ಟೆಸ್ಟ್ ತಂಡಕ್ಕೆ ಎಂದಿಗೂ ಹಿಂದಿರುಗದ 3 ಭಾರತೀಯ ಬ್ಯಾಟ್ಸ್ಮನ್ಗಳು ಇವರು
ಭಾರತ ಅಥವಾ ಇನ್ನಾವುದೇ ದೇಶದ ಕ್ರಿಕೆಟಿಗನಾಗಿರಲಿ, ಆತನ ಆಸೆ – ಕನಸು ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಆಡಬೇಕೆಂಬುದಾಗಿರುತ್ತದೆ. ನಿಜವಾದ ಕ್ರಿಕೇಟ್ ಟೆಸ್ಟ್ ಈ ಸ್ವರೂಪದಲ್ಲಿದೆ ಎಂದೇ ಎಲ್ಲರೂ ಭಾವಿಸಿರುವುದು. ಟೆಸ್ಟ್ ಕ್ರಿಕೆಟ್ ಆಡುವ ಕನಸಿನೊಂದಿಗೆ ಬರುವ ಅನೇಕ ಆಟಗಾರರಿದ್ದಾರೆ, ಆದರೆ ಅವರ ಕನಸು ಈಡೇರುವುದು ಸುಲಭವಲ್ಲ.
ಒಮ್ಮೆ ಅವಕಾಶ ಸಿಕ್ಕಿತೆಂದರೆ ಅನೇಕ ಆಟಗಾರರು ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾರೆ, ಹಾಗೆಯೇ ಅನೇಕ ಆಟಗಾರರು ಅವಕಾಶದ ಲಾಭ ಪಡೆಯಲು ವಿಫಲರಾಗುತ್ತಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸುದೀರ್ಘವಾಗಿ ಆಡುವವರ ಸಂಖ್ಯೆ ಇತ್ತೀಚೆಗೆ ತೀರ ಕಮ್ಮಿಯಾಗುತ್ತಿದೆ.
ಟೆಸ್ಟ್ ಕ್ರಿಕೆಟ್ಗೆ ಬಂದ ನಂತರ ಉತ್ತಮವಾಗಿ ಆಡಿದರೂ, ಮಧ್ಯದಲ್ಲಿ ಅವರ ಕೆಲವು ಕಳಪೆ ಪ್ರದರ್ಶನಗಳು ಅವರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿದವು. ಆ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಮಾಡುವಾಗ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿದರು ಆದರೆ ಕೆಲವು ಸಲ ವಿಫಲವಾದರು.
ಇವರ ಹಿಂದಿನ ಸಾಲಿನಲ್ಲಿ ಇನ್ನೂ ಅನೇಕ ಹೆಸರುಗಳು ಇದ್ದಿದ್ದರಿಂದ ಕೆಲವೇ ಕಳಪೆ ಪ್ರದರ್ಶನಗಳು ತಂಡದಿಂದ ಹೊರಬರುವ ದಾರಿ ತೋರಿಸುತ್ತದೆ. ಟೀಮ್ ಇಂಡಿಯಾದ ಅನೇಕ ಆಟಗಾರರಿಗೆ ಇದು ಸಂಭವಿಸಿದೆ. ಈ ಲೇಖನದಲ್ಲಿ ಭಾರತೀಯ ತಂಡದ ಅಂತಹ ಮೂವರು ಬ್ಯಾಟ್ಸ್ ಮನ್ ಗಳನ್ನು ಉಲ್ಲೇಖಿಸಲಾಗಿದೆ, ಅವರು ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ಗೆ ಹಿಂದಿರುಗುವುದಿಲ್ಲ.

ಮುರಳಿ ವಿಜಯ್ :
ಪಾದಾರ್ಪಣೆ ಮಾಡಿದ ನಂತರ, ಈ ಬ್ಯಾಟ್ಸ್ಮನ್ ಹಲವು ವರ್ಷಗಳ ಕಾಲ ಉತ್ತಮ ಆಟವನ್ನು ಪ್ರದರ್ಶಿಸಿದರು ಮತ್ತು 2018 ರ ಆಸ್ಟ್ರೇಲಿಯಾ ಪ್ರವಾಸದವರೆಗೂ ತಂಡದೊಂದಿಗೆ ಇದ್ದರು. ಮುರಳಿ ವಿಜಯ್ ಆ ಸಮಯದಲ್ಲಿ ಕೆಟ್ಟ ಫಾರ್ಮ್ ನಲ್ಲಿ ಇದ್ದರು, ಅವರು ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದರು.
ಇದರ ನಂತರ ಅವರು ತಂಡದಿಂದ ಹೊರಬಂದರು. 61 ಟೆಸ್ಟ್ ಪಂದ್ಯಗಳಲ್ಲಿ ಸುಮಾರು 4 ಸಾವಿರ ಟೆಸ್ಟ್ ರನ್ ಗಳಿಸಿರುವ ಮುರಳಿ ವಿಜಯ್ 12 ಶತಕಗಳನ್ನು ಗಳಿಸಿದ್ದಾರೆ. ಅವರನ್ನು ಕೈಬಿಟ್ಟ ನಂತರ ಅವರ ಸ್ಥಾನ ತುಂಬಿತು ಮತ್ತು ಮತ್ತೆ ಖಾಳಿಯಾಗಲೇ ಇಲ್ಲ. 37 ವರ್ಷದ ಮುರಳಿ ಅವರಿಗೆ ಇನ್ನು ಮುಂದೆ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಸಾಧ್ಯವಿಲ್ಲ.
ಕರುಣ್ ನಾಯರ್ :
ಈ ಬ್ಯಾಟ್ಸ್ಮನ್ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಆಡುವಾಗ ಟ್ರಿಪಲ್ ಸೆಂಚುರಿ ಭಾರಿಸಿದಾಗ, ಸುದೀರ್ಘ ಟೆಸ್ಟ್ ಕ್ರಿಕೇಟ್ ಆಡುತ್ತಾರೆ ಎಂದು ಎಲ್ಲರೂ ಎಣಿಸಿದ್ದರು. ಆದರೆ ಹಾಗಾಗಲಿಲ್ಲ. ಕೇವಲ 6 ಟೆಸ್ಟ್ಗಳ ನಂತರ ಅವರನ್ನು ಕೈಬಿಡಲಾಯಿತು. ಈ ಸಮಯದಲ್ಲಿ ಅವರು 374 ರನ್ ಗಳಿಸಿದರು ಮತ್ತು ಅವರ ಗರಿಷ್ಠ ಸ್ಕೋರ್ 303 ರನ್ ಆಗಿತ್ತು. ಕರುಣ್ ನಾಯರ್ ಅವರಿಗೆ 29 ವರ್ಷ ವಯಸ್ಸಾಗಿದೆ ಆದರೆ ಈಗ ಅವರು ಮತ್ತೆ ಟೆಸ್ಟ್ ತಂಡದ ಭಾಗವಾಗಲು ಸಾಧ್ಯವಿಲ್ಲ, ಏಕೆಂದರೆ ಅವರ ಸ್ಥಾನಕ್ಕೆ ಹಲವು ಸ್ಪರ್ದಿಗಳಿದ್ದಾರೆ.

ಶಿಖರ್ ಧವನ್ :
ಶಿಖರ್ ಧವನ್ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಗಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸ್ವಲ್ಪ ಸಮಯದವರೆಗೆ ಅವರು ತಂಡದ ಆರಂಭಿಕ ಆಟಗಾರರಾಗಿ ಆಡಿದರು ಮತ್ತು ಉತ್ತಮವಾಗಿ ಆಡಿದರು. ಆದರೆ 2018 ರ ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಫಾರ್ಮ್ ನಂತರ ಅವರು ಹೊರಬಂದರು.
ಅವರು ವೃತ್ತಿಜೀವನದಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್ ಗಳಿಸಿದರು ಮತ್ತು 7 ಶತಕಗಳನ್ನು ಗಳಿಸಿದ್ದಾರೆ. ಧವನ್ 35 ವರ್ಷ ದಾಟಿದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಓಪನರ್ ಜಾಗ ಖಾಲಿ ಇಲ್ಲ. ಅವರಿಗೆ ಈಗ ಅವಕಾಶ ಸಿಗುವುದು ಸಾಧ್ಯವಿಲ್ಲ ಮಾತು.
-Team Infotrend