ಹಾವಿಗೆ ಹೋಡಿಬೇಡ ಅಂದ್ರೂ Sky ತರ ಭರ್ಜರಿ ಷಾಟ್ ಹೊಡೆದೇ ಬಿಟ್ಟ ಭೂಪ; Video ಶೂಟ್ ಮಾಡುವವನ ಅವಸ್ಥೆ 😳 ಒಮ್ಮೆ ನೋಡಿ.

ಹಾವು ಕಂಡರೆ ಸಾಕು ಕೆಲವರಿಗೆ ಸುಮ್ಮನೆ ಕೂಡಲು ಆಗುವುದೇ ಇಲ್ಲ. ತಕ್ಷಣ ಅದಕ್ಕೆ ಏನಾದರೂ ಮಾಡಲು ಮುಂದಾಗುತ್ತಾರೆ. ಅದಕ್ಕೆ ಹೊಡೆಯುವದನ್ನಿ ಅಥವಾ ಹಿಡಿಯುವದನ್ನಿ ಏನೂ ಇಲ್ಲ ಅಂದರೆ ಅದನ್ನು ಉದ್ದನೆಯ ಬಡಿಗೆಯಿಂದ ದೂರ ತಳ್ಳುವದು ಕೊನೆಗೆ ಅಲ್ಲಿಂದ ಹುಚ್ಚೆದ್ದು ಓಡುವದನ್ನಿ ಹೀಗೆ ವಿಧ ವಿಧ ರೀತಿಯಲ್ಲಿ ಜನ ಹಾವಿನೊಂದಿಗೆ ವರ್ತಿಸುತ್ತಾರೆ.

ಇತ್ತೀಚಿನ ಯುವಕರಲ್ಲಿ ಹಾವುಗಳನ್ನು ಹಿಡಿಯುವ ಕ್ರೇಜ್ ತುಂಬಾ ಹೆಚ್ಚಾಗುತ್ತಿದೆ. ಇವರು ಎಂಥ ಹಾವುಗಳನ್ನು ಸಹ ಭೀತಿಯಿಲ್ಲದೆ ಹೇಗೆ ಬೇಕಾದರೂ ಹಿಡಿಯುವ ಕೌಶಲ್ಯವನ್ನು ಕಲಿತು ಕೊಂಡಿರುತ್ತಾರೆ. ಹೀಗಾಗಿ ಯಾವ ಹಾವು ವಿಷಕಾರಿ ಯಾವುದು ಅಲ್ಲ ಎಂಬುದನ್ನು ಸರಿಯಾಗಿ ತಿಳಿದುಕೊಂಡಿರುತ್ತಾರೆ.

ಸದ್ಯ ಈ ವಿಡಿಯೋದಲ್ಲಿ ಮಿತ್ರರೆಲ್ಲ ಕೂಡಿಕೊಂಡು ಕುಳಿತಾಗ ರಸ್ತೆಯ ಮೇಲೊಂದು ಉದ್ದನೆಯ ಹಾವು ಕಾಣಿಸಿದೆ. ಹಾವು ಕಾಣಿಸಿದರೆ ಮುಗಿದು ಹೋಯ್ತು, ಮೊದಲೇ ಹೇಳಿದ ಹಾಗೆ ಹಾವು ಕಂಡರೆ ನಮ್ಮ ಜನ ಏನಾದರೂ ಮಾಡಲು ಮುಂದಾಗುತ್ತಾರೆ ಅಂತ? ಥೇಟ್ ಅದೇ ತರ ಒಬ್ಬ ಹುಡುಗ ಕಸಬರಿಗೆ ತೆಗೆದುಕೊಂಡು ಹಾವನ್ನು ಅದರಲ್ಲಿ ಮುಗುಚಲು ಹೊರಟಿದ್ದಾನೆ. ಆದರೆ ಚಪಲ ಹಾವು ಕಸಬರಿಗೆಯಿಂದ ತಪ್ಪಿಸಿಕೊಂಡು ವಾಪಸ್ ಆತನನ್ನೇ ಕಚ್ಚಲು ಮುಂದಾಗಿದೆ. ಹಠಾತ್ ಹಾವು ತನ್ನ ಮೇಲೆ ಅಟ್ಯಾಕ್ ಮಾಡುತ್ತಿರುವುದನ್ನು ಕಂಡ ಯುವಕ ಒಮ್ಮೆಲೆ ತಬ್ಬಿಬ್ಬಾಗಿದ್ದಾನೆ. ಹುಡುಗ ತಬ್ಬಿಬ್ಬಾಗಿ ಒಂದು ಬೇರೆಯೇ ಕೆಲಸ ಮಾಡಿ ಬಿಡುತ್ತಾನೆ. ಇಲ್ಲಿ ತನ್ನನ್ನು ಹಾವಿನಿಂದ ರಕ್ಷಿಸಿಕೊಳ್ಳಲು ಮತ್ತಷ್ಟು ವೇಗವಾಗಿ ಆಕ್ಟಿವ್ ಆಗಿದ್ದಾನೆ. ಕೈಯಲ್ಲಿದ್ದ ಕಸಬರಿಗೆಯನ್ನು ಬ್ಯಾಟ್ ತರ ಯೂಸ್ ಮಾಡಿದ್ದಾನೆ. ಅಷ್ಟೇ ಅಲ್ಲ ಕ್ರಿಕೆಟ್ ನಲ್ಲಿ ಸದ್ಯ ಎಲ್ಲರ ಗಮನ ಸೆಳೆಯುತ್ತಿರುವ ರೋಚಕ ಆಟಗಾರ ಸೂರ್ಯಕುಮಾರ್ ಯಾದವ್ ತರ ಜೋರಾಗಿ ಷಾಟ್ ಹೊಡೆದಿದ್ದಾನೆ. ಎಡವಟ್ಟು ಆದದ್ದು ಇಲ್ಲಿಯೇ…..ಆತ ಕಸಬರಿಗೆಯಿಂದ ಹೊಡೆದ ಜೋರಾದ ಷಾಟ್ ನಿಂದಾಗಿ ಹಾವು ನೇರವಾಗಿ ಮೊಬೈಲ್ ನಿಂದ ವಿಡಿಯೋ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಮೈಮೇಲೆ ಬೀಳಬೇಕೆ?

ಈ ಆಕಸ್ಮಿಕವಾದ ಘಟನೆಯಿಂದಾಗಿ ಮೊಬೈಲ್ ಹಿಡಿದ ವ್ಯಕ್ತಿಯ ಹೌಹಾರಿದೆ. ಇಷ್ಟಾದರೂ ಕೈಯಲ್ಲಿಯ ಮೊಬೈಲ್ ಬಿಡದೆ ಒಂದೇ ಸಮನೆ ಕಿರುಚುತ್ತಾ ಮೈ ಮೇಲೆ ಬಿದ್ದ ಹಾವಿನಿಂದ ರಕ್ಷಿಸಿಕೊಳ್ಳಲು ಒಂದೇ ಸಮನೆ ಹೆಣಗಾಡಿದ್ದಾನೆ. ಈ ಸಂದರ್ಭದಲ್ಲಿಯ ವಿಡಿಯೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಆತನ ಕಿರಿಚುವ ದ್ವನಿಯೂ ಸಹ ಹಿಂದಿನಿಂದ ಕೇಳಿ ಬರುತ್ತದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮಿನಲ್ಲಿ bu.qizziq ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ದಾಖಲೆಯ 20 ಮಿಲಿಯನ್ ವೀಕ್ಷಣೆ ಪಡೆದಿದ್ದು ಒಂದು ಮಿಲಿಯನ್ ಗಿಂತ ಹೆಚ್ಚಿಗೆ ಮೆಚ್ಚುಗೆಯನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಅನೇಕ ರೀತಿಯಲ್ಲಿ ಹೊರಹಾಕಿದ್ದಾರೆ. ಒಬ್ಬ ಯೂಸರ್ ಬ್ಯಾಟಿಂಗ್ ಸ್ಕಿಲ್ಸ್ ಈತನಿಂದ ಕಲಿಯಿರಿ ಎಂದಿದ್ದಾನೆ. ಇನ್ನೊಬ್ಬ ಇದು ನಿಜವಾಗಿಯೂ ತಮಾಷೆಯಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ. ಮತ್ತೊಬ್ಬ ಯೂಸರ್ ನಾನೇನಾದರೂ ಇದ್ದರೆ ನನ್ನ ಕೈಯಲ್ಲಿಯ ಮೊಬೈಲ್ ಮೊದಲು ಎಸೆದು ಬಿಡುತ್ತಿದ್ದೆ ಎಂದಿದ್ದಾನೆ.