Video; ಇಳಿಯಲು ಚೆನ್ನಾಗಿ ಸ್ಟೇರ್ ಕೇಸ್ ಇರುವಾಗ ಈ ವ್ಯಕ್ತಿ ಮಾಡಿದ ಆವಾಂತರ ನೋಡಿ..! ಮೈ ಜುಮ್ ಎನ್ನುತ್ತೆ.
ಕೆಲವರ ಮೈಯಲ್ಲಿ ಯಾವಾಗ? ಏನು? ಎಂಥ ಭೂತ ಸಂಚಾರವಾಗುತ್ತೆ ಹೇಳಲು ಸಾಧ್ಯವಿಲ್ಲ. ಇಂಥ ಜನರು ಸರಳವಾದ ಕೆಲಸವನ್ನು ಸಹ ಇನ್ನಷ್ಟು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳುತ್ತಾರೆ. ಮತ್ತು ಎಲ್ಲರನ್ನು ಆಪತ್ತಿಗೆ ಕೆಡುವುತ್ತಾರೆ. ಇದೇ ವಿಷಯವನ್ನು ದರ್ಶಿಸುವ ವಿಡಿಯೋ ಒಂದನ್ನು ನಿಮ್ಮ ಮುಂದೆ ತಂದಿದ್ದೇವೆ.
ಈ ವಿಡಿಯೋದಲ್ಲಿ ವ್ಯಕ್ತಿ ಮೇಲಿನ ಮಹಡಿಯಿಂದ ಕೆಳಗೆ ಇಳಿಯುವಾಗ ತನ್ನದೇ ಐಡಿಯಾ ಒಂದನ್ನು ವರ್ಕೌಟ್ ಮಾಡಲು ಮುಂದಾಗಿದ್ದಾನೆ. ಪ್ರಸ್ತುತ ವ್ಯಕ್ತಿಯು ಸ್ಟೇರ್ ಕೇಸ್ ಮೇಲಿಂದ ಸರಿಯಾಗಿ ಇಳಿಯುತ್ತಾ ಹೋಗದೇ ಸೈಡ್ ಗ್ರೀಲ್ ಮೇಲೆ ಅಟ್ಯಾಚ್ ಮಾಡಿದ ಸ್ಟೀಲ್ ಪೈಪ್ ಮೇಲಿಂದ ಜಾರುತ್ತಾ ಹೋಗುವ ಹವ್ಯಾಸ ಪೂರೈಸಿಕೊಳ್ಳಲು ಬಯಸಿದ್ದಾನೆ. ತನ್ನ ಈ ಹವ್ಯಾಸವನ್ನು ಪೂರ್ಣಗೊಳಿಸಲು ಹಾಗೆಯೇ ಆಕ್ಟಿವ್ ಸಹ ಆಗಿದ್ದಾನೆ. ಆದರೆ ಇಲ್ಲಿ ಆತನ ಬ್ಯಾಲೆನ್ಸ್ ತಪ್ಪಿದ್ದೇ ತಡ ಸ್ಟೇರ್ ಕೇಸ್ ಮಧ್ಯದಲ್ಲಿರುವ ಗ್ಯಾಪ್ ನಲ್ಲಿ ವ್ಯಕ್ತಿ ಬಿದ್ದಿದ್ದಾನೆ. ಮೇಲೆ ಆತನ ಅದೃಷ್ಟ ಚೆನ್ನಾಗಿಲ್ಲದಿದ್ದರೂ ಕೆಳಗೆ ಮಾತ್ರ ಆತನ ಅದೃಷ್ಟ ಕೊಂಚ ಚೆನ್ನಾಗಿತ್ತು ಎಂದು ಹೇಳಬಹುದು. ಕಾರಣ ವ್ಯಕ್ತಿಯು ಗ್ಯಾಪ್ ನಲ್ಲಿಂದ ನೇರವಾಗಿ ಗ್ರೌಂಡ್ ಫ್ಲೋರ್ ಗೆ ಬೀಳದೆ ಅಲ್ಲಿಯೇ ಕೆಳಗಿನ ಫ್ಲೋರ್ ಗೆ ಬಿದ್ದಿದ್ದಾನೆ. ಮತ್ತು ಆತಂಕದಿಂದ ಪಾರಾಗಿದ್ದಾನೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ಈ ಮೈನಡುಗಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮಿನಲ್ಲಿ 27.7 ಮಿಲಿಯನ್ ಜನರು ವೀಕ್ಷಿಸಿದ್ದಾರಲ್ಲದೆ ಈ ವಿಡಿಯೋಗೆ 1.1 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ದೇವೇಂದ್ರ ಸಿಂಗ್ 1419 ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ.