VIDEO : ಶಭಾಷ್! ಇಂಥ ಫಿಲ್ಡಿಂಗ್ ಮತ್ತೆಲ್ಲಾದ್ರು ನೋಡಿದಿರಾ? ಕ್ರಿಕೇಟ್ ಪಂದ್ಯದ ಈ ವಿಡಿಯೊ ತುಣುಕು ನೋಡಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು!

ಕ್ರಿಕೇಟ್ ಅಂದರೆ ಒಂಥರಾ ಅನಿಶ್ಚಿತತೆಯ ಆಟ, ಅಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲು ಬರುರುವುದಿಲ್ಲ‌. ಈ ಕ್ಷಣ ಬ್ಯಾಟಿಂಗ್ ಮಾಡುವವರ ಕಡೆ ಇದ್ದ ವಿಜಯಲಕ್ಷ್ಮಿ ಮುಂದಿನ ಕ್ಷಣ ಫಿಲ್ಡಿಂಗ್ ಮಾಡುವವರ ಕಡೆ ವಾಲಬಹುದು. ಗೆಲ್ಲೋಕೆ ಸಾಧ್ಯವೇ ಇಲ್ಲ ಎಂದುಕೊಂಡ ಪಂದ್ಯಗಳು ಕೆಲವೇ ಎಸೆತಗಳಲ್ಲಿ ಬದಲಾಗಿಬಿಡುತ್ತವೆ. ಆದರೆ ಇಲ್ಲೊರುವ ವಿಡಿಯೊ ಅದ್ಬುತ ಕ್ರಿಕೇಟಿಗೆ ಅಪವಾದ ತರುವ ಪೈಕಿಯದು.

ಇಂಗ್ಲೆಂಡಿನ ಮಾಜಿ ವೇಗದ ಬೌಲರ್ ಮೈಕಲ್ ವಾನ್ ರವರ ಮೂಲಕ ವೈರಲ್ ಆದ ವಿಡಿಯೊ ಸದ್ಯ ಮತ್ತೆ ಯೂಟ್ಯೂಬ್ ಮೂಲಕ ಬೆಳಕಿಗೆ ಬಂದಿದೆ. ಇದು ಯರೋಪಿಯನ್ ಕ್ರಿಕೇಟ್ ಸರಣಿಯಲ್ಲಿ ನಡೆದ ಒಂದು ಪಂದ್ಯದ ನಕ್ಕು ನಗಿಸುವ ಫಿಲ್ಡಿಂಗ್ ದೃಶ್ಯ. ಮಿಸ್ ಫಿಲ್ಡ್ ಆಗುವುದು ಮಾಮೂಲಾದರೂ, ತೀರ ಈ ಪರಿ ಮಿಸ್ ಫಿಲ್ಡ್ ಆಡುವ ಮೂಲಕ ಈ ಆಟಗಾರರು ಎದುರಾಳಿಗೆ ಭರ್ಜರಿ ಉಡುಗೊರೆ ನೀಡಿದರು.

ಅತ್ಯಂತ ಸುಲಭವಾಗಿ ಔಟ್ ಅಗಬೇಕಿದ್ದ ಬ್ಯಾಟ್ಸಮನ್ ಇಲ್ಲಿ ಫಿಲ್ಡರ್ ಗಳ ಕೃಪೆಯಿಂದ ಬಚಾವ್ ಆಗುವುದಲ್ಲದೇ ಒಂದಲ್ಲ ಎರಡಲ್ಲ ಬರೊಬ್ಬರಿ ನಾಲ್ಕು ರನ್ ಗಳಿಸುತ್ತಾನೆ! ಅದು ಕೂಡ ಅಷ್ಟೂ ರನ್ ಓಡಿಯೇ ಗಳಿಸುತ್ತಾರೆ! ಈ ಪಂದ್ಯದಲ್ಲಿ ಫಿಲ್ಡಿಂಗ್ ಮಾಡುತ್ತಿರುವವರು ವರ್ಮ್ ಡೋ ತಂಡದವರು, ಬ್ಯಾಟಿಂಗ್ ಆಡುತ್ತಿರುವ ಅದೃಷ್ಟವಂತರು ಸ್ಟಾಕ್ ಹೋಮ್ ತಂಡದವರು.

ಕೀಪರ್ ಮತ್ತು ಫಿಲ್ಡರ್ ಗಳ ಕೃಪೆಯಿಂದ ಇಂಥದೊಂದು ಹಾಸ್ಯ ಪ್ರಸಂಗಕ್ಕೆ ಸಾಕ್ಷಿಯಾದರು. ಬಹುಶಃ ಇಷ್ಟೊಂದು ಮಿಸ್ ಫಿಲ್ಡ್ ಹಿಂದೆ ಯಾವತ್ತೂ ನಡೆದಿರಲಿಕ್ಕಿಲ್ಲ. ಮೊದಲು ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚನ್ನು ಕೀಪರ್ ನೆಲಕ್ಕೆ ಚೆಲ್ಲುತ್ತಾನೆ. ರನ್ ಔಟ್ ಮಾಡಲು ಆತ ಥ್ರೋ ಮಾಡಿದಾಗ ಅದನ್ನು ಹಿಡಿದು ಸ್ಟಂಪ್ ಗೆ ಹಚ್ಚಲು ಅಲ್ಲಿ ಯಾರೂ ಇರುವುದಿಲ್ಲ!

ಬೌಲರ್ ತನಗೇನೂ ಸಂಬಂಧ ಇರಲಾರದ ಹಾಗೆ ನಡೆದುಕೊಂಡು ಬರುತ್ತಿರುತ್ತಾನೆ. ಮತ್ತೆ ಈ ಕಡೆಯಿಂದ ಬರುವ ಥ್ರೊ ಹಿಡಿಯುವ ಬೌಲರ್ ಅಲ್ಲೆ ತನ್ನ ಪಕ್ಕದಲ್ಲಿದ್ದ ವಿಕೇಟಿಗೆ ಎಸೆಯುವುದನ್ನು ಬಿಟ್ಟು ಕೀಪರ್ ಎಂಡ್ ಕಡೆ ಅದೂ ಬೇಕಾಬಿಟ್ಟಿ ಎಸೆಯುತ್ತಾನೆ. ಹೀಗೆ ಎಲ್ಲರೂ ಸೇರಿ ಬ್ಯಾಟ್ಸಮನ್ ಗಳಿಗೆ ಬರೊಬ್ಬರಿ ನಾಲ್ಕು ರನ್ ಓಡಲು ಅವಕಾಶ ಮಾಡಿಕೊಡುತ್ತಾರೆ! ವಿಡಿಯೊ ಮೇಲಿದೆ ನೋಡಿ.
-Team Infotrend