Video; ಸ್ಟಡಿ ಮಾಡುವಾಗಲೇ ನಿದ್ರೆಗೆ ಜಾರಿದ ಕಂದಮ್ಮ; ತಾಯಿ ಬಂದಾಗ ನಿದ್ರೆಯಿಂದೆದ್ದು ಕೊಟ್ಟ ಉತ್ತರ ನೋಡಿದರೆ…ಪಾಪ ಅನಿಸುತ್ತೆ.

ಇಂದಿನ ಮಕ್ಕಳಿಗೆ ಅಭ್ಯಾಸ ತುಂಬಾ ಹೆಚ್ಚಾಗಿದೆ. ಮಕ್ಕಳನ್ನು ಕಲಿಸುವ ಹುಚ್ಚಾಟದಲ್ಲಿ ಕೆಲವು ತಂದೆ ತಾಯಿಗಳು ಮಕ್ಕಳ ಬಾಲ್ಯವನ್ನೇ ಕಸಿದುಕೊಂಡಿದ್ದಾರೆ. ಈಗಿನ ಮಕ್ಕಳು ಗೆಳೆಯರ ಜೊತೆಗೂಡಿ ಆಟ ಆಡುವುದೇ ಕಡಿಮೆಯಾಗಿ ಬಿಟ್ಟಿದೆ. ಮೊದಲಿನವರ ಸ್ವಾತಂತ್ರ್ಯ ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಅಭ್ಯಾಸದ ಹೆಸರಿನಲ್ಲಿ ಮಕ್ಕಳ ಬಾಲ್ಯದ ಜೀವನಕ್ಕೆ ಬ್ರೇಕ್ ಬಂದಿದೆ.

ಇದಕ್ಕೆ ಇನ್ನೊಂದು ಕಾರಣ ಮೊಬೈಲ್ ಸಹ ಆಗಿದೆ. ಮಕ್ಕಳು ಆಡುವ ವಯಸ್ಸಿನಲ್ಲಿ ಮೊಬೈಲ್ ಹಿಡಿದುಕೊಂಡು ಗಂಟೆಗಟ್ಟಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಮಕ್ಕಳ ಬೊಜ್ಜು ಹೆಚ್ಚಾಗುವದರೊಂದಿಗೆ ಮಕ್ಕಳಲ್ಲಿ ಆಲಸ್ಯತನ ಹೆಚ್ಚಾಗುತ್ತಿದೆ. ಪ್ರತಿಯೊಂದು ಮಗುವಿಗೆ ಆಟ ಪಾಠ ಹಾಗೂ ಒಳ್ಳೆಯ ಊಟ ಇವು ಮೂರು ಘಟಕಗಳು ತುಂಬಾ ಅವಶ್ಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಟ ಕಡಿಮೆಯಾಗಿ ಬರಿ ಊಟ ಹಾಗೂ ಪಾಠ ಎರಡೇ ಘಟಕಗಳು ಉಳಿದುಬಿಟ್ಟಿವೆ.

ತಮ್ಮ ಮಕ್ಕಳು ಅಭ್ಯಾಸದಲ್ಲಿ ಮುಂದಿರಬೇಕು, ಶಾಲೆಯಲ್ಲಿ ಮೊದಲ ರ್ಯಾಂಕ್ ಪಡೆಯಬೇಕು ಎಂಬ ಹುಚ್ಚು ಹೆಚ್ಚಿನ ಪೋಷಕರಿಗಿದೆ. ಇದೇ ಕಾರಣದಿಂದಾಗಿ ತಮ್ಮ ಮಕ್ಕಳಿಗೆ ಪೋಷಕರು ಸಾಕಷ್ಟು ಗೋಳು ಹೊಯ್ದುಕೊಳ್ಳುತ್ತಾರೆ.

ಸದ್ಯ ಈ ಅಂಕಣದಲ್ಲಿ ನಿಮಗಾಗಿ ಒಂದು ವಿಡಿಯೋದ ದೃಶ್ಯವನ್ನು ತಂದಿದ್ದೇವೆ. ಈ ವಿಡಿಯೋ ನೋಡಿದಾಗ ಮಗುವಿನ ಮುಗ್ಧ ಉತ್ತರ ನಿಮ್ಮ ಹೃದಯಕ್ಕೆ ನಾಟುತ್ತದೆ. ಪುಟ್ಟ ಹುಡುಗಿಯೊಬ್ಬಳು ಸ್ಟಡಿ ಮಾಡುತ್ತಲೇ ನಿದ್ರೆಗೆ ಜಾರಿದ ದೃಶ್ಯ ಈ ವಿಡಿಯೋದಲ್ಲಿ ಕಂಡು ಬರುತ್ತಿದೆ. ತದನಂತರ ಆಕೆಯ ತಾಯಿಯು ನಿಧಾನವಾಗಿ ಮಗಳು ಏನು ಮಾಡುತ್ತಿದ್ದಾಳೆ ನೋಡಲು ಹೋಗುತ್ತಾಳೆ. ಈ ಸಂದರ್ಭದಲ್ಲಿ ತಾಯಿಯು ವಿಡಿಯೋ ಸಹ ಶೂಟ್ ಮಾಡಿದ್ದಾಳೆ. ತಾಯಿಯ ಮೆಲ್ಲಗಿನ ಶಬ್ದಕ್ಕೆ ಮಗು ಗಾಬರಿಯಿಂದ ಎಚ್ಚೆತ್ತುಕೊಳ್ಳುತ್ತಾಳೆ. ಎಚ್ಚೆತ್ತುಕೊಂಡ ಮಗಳಿಗೆ ತಾಯಿ ಏನು ಮಾಡುತ್ತಿದ್ದೆ ಎಂದು ಕೇಳಿದಾಗ ಮುದ್ದು ಮಗಳ ಉತ್ತರ ಕೇಳಿ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಕಾರಣ ಪ್ರಸ್ತುತ ದೃಶ್ಯದಲ್ಲಿ ಮಗಳು ತಾಯಿಗೆ ಹೆದರುತ್ತಿದ್ದಾಳೆ ಎಂದು ತಿಳಿದು ಬರುತ್ತದೆ. ಮಗಳು ಒಮ್ಮೆಲೇ ಎಚ್ಚೆತ್ತು ದೊಡ್ಡ ಕಣ್ಣುಗಳನ್ನು ಮಾಡಿ ತಾಯಿಗೆ ಹೆದರಿ ಸುಳ್ಳನ್ನು ಯಾವ ರೀತಿ ಹೇಳುತ್ತಿದ್ದಾಳೆ ನೋಡಿ.

ನಾನು ಮಲಗಿರಲಿಲ್ಲ ಮನಸ್ಸಿನಲ್ಲಿ ಸ್ಟಡಿ ಮಾಡುತ್ತಿದ್ದೇನೆ ಎಂದು ಧೈರ್ಯದಿಂದ ಸುಳ್ಳು ಹೇಳಲು ಯತ್ನಿಸಿದ್ದಾಳೆ. ಮಗುವಿನ ಈ ದೃಶ್ಯ ನೋಡುವವರಿಗೆ ಒಂದು ರೀತಿಯಲ್ಲಿ ತಮಾಷೆನಿಸಿದರು ಸ್ವಲ್ಪ ಸೀರಿಯಸ್ ಆಗಿ ವಿಚಾರ ಮಾಡಿದಾಗ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಮಕ್ಕಳ ಬಾಲ್ಯವನ್ನು ಮುಗುಚಿ ಹಾಕಿ ಸದಾ 24 ಗಂಟೆ ಬರಿ ಸ್ಟಡಿ ಸ್ಟಡಿ ಎನ್ನುವ ಮೃಗಜಲದ ಹಿಂದೆ ಪೋಷಕರು ಓಡುವುದೊಂದೇ ಆಗಿಬಿಟ್ಟಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Hemanth Hemu (@callme_hemu_official)

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಕಾಲ್ ಮೀ ಹೇಮು ಆಫೀಸಿಯಲ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಮೂರುವರೆ ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದು ಮಿಲಿಯನ್ ಸಂಖ್ಯೆಯಲ್ಲಿ ಈ ವಿಡಿಯೋ ವೀಕ್ಷಣೆಯನ್ನು ಪಡೆದಿದೆ.