ಬಾಂಗ್ಲಾದೇಶದಲ್ಲಿ 3 ಲೇನ್ ರೈಲ್ವೆ ಟ್ರ್ಯಾಕ್ ಇರುತ್ತದೆ, ಯಾಕ್ ಗೊತ್ತಾ?

ಭಾರತದಲ್ಲಿ ನೀವು ನಾವು ಎಲ್ಲರೂ ಸರ್ವೇ ಸಾಮಾನ್ಯವಾಗಿ ನೋಡಿರುವ ಹಾಗೆ ಎರಡು ಲೇನ್ ರೈಲ್ವೆ ಟ್ರ್ಯಾಕ್ ಗಳಿವೆ, ಒಂದೇ ಅಂತರದಲ್ಲಿ ಸಾಗುವ ಎರಡು ಲೇನ್ ಗಳ ಮೇಲೆಯೇ ರೈಲುಗಳು ಸಾಗುತ್ತವೆ. ಆದರೆ ಪಕ್ಕದ ಬಾಂಗ್ಲಾದೇಶದಲ್ಲಿ ಈ ರೈಲ್ವೆ ಟ್ರ್ಯಾಕ್ ಗಳು ಮೂರು ಲೇನ್ ಇರುತ್ತವೆ, ಅಲ್ಲಿರುವ ಮೂರು ಲೇನ್ ಗಳ ಹಿಂದಿನ ಕಾರಣವಾದರೂ ಏನೂ ಎಂದು ನೋಡೋಣ ಬನ್ನಿ…

ಇಲ್ಲಿನ ಒಟ್ಟು ರೈಲ್ವೆ ಟ್ರ್ಯಾಕ್ ಗಳ ಉದ್ದ ನೋಡುವುದಾದರೆ, 2885 ಕಿಲೋಮೀಟರ್ ಇದೆ. ಇದರಲ್ಲಿ 1838 ಕಿಲೋಮೀಟರ್ ಮೀಟರ್ ಗೇಜ್ ಟ್ರ್ಯಾಕ್ ಇದ್ದರೆ, 682 ಕಿಲೋಮೀಟರ್ ಬ್ರಾಡ್ ಗೇಜ್ ಟ್ರ್ಯಾಕ್ ಇದೆ, ಹಾಗೂ ಕೇವಲ 364 ಕಿಲೋಮೀಟರ್ ಡಬಲ್ ಬ್ರಾಡ್ ಗೇಜ್ ಟ್ರ್ಯಾಕ್ ಇದೆ.

ನಿಮಗೆ ಆಶ್ಚರ್ಯ ಎನಿಸಬಹುದು ಇಡೀ ಜಗತ್ತಿನಲ್ಲಿ ಸದ್ಯ ಡಬಲ್ ಬ್ರಾಡ್ ಗೇಜ್ ರೈಲ್ವೆ ಟ್ರ್ಯಾಕ್ ಬಳಸುತ್ತಿರುವಾಗ ಬಾಂಗ್ಲಾ ದೇಶದಲ್ಲೇಕೆ ಇನ್ನೂವರೆಗೂ ಮೀಟರ್ ಗೇಜ್ ರೈಲ್ವೆ ಟ್ರ್ಯಾಕ್ ಇದೆ ಎಂದು. ಆದರೆ ಅದರ ಹಿಂದಿನ ಕಾರಣವೆಂದರೆ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಹಾಗೂ ಡಬಲ್ ಬ್ರಾಡ್ ಗೇಜ್ ಗೆ ರೈಲ್ವೆ ಟ್ರ್ಯಾಕ್ ನ್ನು ಬದಲಾಯಿಸಬೇಕಾದರೆ ಕೇವಲ ಟ್ರ್ಯಾಕ್ ಗಳನ್ನಷ್ಟೇ ಅಲ್ಲದೇ ಕೋಚ್ ಗಳು ಹಾಗೂ ಲೋಕೋಮೋಟಿವ್ ಅಷ್ಟೇ ಅಲ್ಲದೇ ಇನ್ನುಳಿದ ಎಲ್ಲಾ ಅಂಶಗಳನ್ನು ಕೂಡ ಬದಲಾಯಿಸಬೇಕಾಗುತ್ತದೆ.

ಆದರೆ ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತವಲ್ಲದ ಬಾಂಗ್ಲಾ ರೈಲ್ವೆ ಇಲಾಖೆಗೆ ಒಂದೇ ಸಾರಿ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಬದಲಾಯಿಸುವುದು ಬಹಳ ಕಷ್ಟದ ಕೆಲಸವಾಗಿತ್ತು, ಆದ್ದರಿಂದ ಇತ್ತೀಚೆಗಷ್ಟೇ ಬಾಂಗ್ಲಾ ರೈಲ್ವೆ ಇಲಾಖೆ ತುಂಬಾ ಕಷ್ಟಪಟ್ಟು ಡಬಲ್ ಬ್ರಾಡ್ ಗೇಜ್ ಅಳವಡಿಸಲು ಶುರು ಮಾಡಿದೆ.

ಈ ಡಬಲ್ ಬ್ರಾಡ್ ಗೇಜ್ ನ ವಿಶೇಷತೆ ಏನೆಂದರೆ, ಈ ಟ್ರ್ಯಾಕ್ ಮೇಲೆ ಎರಡು ಬೇರೆ ಬೇರೆ ಗೇಜ್ ಹೊಂದಿರುವ ರೈಲ್ವೆಗಳನ್ನು ಚಲಾಯಿಸಲು ಸಾಧ್ಯವಾಗುವಷ್ಟು ಕ್ಷಮತೆ ಹೊಂದಿರುತ್ತವೆ. ಹೀಗಾಗಿ ಅಲ್ಲಿ ಮೂರು ಟರ್ಯಾಕ್ ಇವೆ. ಇದನ್ನು ಮಿಕ್ಸ್ ಗೇಜ್ ಎಂದು ಕೂಡ ಕರೆಯುತ್ತಾರೆ. ಈ ಒಂದು ಡಬಲ್ ಗೇಜ್ ಅಥವಾ ಮಿಕ್ಸ್ ಗೇಜ್ ರೈಲ್ವೆ ಟ್ರ್ಯಾಕ್ ಮೇಲೆ ಮೂರು ರೈಲುಗಳನ್ನು ಚಲಾಯಿಸಬಹುದು. ಎರಡು ಬೇರೆ ಬೇರೆ ಗೇಜ್ ಹೊಂದಿರುವ ರೈಲುಗಳು ಮತ್ತೊಂದು ಕಾಮನ್ ರೈಲನ್ನು ಕೂಡ ಚಲಾಯಿಸಬಹುದು.

ಇನ್ನೂ ಈ ಮೂರು ಲೇನ್ ನ ಟ್ರ್ಯಾಕ್ ಗಳಲ್ಲಿ ಒಂದು ಲೇನ್ ರೈಲುಗಳಿಗೆ ವಿದ್ಯುತ್ ಸಪ್ಲೈ ಮಾಡಲು ಹಾಗೂ ಆ ಮುಖ್ಯ ರೈಲ್ವೆ ಹಳಿಗಳನ್ನು ಸರಿಯಾಗಿ ಇಡಲು ಸಹಾಯಕವಾಗಿರುತ್ತದೆ. ಇನ್ನೂ ಈ ಡುಯಲ್ ಗೇಜ್ ಹಳಿಗಳಲ್ಲಿ ಫ್ಲಾಟ್ಫಾರ್ಮ್ ನ ಎತ್ತರ ಕಡಿಮೆ ಇರುತ್ತದೆ ಏಕೆಂದರೆ ಇಲ್ಲಿ ಎರಡು ರೀತಿಯ ಬೇರೆ ಬೇರೆ ಗೇಜ್ ಗಳನ್ನು ಹೊಂದಿರುವ ರೈಲುಗಳನ್ನು ನಿಲ್ಲಿಸಲಾಗುತ್ತದೆ.

ಇಂತಹ 3 ಲೇನ್ ರೈಲ್ವೆ ಹಳಿಗಳು ಬಾಂಗ್ಲಾದೇಶವಷ್ಟೇ ಅಲ್ಲದೇ ಇನ್ನೂ ಕೆಲವು ದೇಶಗಳಲ್ಲೂ ಕೂಡ ಇಂದಿಗೂ ಕೂಡ ಬಳಕೆಯಲ್ಲಿವೆ.
-Team Infotrend