ್ತಿರುವ ಚಲನಚಿತ್ರ ಹಾಲಿವುಡ್ ಚಿತ್ರ ಜುರಾಸಿಕ್ ಪಾರ್ಕ್ ಇರುತ್ತದೆ. ಮೊಟ್ಟ ಮೊದಲು ಚಿತ್ರದ ಹೆಸರುಗಳು ತೋರಿಸಲು ಸ್ಟಾರ್ಟ್ ಆಗುತ್ತದೆ. ಆಗ ಮೊದಲಿಗೆ ಮೊಟ್ಟೆ ಯೊಂದನ್ನು ತೋರಿಸಿ ಅದನ್ನು ಕ್ರ್ಯಾಕ್ ಮಾಡುವ ಸೀನ್ ಇರುತ್ತದೆ ಇದನ್ನು ನೋಡುತ್ತಲೇ ನಾಯಿ ಸ್ವಲ್ಪ ಹೆದರುತ್ತದೆ ತದನಂತರ ಆ ಮೊಟ್ಟೆಯಿಂದ ಡ್ರ್ಯಾಗನ್ ದ ಒಂದು ಕಾಲು ಹೊರಗೆ ಬರುತ್ತದೆ ಅಗಲು ಸಹ ನಾಯಿ ಸ್ವಲ್ಪ ಹೆದರಿ ತನಷ್ಟಕ್ಕೆ ತಾನು ಕಂಟ್ರೋಲ್ ಮಾಡಿಕೊಳ್ಳುತ್ತದೆ ಆದರೆ ಒಮ್ಮೆಲೇ ಡ್ರ್ಯಾಗನ್ ಕಣ್ಣುಗಳು ತೋರಿಸಿದ ನಂತರ ನಾಯಿ ಮಾತ್ರ ಅಲ್ಲಿಂದ ಹೆದರಿ ಓಡಿ ಹೋಗುತ್ತದೆ. ಈ ಅದ್ಭುತ ವಾದ ವಿಡಿಯೋ ನೋಡಿದ ಮೇಲೆ ನೀವು ನಕ್ಕೆ ನಗುವಿರಿ.
ನೋಡಿ ಈ ವೀಡಿಯೋ.
View this post on Instagram
ಪ್ರಸ್ತುತ ವೀಡಿಯೋ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ boxer_ fore ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಎರಡು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಸಹ ಮಾಡಿದ್ದಾರೆ.